ಕನ್ನಡ ಮನರಂಜನಾ ವಾಹಿನಿಗಳ ಪಾಲಿಗೆ ಕೊರೊನಾ ಅಕ್ಷರಶಃ ಮರಣ ಮೃದಂಗವಾಗಿದೆ. ವಿವಿಧ ಮೂಲಗಳು ಈ ವಿಚಾರವನ್ನು ಖಚಿತಪಡಿಸಿದ್ದು, ಒಂದು ವಾಹಿನಿ ಕಣ್ಣುಮುಚ್ಚುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ಕನ್ನಡದ ಪ್ರಮುಖ ಚಾನೆಲ್ ನಲ್ಲಿ ಐದು ಧಾರಾವಾಹಿಗಳನ್ನು ಒಟ್ಟಿಗೇ ನಿಲ್ಲಿಸಲು ನಿರ್ಧರಿಸಲಾಗಿದೆ. ಮತ್ತೊಂದರಲ್ಲಿ ಎರಡು ಧಾರಾವಾಹಿ ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂಬುದು ಸದ್ಯದ ಮಾಹಿತಿ.
ಹೀಗೆ ವಿಪರೀತದ ನಿರ್ಧಾರಗಳು ಎರಡು- ಎರಡೂವರೆ ತಿಂಗಳ ಹಿಂದಿನ ತನಕ ಕೂಡ ಯಾರೂ ಊಹಿಸಿರಲಿಲ್ಲ. ಆದರೆ ಈಗ ಕೊರೊನಾ ಕೊಡುತ್ತಿರುವ ಹೊಡೆತಕ್ಕೆ ಇನ್ನು ಆಗಲ್ಲ ಎಂದು ಕೈ ಚೆಲ್ಲಿದಂತೆ ಇದ್ದಾರೆ.
ಒಂದು ಧಾರಾವಾಹಿ ಬರುತ್ತಿದೆ ಅಂದರೆ, ಅದರಿಂದ ಕನಿಷ್ಠ ನಲವತ್ತರಿಂದ- ಐವತ್ತು ಕುಟುಂಬ ಜೀವನ ನಡೆಸುತ್ತವೆ. ಇನ್ನು ಆ ವಾಹಿನಿಯಲ್ಲಿ ಕೆಲಸ ಮಾಡುವವರು ಪ್ರತ್ಯಕ್ಷವಾಗಿ- ಪರೋಕ್ಷವಾಗಿ ಬೇಕಾದಷ್ಟು ಮಂದಿ ಇರುತ್ತಾರೆ. ಹಾಗಿದ್ದರೆ ಚಾನೆಲ್ ಮುಚ್ಚುವ ಹಾಗೂ ಐದು ಮತ್ತು ಮೂರು ಧಾರಾವಾಹಿಗಳನ್ನು ನಿಲ್ಲಿಸಲಿರುವ ವಾಹಿನಿಗಳು ಯಾವುವು ಎಂಬುದನ್ನು ತಿಳಿಯಿರಿ.
