ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟದ ಅಮಾನತನ್ನು ಜುಲೈ 31ನೇ ತಾರೀಕಿನ ತನಕ ವಿಸ್ತರಿಸಲಾಗಿದೆ ಎಂದು ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಶುಕ್ರವಾರ ತಿಳಿಸಿದೆ. ಆದರೆ ಆಯ್ದ ಹಾಗೂ ಈಗಾಗಲೇ ನಿಗದಿ ಆದ ಕೆಲವು ಮಾರ್ಗಗಳಲ್ಲಿ ಮಾತ್ರ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು. ಅದು ಆಯಾ ಸನ್ನಿವೇಶ ಹಾಗೂ ಪ್ರಕರಣದ ಆಧಾರದಲ್ಲಿ ಭಿನ್ನವಾಗುತ್ತದೆ ಎಂದು ತಿಳಿಸಲಾಗಿದೆ.
ನಿಗದಿಯಾದ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟವನ್ನು ಕೊರೊನಾದ ಕಾರಣಕ್ಕೆ ಮಾರ್ಚ್ 23ನೇ ತಾರೀಕಿನಂದು ಅಮಾನತು ಮಾಡಲಾಗಿತ್ತು. ಆ ನಂತರ ಜೂನ್ 26ನೇ ತಾರೀಕಿನಂದು ಸುತ್ತೋಲೆ ಹೊರಡಿಸಿ, ಜುಲೈ 15ನೇ ತಾರೀಕಿನ ತನಕ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟ ಅಮಾನತು ಮಾಡುವುದಾಗಿ ತಿಳಿಸಲಾಗಿತ್ತು.

ಇದೀಗ ಶುಕ್ರವಾರ (ಜುಲೈ 3, 2020) ಆದೇಶ ಹೊರಡಿಸಿ, ಅಮಾನತು ಅವಧಿ ವಿಸ್ತರಣೆ ಮಾಡಿರುವುದಾಗಿ ತಿಳಿಸಿದೆ. ಏರ್ ಇಂಡಿಯಾ ಹಾಗೂ ಇತರ ಖಾಸಗಿ ವಿಮಾನ ಯಾನ ಸಂಸ್ಥೆಗಳು ವಂದೇಭಾರತ್ ಅಭಿಯಾನದ ಅಡಿಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ. ಆದರೆ ಅದು ನಿಗದಿತ ವೇಳಾಪಟ್ಟಿಯಲ್ಲಿ ಅಲ್ಲ. ವಿದೇಶದಲ್ಲಿ ಸಿಲುಕಿಕೊಂಡವರನ್ನು ಭಾರತಕ್ಕೆ ಕರೆತರುವ ಕಾರ್ಯಾಚರಣೆ ಇದು. ಕಳೆದ ಮೇ 6ನೇ ತಾರೀಕಿನಿಂದ ಕೇಂದ್ರ ಸರ್ಕಾರ ಇದನ್ನು ಆರಂಭಿಸಿದೆ.
More From GoodReturns

LPG Crisis: ಭಯಪಡಬೇಡಿ, ಅವಸರದಲ್ಲಿ ಬುಕ್ ಮಾಡ್ಬೇಡಿ; ಗೃಹಬಳಕೆಯ ಎಲ್ಪಿಜಿ ಬಳಕೆದಾರರಿಗೆ ಕೇಂದ್ರ ಭರವಸೆ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Natural Gas Supply: ದೇಶದಲ್ಲಿ ಅನಿಲ ಕೊರತೆ..ಹೊಸ ಆದೇಶದ ಪ್ರಕಾರ ಯಾರಿಗೆ ಮೊದಲ ಆದ್ಯತೆ ಎಂದು ತಿಳಿಯಿರಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?



Click it and Unblock the Notifications