ಕರ್ನಾಟಕ ಸರ್ಕಾರವು ಮಂಗಳವಾರ 62 ಕೈಗಾರಿಕಾ ಹೂಡಿಕೆ ಪ್ರಸ್ತಾವನೆಗಳನ್ನು ಅನುಮೋದಿಸಿದೆ. ಅಂದರೆ ಕರ್ನಾಟಕ ಸರ್ಕಾರವು 62 ಯೋಜನೆಗಳಿಗೆ ಅನುಉಮೋದನೆ ನೀಡಿದೆ. ಇದು ಸುಮಾರು 3,607.19 ಕೋಟಿ ರೂಪಾಯಿಯ ಯೋಜನೆಯಾಗಿದ್ದು, ರಾಜ್ಯದಲ್ಲಿ 10,755 ಉದ್ಯೋಗ ಸೃಷ್ಟಿ ಮಾಡುವ ಗುರಿಯಿದೆ.
ಕರ್ನಾಟಕ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ರಾಜ್ಯ ಮಟ್ಟದ ಎಸ್‌ಎಲ್‌ಎಸ್‌ಡಬ್ಲ್ಯುಸಿಸಿ 50 ಕೋಟಿ ರೂಪಾಯಿಗಿಂತ ಅಧಿಕ ಹೂಡಿಕೆಯನ್ನು ಹೊಂದಿರುವ ಒಟ್ಟು ಎಂಟು ಯೋಜನೆಗಳನ್ನು ಅನುಮೋದನೆ ಮಾಡಿದೆ. ಈ ಎಂಟು ಯೋಜನೆಗಳ ಒಟ್ಟು ಮೌಲ್ಯವು ಸುಮಾರು 2,088.44 ಕೋಟಿ ರೂಪಾಯಿ ಆಗಿದೆ. ಹಾಗೆಯೇ ಈ ಎಂಟು ಯೋಜನೆಗಳು 6,360 ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ.

ಯೋಜನೆಗಳಿಗೆ ಪ್ರಮುಖ ಹೂಡಿಕೆದಾರರು ಯಾರು?
ಈ ಅನುಮೋದಿತ ಯೋಜನೆಗೆ ಪ್ರಮುಖವಾಗಿ ಟೆಕ್ಸ್‌ಕಾನ್ ಸ್ಟೀಲ್ಸ್, ಹುಂಡ್ರಿ ಶುಗರ್ಸ್ ಆಂಡ್ ಇಥನಾಲ್ ಪ್ರೈವೇಟ್ ಲಿಮಿಟೆಡ್, ಬ್ರೆನ್ ಲೈಫ್ ಸೈನ್ಸಸ್, ಆಲ್ಪೈನ್ ಎಥೆನಾಲ್, ವಿರೂಪಾಕ್ಷ ಲ್ಯಾಬೋರೇಟರೀಸ್ ಮತ್ತು ಕ್ವಾಲ್ಕಾಮ್ ಇಂಡಿಯಾ ಹೂಡಿಕೆಯನ್ನು ಮಾಡಲಿದೆ.
62 ಪ್ರಸ್ತಾವನೆಗಳ ಪೈಕಿ 51 ಹೂಡಿಕೆ ಯೋಜನೆಗಳು 15 ಕೋಟಿಯಿಂದ 50 ಕೋಟಿ ರೂಪಾಯಿ ಹೂಡಿಕೆಯದ್ದಾಗಿದೆ. ಈ 51 ಯೋಜನೆಗಳು ಒಟ್ಟು 941.40 ಕೋಟಿ ರೂಪಾಯಿಗಳಾಗಿದ್ದು, ರ್ನಾಟಕದಲ್ಲಿ 4,395 ಜನರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುವ ನಿರೀಕ್ಷೆಯಿದೆ.
577.35 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆಯೊಂದಿಗೆ ಮೂರು ಯೋಜನೆಗಳಿಗೆ ಸಮಿತಿ ಅನುಮೋದನೆ ನೀಡಿದೆ. ಅಕ್ಟೋಬರ್‌ನಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಬಿಜೆಪಿ ಆಡಳಿತದಲ್ಲಿ ಅನುಮೋದನೆಗೊಂಡ ಯೋಜನೆಗಳು ಮತ್ತು ಇನ್ನೂ ಪ್ರಾರಂಭವಾಗದ ಯೋಜನೆಗಳ ಪರಿಶೀಲನೆ ನಡೆಸಲು ನಿರ್ಧರಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅನುಮೋದಿತ ಕಾಮಗಾರಿಗಳಿಗೆ ಅಗತ್ಯವಿರುವ ಹಣಕಾಸು ಹಿಂದಿನ ಸರ್ಕಾರದ ಅವಧಿಯಲ್ಲಿ ಬಜೆಟ್‌ಗಿಂತ ಮೂರು ಪಟ್ಟು ಹೆಚ್ಚು ಮತ್ತು ಬಾಕಿ ಇರುವ ಬಿಲ್ ಮೊತ್ತವು ಗಮನಾರ್ಹವಾಗಿ ಹೆಚ್ಚಾಗಿದೆ.
ಕೆಎಚ್ಐಆರ್ ಸಿಟಿ ನಿರ್ಮಾಣ, ಹೂಡಿಕೆ ಎಷ್ಟು?
ಜಾಗತಿಕ ದರ್ಜೆಯ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರವಾದ ಕೆಎಚ್ಐಆರ್ ಸಿಟಿ ಅನ್ನು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗಾಗಿ ಸುಮಾರು 40 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಮಾಡಲಾಗುತ್ತದೆ. ಹಾಗೆಯೇ ಉದ್ಯೋಗ ಸೃಷ್ಟಿಯನ್ನು ಕೂಡಾ ಮಾಡಲಾಗುತ್ತದೆ.
ಈ ಬಗ್ಗೆ ಟ್ವಿಟ್ಟರ್ ಮೂಲಕ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ. "ಜಾಗತಿಕ ದರ್ಜೆಯ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರ (#ಕೆಎಚ್ಐಆರ್ ಸಿಟಿ)ವನ್ನು ಅಭಿವೃದ್ಧಿ ಪಡಿಸಲಾಗುವುದು. 40 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಿ 80 ಸಾವಿರದಿಂದ 1 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ," ಎಂದು ತಿಳಿಸಿದರು.


Click it and Unblock the Notifications