ಷೇರು ಮಾರುಕಟ್ಟೆ ಕುಸಿತ: 4.47 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಹೂಡಿಕೆದಾರರು

ಜಾಗತಿಕ ಷೇರು ಮಾರುಕಟ್ಟೆ ದುರ್ಬಲವಾಗಿದೆ. ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡ ಹಿನ್ನೆಲೆ ಶುಕ್ರವಾರ ಹೂಡಿಕೆದಾರರು 4.47 ಲಕ್ಷ ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. 30 ಷೇರು ಬಿಎಸ್‌ಇ ಬೆಂಚ್‌ಮಾರ್ಕ್ 866.65 ಪಾಯಿಂಟ್‌ಗಳು ಅಥವಾ ಶೇಕಡಾ 1.56 ರಷ್ಟು ಇಳಿದು 54,835.58 ಕ್ಕೆ ವಹಿವಾಟು ಕೊನೆ ಮಾಡಿದೆ.

ದಿನದ ಅವಧಿಯಲ್ಲಿ, ಇದು 1,115.48 ಪಾಯಿಂಟ್‌ಗಳು ಅಥವಾ ಶೇಕಡಾ 2 ರಷ್ಟು ಕುಸಿದು 54,586.75 ಕ್ಕೆ ತಲುಪಿದೆ. ಈಕ್ವಿಟಿಗಳಲ್ಲಿನ ಅತ್ಯಂತ ಕುಸಿತ ಕಂಡಿದೆ. ಬಿಎಸ್‌ಇ-ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಕ್ಯಾಪಿಟಲ್ 4,47,172.57 ಕೋಟಿ ರೂಪಾಯಿಯಿಂದ ಕುಸಿದು 2,55,17,716.80 ಕೋಟಿ ರೂಪಾಯಿಗೆ ತಲುಪಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 2,074.74 ಕೋಟಿ ಮೌಲ್ಯದ ಷೇರುಗಳನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ಡೇಟಾದಿಂದ ತಿಳಿದು ಬಂದಿದೆ. ಏಷ್ಯಾದ ಇತರೆಡೆಗಳಲ್ಲಿ, ಹಾಂಗ್ ಕಾಂಗ್, ಶಾಂಘೈ ಮತ್ತು ಕೊರಿಯಾದಲ್ಲಿನ ಮಾರುಕಟ್ಟೆಗಳು ಗಮನಾರ್ಹವಾಗಿ ಕುಗ್ಗಿದೆ. ಟೋಕಿಯೋದಲ್ಲಿ ಮಾತ್ರ ಷೇರು ಮಾರುಕಟ್ಟೆ ಏರಿಕೆಗೊಂಡು ವಹಿವಾಟು ಅಂತ್ಯಮಾಡಿದೆ.

 ಷೇರು ಮಾರುಕಟ್ಟೆ ಕುಸಿತ: 4.47 ಲಕ್ಷ ಕೋಟಿ ರೂಪಾಯಿ ನಷ್ಟ

ಯಾವೆಲ್ಲಾ ಷೇರುಗಳು ಕುಸಿತ, ಯಾವುದು ಏರಿಕೆ?

ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್, ಬ್ಯಾಂಕಿಂಗ್ ವಲಯದಲ್ಲಿ ಆರ್‌ಬಿಎಲ್ ಬ್ಯಾಂಕ್, ಎಯು ಸ್ಮಾಲ್ ಫಿನಾನ್ಸ್ ಬ್ಯಾಂಕ್ ಲಿಮಿಟೆಡ್, ಆಕ್ಸಿಕ್ ಬ್ಯಾಂಕ್ ಲಿಮಿಟೆಡ್, ಉಜ್ಜೀವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ ಲಿಮಿಟೆಡ್, ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್, ಫೆಡರಲ್ ಬ್ಯಾಂಕ್ ಲಿಮಿಟೆಡ್, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್ ಕುಸಿತ ಕಂಡಿದೆ. ಇನ್ನು ಹೆಚ್‌ಸಿಎಲ್ ಟೆಕ್, ವಿಪ್ರೋ, ವೇದಾಂತ, ಮಾರುತಿ ಸುಜುಕಿ, ಇನ್ಫೋಸಿಸ್ ಆರಂಭಿಕ ವಹಿವಾಟಿನಲ್ಲಿಯೇ ಹಿನ್ನಡೆ ಕಂಡಿದೆ. ಎಂ ಆಂಡ್ ಎಂ ಹಾಗೂ ಆರ್‌ಐಎಲ್ ಮಾತ್ರ ಕೊಂಚ ಚೇತರಿಕೆ ಕಂಡಿದೆ.

ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ನೆಸ್ಲೆ, ವಿಪ್ರೋ, ಇನ್ಫೋಸಿಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್ ಮೊದಾಲದವರು ಕುಸಿತ ಕಂಡಿದೆ. ಟೆಕ್ ಮಹೀಂದ್ರಾ, ಪವರ್‌ಗ್ರೀಡ್, ಐಟಿಸಿ, ಎಸ್‌ಬಿಐ, ಎನ್‌ಟಿಪಿಸಿ ಮೊದಲಾದ ಕಂಪನಿಗಳ ಷೇರುಗಳು ವೃದ್ಧಿಯಾಗಿದೆ.

ಬಹುತೇಕ ಎಲ್ಲಾ ಬಿಎಸ್‌ಇ ವಲಯದ ಸೂಚ್ಯಂಕಗಳು ಕೆಳಮಟ್ಟಕ್ಕೆ ಇಳಿದು ವಹಿವಾಟು ಕೊನೆ ಮಾಡಿದೆ. ರಿಯಾಲ್ಟಿ ಶೇಕಡಾ 3.53 ರಷ್ಟು ಕುಸಿಯಿತು, ನಂತರ ಲೋಹ (ಶೇ. 3.10), ಮೂಲ ವಸ್ತುಗಳು (ಶೇ. 2.80), ಗ್ರಾಹಕ ಬೆಲೆಬಾಳುವ ವಸ್ತುಗಳು (ಶೇ. 2.41) ಮತ್ತು ಐಟಿ (ಶೇ. 2.27) ಕುಸಿದಿದೆ. 2,519 ಷೇರುಗಳು ಕುಸಿತ ಕಂಡರೆ, 835 ಏರಿದ್ದು 106 ಬದಲಾಗದೆ ಉಳಿದಿವೆ.

ಇಂದಿನ ಸೆನ್ಸೆಕ್ಸ್ ಕುಸಿತದ ಹಿಂದಿನ ಪ್ರಮುಖ ಕಾರಣವೆಂದರೆ ಹಣದುಬ್ಬರವನ್ನು ನಿಯಂತ್ರಿಸಲು ದೇಶದ ಕೇಂದ್ರ ಬ್ಯಾಂಕ್ ಯುಎಸ್ ಫೆಡರಲ್ ರಿಸರ್ವ್ 50ಬಿಪಿಎಸ್ ಬಡ್ಡಿದರ ಹೆಚ್ಚಳ ಮಾಡಿರುವುದು ಆಗಿದೆ. ಏರುತ್ತಿರುವ ಬಡ್ಡಿದರಗಳು ಜಾಗತಿಕ ಆರ್ಥಿಕ ಬೆಳವಣಿಗೆಗೆ ತೊಂದರೆ ಉಂಟು ಮಾಡಬಹುದು ಎಂದು ಹೂಡಿಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಮಾರುಕಟ್ಟೆಯು ಕುಸಿತವನ್ನು ಕಾಣುತ್ತಿದೆ. ಯುಎಸ್‌ ಫೆಡರಲ್ ರಿಸರ್ವ್ ಹಾಗೂ ಇತರ ಕೆಲವು ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರವನ್ನು ಎದುರಿಸಲು ಬಡ್ಡಿದರವನ್ನು ಯೋಜಿಸಿದ್ದಕ್ಕಿಂತ ಅಧಿಕ ಏರಿಕೆ ಮಾಡಬಹುದು ಎಂದು ಮಾರುಕಟ್ಟೆ ಹೂಡಿಕೆದಾರರು ಆತಂಕ ಹೊಂದಿದ್ದಾರೆ. ಈ ಬೆನ್ನಲ್ಲೇ ಮಾರುಕಟ್ಟೆಯು ಪಾತಾಳಕ್ಕೆ ಇಳಿಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+