ಕಲರ್ಸ್ ಕನ್ನಡ ರಂಗೇರಲಿಲ್ಲ
ಕಲರ್ಸ್ ಕನ್ನಡ ಚಾನೆಲ್ ಕನ್ನಡ ಮನರಂಜನೆ ಲೋಕಕ್ಕೆ ಅಕ್ಷರಶಃ ಸುನಾಮಿ. ಅದು ಎಬ್ಬಿಸಿದ ಅಲೆಗೆ ಇಡೀ ಎಂಟರ್ ಟೇನ್ ಮೆಂಟ್ ಗ್ರ್ಯಾಮರ್ ಬದಲಾಗಿ ಹೋಯಿತು. ಆದರೆ ಆ ನಂತರ ಶುರು ಮಾಡಿದ ಕಲರ್ಸ್ ಸೂಪರ್ ಮೇಲೆ ಏಳಲೇ ಇಲ್ಲ. ಆದರೆ ತಂಡದ ಗಮನ ಬದಲಾಗಿದ ಅನ್ನೋ ಕಾರಣಕ್ಕೋ ಏನೋ ಅದು ಕಲರ್ಸ್ ಕನ್ನಡದ ಮೇಲೂ ಪರಿಣಾಮ ಬೀರಿತು. ಎರಡೆರಡು ಬಿಗ್ ಬಾಸ್ ಸೀಸನ್ ಬಂದ ಮೇಲೂ ಕಲರ್ಸ್ ಸೂಪರ್ ನಲ್ಲಿ ಏನೂ ಬದಲಾವಣೆ ಆಗಲಿಲ್ಲ. ಸದ್ಯಕ್ಕೆ ಮೂಲಗಳು ಹೇಳುವ ಪ್ರಕಾರ, ಲಾಕ್ ಡೌನ್ ನಂತರ ಕೂಡ ವಾಹಿನಿಯ 'ಯಶಸ್ವಿ' ಧಾರಾವಾಹಿಗಳಾದ ಮಗಳು ಜಾನಕಿ, ಮಾಂಗಲ್ಯಂ ತಂತುನಾನೇನ ಮತ್ತೆ ಚಿತ್ರೀಕರಣ ಆರಂಭಿಸಲು ಅನುಮತಿ ಕೊಟ್ಟಿಲ್ಲ. ದೊಡ್ಡ ತಲೆಗಳನ್ನು ಕೇಳಿದರೆ, ಸೆಪ್ಟೆಂಬರ್ ನಂತರ ನೋಡೋಣ ಅನ್ನುತ್ತಾರೆ. ಆದರೆ ವಾಸ್ತವ ಏನೆಂದರೆ, ಕಲರ್ಸ್ ಸೂಪರ್ ಬಾಗಿಲು ಹಾಕುವುದಕ್ಕೆ ನಿರ್ಧರಿಸಲಾಗಿದೆ.
ಉದಯ ಟಿವಿಯಲ್ಲಿ ಐದು ಧಾರಾವಾಹಿ ನಿಲ್ಲಲಿದೆ
ಇನ್ನು ಉದಯ ಟಿವಿಯಲ್ಲಿ ಐದು ಧಾರಾವಾಹಿಗಳನ್ನು ನಿಲ್ಲಿಸಲು ಇ ಮೇಲ್ ಹೋಗಿದೆ ಎನ್ನುತ್ತವೆ ಮೂಲಗಳು. ದೇವಯಾನಿ, ಕಾವೇರಿ, ನಾಯಕಿ, ನಾನು ನನ್ನ ಕನಸು ಹಾಗೂ ಜೀವನದಿ ಧಾರಾವಾಹಿಗಳು ನಿಲ್ಲಿಸಲಾಗಿದೆ ಎಂಬುದು ಸದ್ಯದ ಮಾಹಿತಿ. ಇದಕ್ಕೆ ಕಾರಣ ಏನು ಅಂತ ಕೇಳಿದರೆ, ಅಚ್ಚರಿ ಜತೆಗೆ ಆಘಾತವೂ ಆಗುವಂಥ ಸಂಗತಿಗಳು ಹೊರಬರುತ್ತವೆ. ಈ ಬಗ್ಗೆ ಆರೋಪ ಅಂತೂ ಕೇಳಿಬಂದಿದೆ. ಇದೇ ಸರಿ ಎನ್ನಲು ಸಾಧ್ಯವಾಗುತ್ತಿಲ್ಲ. ಏನು ಆರೋಪ ಅಂತೀರಾ? ಕೆಲವು ಧಾರಾವಾಹಿಗಳ 'ಬಾರ್ಕ್' ಪಾಯಿಂಟ್ ಗಳನ್ನು ತಿದ್ದಿ ಕಳ್ಳಾಟದ ಮೂಲಕ ರೇಟಿಂಗ್ ತರಲಾಗುತ್ತಿದೆ. ಇಷ್ಟು ಸಮಯ ವಾಹಿನಿಗಳಿಗೂ ಇದು ಅನಿವಾರ್ಯವಾಗಿತ್ತು. ಈಗ ಕಾಲ ಬದಲಾಗಿದೆ ಎನ್ನುತ್ತವೆ ಮೂಲಗಳು. ಆದರೂ ರೇಟಿಂಗ್ ಬರುತ್ತಿದೆ ಅನ್ನೋ ಕಾರಣಕ್ಕೆ ಕೆಲವನ್ನು ಮುಂದುವರಿಸಲಾಗುತ್ತಿತ್ತು. ಆದರೆ ಕೊರೊನಾ ನಂತರ ರೇಟಿಂಗ್ ಅಂತ ಬಂದರೂ ಆದಾಯ ಹುಟ್ಟುತ್ತಾ ಇಲ್ಲ. ಆ ಕಾರಣಕ್ಕೆ ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥ ಇಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆಯಂತೆ. ಇನ್ನು ಸಿನಿಮಾ ಪ್ರಸಾರದ ಮೂಲಕ ಉದಯ ಟಿವಿಗೆ ಬಂದ ರೇಟಿಂಗ್ ಎರಡು ವಾರಗಳ ಕಾಲ ಜೀ ಟಿವಿಗಿಂತ ಮೇಲೆ ಸೂರ್ಯ ಮೇಲೆ ಹೋಗುವಂತೆ ಮಾಡಿದೆ. ಇನ್ನು ಡಬ್ಬಿಂಗ್ ಕೂಡ ಕನ್ನಡಕ್ಕೆ ಕಾಲಿಟ್ಟಿದೆ. ಈ ಎಲ್ಲ ಕಾರಣವೂ ಸೇರಿ ಧಾರಾವಾಹಿ ನಿಲ್ಲಿಸಲಾಗಿದೆಯಂತೆ.
ಏನಾದರೂ ಮಾಡಿ, ಕಾರ್ಯಕ್ರಮಗಳನ್ನು ಸಿದ್ಧ ಮಾಡಿ
ಇತ್ತ ಸುವರ್ಣ ಎಂಟರ್ ಟೇನ್ ಮೆಂಟ್ ಚಾನೆಲ್ ನಲ್ಲಿ ಮರಳಿ ಬಂದಳು ಸೀತೆ ಹಾಗೂ ಶ್ರುತಿ ಸೇರಿದಾಗ ಧಾರಾವಾಹಿಗಳನ್ನು ನಿಲ್ಲಿಸಲಾಗಿದೆ. ಡಬ್ಬಿಂಗ್ ಧಾರಾವಾಹಿಗಳ ಪ್ರಸಾರಕ್ಕೆ ಬೇಕಾದಷ್ಟು ಸರಕುಗಳನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿದೆ. ಮಹಾಭಾರತ, ರಾಧಾ ಕೃಷ್ಣ ಜತೆಗೆ ಸಿನಿಮಾಗಳ ಡಬ್ಬಿಂಗ್ ಕೆಲಸವೂ ಜೋರಾಗಿ ನಡೆಯುತ್ತಿದೆ. ವಾಹಿನಿಗಳ ಮುಖ್ಯಸ್ಥರು ಈಗಿನ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೆ, ತಮ್ಮ ಕೈ ಕೆಳಗಿನವರಿಗೆ- "ಏನಾದರೂ ಮಾಡಿ, ಕಾರ್ಯಕ್ರಮಗಳನ್ನು ಸಿದ್ಧ ಮಾಡಿ" ಎಂದು ಒತ್ತಡ ಹೇರುತ್ತಿದ್ದಾರೆ. ಕೊನೆಗೆ ಗುಣಮಟ್ಟವನ್ನೂ ರಾಜೀ ಮಾಡಿಕೊಂಡು ಡಬ್ಬಿಂಗ್ ಮಾಡಬೇಕಾದ ಸ್ಥಿತಿ ಬಂದೊದಗಿದೆ. ಈ ಮಧ್ಯೆ ಡಬ್ಬಿಂಗ್ ಅನ್ನು ದೊಡ್ಡ ಮಟ್ಟದಲ್ಲಿ ಬಾರದಿರುವಂತೆ ಇಷ್ಟು ಸಮಯ ಹೇಗೋ ತಡೆದು, ಕಲಾವಿದರ, ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲಾಗಿತ್ತು. ಆದರೆ ಈಗ ಕೊರೊನಾದ ಕಾರಣಕ್ಕೆ ಎಲ್ಲವನ್ನೂ ನೋಡಿಕೊಂಡು ಸುಮ್ಮನಿರುವಂತಾಗಿದೆ.
