ಭಾರತದ ರೈಲ್ವೆ ಇಲಾಖೆ ಜಗತ್ತಿನಾದ್ಯಂತ ಹೆಸರು ಮಾಡಿದೆ. ಹಾಗೇ ಉತ್ತಮ ಸೇವೆ ಕೂಡ ಒದಗಿಸುತ್ತಿದೆ. ಹೀಗಾಗಿ ರೈಲ್ವೆ ಷೇರುಗಳ ಮೇಲೆ ಹೂಡಿಕೆ ಮಾಡಲು ಜನ ಇದೀಗ ಮುಂದೆ ಬರುತ್ತಿದ್ದಾರೆ. ಹೂಡಿಕೆದಾರರಿಗೂ ಭಾರತೀಯ ರೈಲ್ವೆ ಷೇರುಗಳು ಭರ್ಜರಿ ಲಾಭಾಂಶವನ್ನು ಕೊಡುತ್ತಿವೆ. ಹೂಡಿಕೆದಾರರ ಜೇಬು ತುಂಬಿಸುವ ಜೊತೆ ಷೇರು ಮಾರುಕಟ್ಟೆಯಲ್ಲಿ ಚಿನ್ನದ ಮೊಟ್ಟೆ ಇಡುತ್ತಿವೆ ರೈಲ್ವೆ ಷೇರುಗಳು.
ರೈಲ್ವೆ ಸ್ಟಾಕ್‌ಗಳಿಗೆ ಬೇಡಿಕೆ ಏಕೆ?
ಭಾರತದಲ್ಲಿ ಪಟ್ಟಿ ಮಾಡಲಾದ ಕೆಲವೇ ಕೆಲವು ರೈಲ್ವೆ ಷೇರುಗಳು ಇವೆ. ಹೀಗಿದ್ದರೂ ರೈಲ್ವೆ ಷೇರುಗಳಿಗೆ ಬೇಡಿಕೆ ಕಡಿಮೆಯಾದಂತೆ ಕಾಣುತ್ತಿಲ್ಲ. ಷೇರು ಮಾರುಕಟ್ಟೆಗಳಲ್ಲಿ ಏನೇ ಆಗಲಿ, ರಿಟೇಲ್ ಹೂಡಿಕೆದಾರರು ಪ್ರತಿಬಾರಿ, ಉತ್ತಮ ರೈಲ್ವೆ ಷೇರು ಹುಡುಕುತ್ತಿರುತ್ತಾರೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್‌ನ (ಐಆರ್‌ಸಿಟಿಸಿ) ಇತ್ತೀಚಿನ ಬೆಳವಣಿಗೆಯು ಇದಕ್ಕೆ ಉದಾಹರಣೆ ಎನ್ನಬಹುದು.

ಐಆರ್‌ಸಿಟಿಸಿ ಷೇರು 2019 ರ ಅಕ್ಟೋಬರ್ 14 ರಂದು ಪ್ರತಿ ಷೇರಿಗೆ 320 ರೂಪಾಯಿಗಳ ವಿತರಣಾ ಬೆಲೆಯ ವಿರುದ್ಧ 644 ರೂಪಾಯಿಗೆ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತ್ತು. ಅಂದಿನಿಂದ, ಷೇರು 2021 ರ ಅಕ್ಟೋಬರ್ 19 ರಂದು ಸಾರ್ವಕಾಲಿಕ ಗರಿಷ್ಠ ಮಟ್ಟ ಅಂದರೆ 6,393 ರೂಪಾಯಿಗಳನ್ನು (ಸ್ಟಾಕ್ ವಿಭಜನೆಗೆ ಸರಿಹೊಂದಿಸಲಾಗಿದೆ) ತಲುಪಿದೆ. ಇದು ಕೇವಲ 2 ವರ್ಷಗಳಲ್ಲಿ ಶೇಕಡ 893 ರಷ್ಟು ರಿಟರ್ನ್ಸ್ ನೀಡಿದೆ. ಹಾಗಾದರೆ ಇದೀಗ ಭಾರತೀಯ ಷೇರು ಮಾರುಕಟ್ಟೆಯಲ್ಲಿರುವ ರೈಲ್ವೆ ಷೇರುಗಳು ಯಾವುವು?
ಭಾರತೀಯ ರೈಲ್ವೆ ಷೇರುಗಳು ಇವು
1) ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ)
2) ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್)
3) ಟಿಟಾಘರ್ ವ್ಯಾಗನ್ಸ್ ಲಿಮಿಟೆಡ್ (ಟಿಐಟಿಎಜಿಎಆರ್‌ಎಚ್)
4) ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಸಿಒಎನ್‌ಸಿಒಆರ್)
5) ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಎಫ್‌ಸಿ)
6) ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)
7) ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್)
8) ಇರ್ಕಾನ್ ಇಂಟರ್ನ್ಯಾಷನಲ್ (ಐಆರ್‌ಸಿಒಎನ್)
ರೈಲ್ವೆ ವಲಯ ಬೆಳೆದ ಇತಿಹಾಸ
1844 ರಲ್ಲಿ ಭಾರತದ ಗವರ್ನರ್- ಜನರಲ್ ಲಾರ್ಡ್ ಹಾರ್ಡಿಂಜ್ ಖಾಸಗಿ ಕಂಪನಿಗಳಿಗೆ ರೈಲ್ವೆ ಮಾರ್ಗ ಸ್ಥಾಪಿಸಲು ಅನುಮತಿ ನೀಡಿದಾಗ ರೈಲ್ವೆಯ ಪ್ರಾರಂಭವಾಯಿತು. ಈ ಕಾಯ್ದೆಯಡಿ, ಈಸ್ಟ್ ಇಂಡಿಯಾ ಕಂಪನಿ ರೈಲ್ವೆ ಮಾರ್ಗಗಳನ್ನು ಸ್ಥಾಪಿಸಲು ಪ್ರಾರಂಭಿಸಿತು. ಹರಿದ್ವಾರದ ಸಣ್ಣ ನಗರ ರೂರ್ಕಿಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ರೈಲ್ವೆ ಮಾರ್ಗದ ವಿನ್ಯಾಸವನ್ನು ಮಾಡಲಾಗಿತ್ತು.
ನಂತರ ಬಾಂಬೆಯಿಂದ ಥಾಣೆಗೆ 32 ಕಿ.ಮೀ. ದೂರ ಕ್ರಮಿಸುವ ಮೊದಲ ಉಗಿ ಬಂಡಿ ರೈಲನ್ನು ಉದ್ಘಾಟಿಸಲಾಯಿತು. ಹೀಗೆ ಹಂತ ಹಂತವಾಗಿ ಭಾರತೀಯ ರೈಲ್ವೆ ಬೆಳೆದು ನಿಂತು, ಇಂದಿಗೆ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವ್ಯವಹಾರ ನಡೆಸುತ್ತಿದೆ. ಹಾಗೇ ಷೇರು ಮಾರುಕಟ್ಟೆಯಲ್ಲೂ ಕಿಂಗ್ ಆಗುತ್ತಿದೆ.
ಭಾರತೀಯ ರೈಲ್ವೆ ವಿಶ್ವದ 4ನೇ ಅತಿದೊಡ್ಡ ರೈಲ್ವೆ ವ್ಯವಸ್ಥೆ ಮತ್ತು ಸರಕು ಸಾಗಣೆ ಹೊಂದಿದೆ. ಇದು 67,956 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ ಮತ್ತು ಭಾರತದಾದ್ಯಂತ 7,335 ನಿಲ್ದಾಣ ಹೊಂದಿದೆ. ಇದರ ಜೊತೆಗೆ ಭಾರತ ಸರ್ಕಾರಕ್ಕೂ ರೈಲ್ವೆ ಉದ್ಯಮ ಅತ್ಯುತ್ತಮ ರೀತಿಯಲ್ಲಿ ಆದಾಯ ನೀಡುತ್ತಿದೆ. ಭವಿಷ್ಯದಲ್ಲಿ ಕೂಡ ಉತ್ತಮ ಆದಾಯವನ್ನು ನೀಡುವ ಮುನ್ಸೂಚನೆ ಇದೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರೈಲ್ವೆ ಜಗತ್ತಿನಾದ್ಯಂತ ಭಾರಿ ಹೆಸರು ಸಂಪಾದಿಸುತ್ತಿದೆ. ಇದರ ಜೊತೆಗೆ ಷೇರು ಮಾರುಕಟ್ಟೆಯಲ್ಲೂ ಗೂಳಿ ಓಟವನ್ನು ಮುಂದುವರಿಸಿವೆ ಭಾರತೀಯ ರೈಲ್ವೆ ಷೇರುಗಳು.


Click it and Unblock the Notifications