ನೇಮಕಾತಿ ಸೇವೆಗಳ ಸಂಸ್ಥೆ ಟೀಮ್‌ಲೀಸ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಪ್ರವೇಶ ಮಟ್ಟದ ಉದ್ಯೋಗಿಗಳ ವೇತನವು 2017 ಮತ್ತು 2019 ರ ನಡುವೆ ಸುಮಾರು 15 ಪರ್ಸೆಂಟ್‌ನಷ್ಟು ಹೆಚ್ಚಾಗಿದೆ. ಮಧ್ಯಮ ಮಟ್ಟದ ವೇತನದ ಆಧಾರಕ್ಕೆ ಹೋಲಿಸಿದರೆ ಅದೇ ಅವಧಿಯಲ್ಲಿ 11 ಪರ್ಸೆಂಟ್ ಹೆಚ್ಚಾಗಿದೆ. 7 ರಿಂದ 15 ವರ್ಷಗಳ ಅನುಭವ ಹೊಂದಿರುವವರನ್ನು ಮಧ್ಯಮ ಹಂತವೆಂದು ಪರಿಗಣಿಸಲಾಗುತ್ತದೆ.
ಕಂಪನಿಗಳು ತಾತ್ಕಾಲಿಕ (ಕಾಂಟ್ರ್ಯಾಕ್ಟ್) ಕೆಲಸಗಾರರನ್ನು ನೇಮಿಸಿಕೊಂಡಾಗ ಈ ವ್ಯತ್ಯಾಸವು ಸ್ಪಷ್ಟವಾಗಿದ್ದು, ಅಲ್ಲಿ ಫ್ರೆಶರ್‌ಗಳ ಸಂಬಳವು 26 ಪರ್ಸೆಂಟ್‌ನಷ್ಟು ಹೆಚ್ಚಾಗಿದೆ. ಅದೇ ಅವಧಿಯಲ್ಲಿ ಮಧ್ಯಮ ಮಟ್ಟದ ಸಂಬಳದಲ್ಲಿ 19 ಪರ್ಸೆಂಟ್ ಹೆಚ್ಚಳವಾಗಿದೆ. ತಾತ್ಕಾಲಿಕ ಉದ್ಯೋಗಿಗಳು, ಅಥವಾ ಉಪ ಗುತ್ತಿಗೆದಾರರನ್ನು ನೇಮಿಸಿಕೊಳ್ಳುವಲ್ಲಿ ಭಾರತೀಯ ಐಟಿ ಕಂಪೆನಿಗಳು ವಿಶೇಷವಾಗಿ ಒತ್ತು ನೀಡುತ್ತಿವೆ.

ಬ್ರೋಕರೇಜ್ ಸಂಸ್ಥೆ ಎಮ್ಕೆ ಗ್ಲೋಬಲ್ ಪ್ರಕಾರ, ಐಟಿ ಕಂಪನಿಗಳು 2020-21ರ ಹಣಕಾಸು ವರ್ಷದಲ್ಲಿ ಹೊಸದಾಗಿ ಪದವೀಧರರನ್ನು ನೇಮಕ ಮಾಡಿಕೊಳ್ಳುವುದರ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಲೇ ಇರುತ್ತವೆ.
"ಈ ಪ್ರವೃತ್ತಿಯು ನೌಕರರ ಪಿರಮಿಡ್ ಅನ್ನು ವಿಸ್ತರಿಸುವತ್ತ ಗಮನಹರಿಸುವ ಅಗತ್ಯದಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ನಾವು ನಂಬುತ್ತೇವೆ. ಟಿಸಿಎಸ್ ಮತ್ತು ಕಾಗ್ನಿಜೆಂಟ್ ಹೊಸಬರಿಗೆ ನೀಡುವ ಸಂಬಳವನ್ನು ಸುಮಾರು 30 ಪರ್ಸೆಂಟ್ ಹೆಚ್ಚಿಸಲು ಯೋಜಿಸಿದೆ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ 2021ರ ಹಣಕಾಸು ವರ್ಷದಲ್ಲಿ ಈಗ ನೀಡುತ್ತಿರುವುದರಲ್ಲಿ ಡಬಲ್ ನೀಡುವತ್ತ ಮನಸ್ಸು ಮಾಡಿದೆ "ಎಂದು ವರದಿ ತಿಳಿಸಿದೆ.
ಹಲವಾರು ವರ್ಷಗಳ ನಂತರ ಫ್ರೆಶರ್‌ಗಳಿಗೆ ನೀಡುವ ಸಂಬಳವು ವೇಗದಲ್ಲಿ ಏರಿಕೆಯಾಗಲಿದೆ ಎಂದು ಬ್ರೋಕರೇಜ್ ಮುನ್ಸೂಚನೆ ನೀಡಿದೆ.


Click it and Unblock the Notifications