ಡಬ್ಬಿಂಗ್ ನಿಂದಾಗಿ ಉದ್ಯಮ ಬೆಳೆಯಲ್ಲ
ಡಬ್ಬಿಂಗ್ ಬಗ್ಗೆ ಚಾನೆಲ್ ವೊಂದರ ಪ್ರಮುಖ ಹುದ್ದೆಯಲ್ಲಿ ಇರುವವರು ಕನ್ನಡ ಗುಡ್ ರಿಟರ್ನ್ಸ್ ಜತೆ ಮಾತನಾಡಿ, ಡಬ್ಬಿಂಗ್ ವಿರೋಧ ಮಾಡಬೇಕು ಎನ್ನುತ್ತಿರುವವರ ಧೋರಣೆಯ ಹಿನ್ನೆಲೆಯನ್ನು ಗಮನಿಸಬೇಕು. ಒಂದು ಧಾರಾವಾಹಿ ಕನ್ನಡದಲ್ಲೇ ನಿರ್ಮಾಣವಾದರೆ ದಿನಕ್ಕೆ ನಲವತ್ತರಿಂದ ಐವತ್ತು ಕುಟುಂಬಗಳಿಗೆ ಕೆಲಸ ದೊರೆಯುತ್ತದೆ. ಇನ್ನು ನಾಲ್ಕೈದು ವಾಹಿನಿಗಳಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳಿಂದ ಎಷ್ಟು ಮಂದಿಗೆ ಕೆಲಸ ಸಿಕ್ಕಂತಾಗುತ್ತದೆ! ಆದರೆ ಡಬ್ಬಿಂಗ್ ಮಾಡಿದರೆ ಒಟ್ಟಾರೆ ಕೆಲಸ ಶೇಕಡಾ 90ರಷ್ಟು ಕಡಿಮೆ ಆಗುತ್ತದೆ. ಜತೆಗೆ ಉದ್ಯಮ ಕೂಡ ಬೆಳೆಯುವುದಿಲ್ಲ. ಯಾವುದೋ ಭಾಷೆಯಲ್ಲಿ ಇರುವ ಧಾರಾವಾಹಿಗಳ ಸಂಭಾಷಣೆಗಳನ್ನು ಕನ್ನಡಕ್ಕೆ ಬರೆದು, ಅದನ್ನು ಡಬ್ ಮಾಡಿದರೆ ಮುಗಿಯಿತು. ಇನ್ನು ಹೊಸ- ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗುವುದು ದೂರದ ಮಾತಾಯಿತು. ಆದರೆ ಈ ವಿಚಾರವನ್ನು ಆಲೋಚಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ಇದಕ್ಕಾಗಿ ವಾಹಿನಿಗಳನ್ನು ದೂಷಣೆ ಮಾಡುವುದಕ್ಕೆ ಆಗಲ್ಲ. ಏಕೆಂದರೆ ಚಾನೆಲ್ ಗಳು ಈಗಿನ ಸನ್ನಿವೇಶದಲ್ಲಿ ಬದುಕಿ ಉಳಿದರೆ ಮುಂದೆ ಏನಾದರೂ ಬದಲಾವಣೆ ನಿರೀಕ್ಷಿಸಬಹುದು. ಈಗ ಅವುಗಳ ಅಸ್ತಿತ್ವಕ್ಕೆ ತೊಂದರೆ ಬಂದಿದೆ ಎನ್ನುತ್ತಾರೆ ಅವರು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications