ಅದೆಷ್ಟೋ ಮಂದಿ ವಂಚನೆಯನ್ನು ಮಾಡಿ ತಪ್ಪಿಸಿಕೊಂಡು, ತಲೆಮರೆಸಿಕೊಂಡು ಬದುಕುತ್ತಿರುವುದು ಇದೆ. ಹಾಗೆಯೇ ಪೊಲೀಸರೇ ಹುಡುಕಿ ಬಂಧಿಸಿರುವುದು ಕೂಡಾ ಇದೆ. ಆದರೆ ಇಲ್ಲೋರ್ವರು ತಾನು ವಂಚಿಸಿದ ಜನರಿಂದ ರಕ್ಷಣೆ ಪಡೆಯಲು ತಾನೇ ಪೊಲೀಸರಿಗೆ ಕರೆ ಮಾಡಿ ಬಂಧಿಸಿ ಎಂದು ಹೇಳಿದ್ದಾರೆ.
ಸುಮಾರು 500 ಉದ್ಯೋಗ ಆಕಾಂಕ್ಷಿಗಳಿಗೆ 5 ಕೋಟಿ ರೂಪಾಯಿಗಳನ್ನು ವಂಚಿಸಿದ ವಂಚಕನೊಬ್ಬ ನನ್ನನ್ನು ಬಂಧಿಸಿ ಎಂದು ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾನೆ. ಹೌದು, ಈ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

500 ಮಂದಿಯನ್ನು ವಂಚಿಸಿದ ವ್ಯಕ್ತಿ
ಹಲವಾರು ಉದ್ಯೋಗ ಆಕಾಂಕ್ಷಿಗಳನ್ನು ವಂಚಿಸಿದ 38 ವರ್ಷದ ವ್ಯಕ್ತಿ, ಕೆಲವು ಸಂತ್ರಸ್ತರು ತಮ್ಮ ಹಣವನ್ನು ಮರುಪಡೆಯಲು ಒತ್ತಡವನ್ನು ಹೇರಿದಾಗ ತನ್ನನ್ನು ತಾನು ಉಳಿಸಿಕೊಳ್ಳಲು 112 ಗೆ ಕರೆ ಮಾಡಿದ್ದಾನೆ ಎಂದು ವರದಿಯಾಗಿದೆ. ಆರೋಪಿಗಳು ಸಂತ್ರಸ್ತರಾದ ಕೆಲವರಿಂದ ಲಕ್ಷಗಟ್ಟಲೆ ಹಣ ಪಡೆದಿದ್ದರು ಎನ್ನಲಾಗಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಸಂತ್ರಸ್ತರ ಗುಂಪು ವಿಜಯವಾಡ ನಿವಾಸಿ ಕೊಲ್ಲಿ ನಾಗ ವೆಂಕಟ ಪವನ್ ಕುಮಾರ್ ಎಂಬ ವಂಚಕನನ್ನು ಹುಡುಕಿದೆ. ದೆಹಲಿಯಲ್ಲಿರುವ ತಾನು ಅಡಗಿರುವ ಸ್ಥಳದಿಂದ ಹೊರಬರಬೇಕು ಎಂದು ಆರೋಪಿಗೆ ಸಂತ್ರಸ್ತರು ಒತ್ತಡ ಹಾಕಿದ್ದಾರೆ.
ತಾನು ಅಡಗಿರುವ ಪ್ರದೇಶದ ಬಗ್ಗೆ ವಂಚನೆಗೆ ಒಳಗಾದ ಸಂತ್ರಸ್ತರಿಗೆ ಮಾಹಿತಿ ಇದೆ ಎಂದು ತಿಳಿದಾಗ ಆರೋಪಿ ಗಾಬರಿಗೊಂಡಿದ್ದು. ಸಂತ್ರಸ್ತರಿಂದ ತಪ್ಪಿಸಿಕೊಳ್ಳಲು 112 ಸಹಾಯವಾಣಿಗೆ ಕರೆ ಮಾಡಿದರು. ಹಾಗೆಯೇ ತನ್ನನ್ನು ಬಂಧಿಸಿ ಎಂದು ಹೇಳಿದರು.
ಆರೋಪಿಗೆ 24 ಲಕ್ಷ ರೂಪಾಯಿ ಕಳೆದುಕೊಂಡಿರುವ 24 ಉದ್ಯೋಗಾಕಾಂಕ್ಷಿಗಳು ನವೆಂಬರ್ 29 ರ ಬುಧವಾರದಂದು ಅವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವರದಿಯ ಪ್ರಕಾರ, ಆರೋಪಿಗಳು ಫೆಬ್ರವರಿಯಲ್ಲಿ ವೈಟ್‌ಫೀಲ್ಡ್ ಪ್ರದೇಶದಲ್ಲಿ ಶಮ್ಕುಹ್ ಟೆಕ್ನಾಲಜಿ ಮತ್ತು ಮಾಂಟಿ ಕಾರ್ಪ್ಸ್ ಎಂಬ ಎರಡು ಕಚೇರಿಗಳನ್ನು ಹೊಂದಿದ್ದರು.
ಸೆಪ್ಟೆಂಬರ್‌ನಲ್ಲಿ ಕುಮಾರ್ ಎರಡೂ ಕಚೇರಿಗಳನ್ನು ಮುಚ್ಚಿದ್ದರು. ಕುಮಾರ್ ಆಂಧ್ರಪ್ರದೇಶದ ಪದವೀಧರರನ್ನು ಸಂಪರ್ಕಿಸುತ್ತಾರೆ ಎಂದು ಪೊಲೀಸರು ಹೇಳಿದರು. ಅವರಿಗೆ ಉನ್ನತ ಕಂಪನಿಗಳಲ್ಲಿ ಉದ್ಯೋಗಾವಕಾಶದ ಭರವಸೆ ನೀಡಿದರು.
ಆರೋಪಿಯು ತನ್ನ ಕಚೇರಿಯಲ್ಲಿ ಸಂತ್ರಸ್ತರಿಗೆ ತರಬೇತಿಯನ್ನು ಏರ್ಪಡಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ. ಬೆಂಗಳೂರಿಗೆ ಬರುವ ಮೊದಲು ಕುಮಾರ್ ಆಂಧ್ರಪ್ರದೇಶದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಕುಮಾರ್ ಕನಿಷ್ಠ 500 ಆಕಾಂಕ್ಷಿಗಳಿಗೆ 5 ಕೋಟಿ ರೂಪಾಯಿವರೆಗೆ ವಂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಮಾರ್ ಮತ್ತು ಅವರ ಸಿಬ್ಬಂದಿ ತಮ್ಮ ಕಚೇರಿಗಳಲ್ಲಿ ತರಬೇತಿ ಪಡೆದ ಕೆಲವು ಆಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರಗಳನ್ನು ನೀಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಬೆಂಗಳೂರಿನ ಇನ್ಫೋಸಿಸ್ ಎಕ್ಸಿಕ್ಯೂಟಿವ್ ಟ್ರಾಯ್, ಸಿಬಿಐ ಮತ್ತು ಮುಂಬೈ ಪೊಲೀಸರು ಎಂದು ಹೇಳಿಕೊಂಡು ಸುಮಾರು 3.7 ಕೋಟಿ ರೂಪಾಯಿ ವಂಚಿಸಿದ್ದಾರೆ.


Click it and Unblock the Notifications