ಎಂಥಾ ಕಾಲವಯ್ಯ! 33% ಅಂಕ ಬಂದರೆ SSLC ಪಾಸ್..! ಹೌದು, 2025-26ನೇ ವರ್ಷದಿಂದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಲು ಬೇಕಾದ ಅಂಕವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಎಸ್‌ಎಸ್‌ಎಲ್‌ಸಿಯಲ್ಲಿ ಪಾಸ್ ಆಗಲು ಶೇ 35 ಅಂಕವನನ್ನು ತಗೆದುಕೊಂಡರೆ ಮಾತ್ರ ಪಾಸ್ ಆಗುತ್ತಾರೆ. ಆದರೆ ಮುಂದೆ ಈ ಯೋಜನೆ ಜಾರಿಗೆ ಬಂದರೆ ಶೇ. 33 ಅಂಕ ಪಡೆದ್ದರೆ ಸಾಕು ಉತ್ತೀರ್ಣರಾಗುತ್ತಾರೆ.
ಈ ಕುರಿತು ಈಗಾಗಲೇ 'ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿಯ ನಿಯಮಾವಳಿಗಳು (ತಿದ್ದುಪಡಿ) 2025 ಹೆಸರಿನ ಕರಡು ಅಧಿಸೂಚನೆಯನ್ನ ಸರ್ಕಾರ ಹೊರಡಿಸಿದೆ ಅಂತ ಪಿಟಿಐ ಸುದ್ದಿ ಸಂಸ್ಥೆ ವರದಿಯನ್ನು ಕೂಡ ಮಾಡಿದೆ. ಹೊಸ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಇಂಟರ್ನಲ್ ಮತ್ತು ಎಕ್ಸ್ಟರ್ನಲ್ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನ ಸೇರಿಸಿ, ಸರಾಸರಿ ಶೇ. 33 ಅಂಕ ಪಡೆದರೆ ಸಾಕು.

ಈ ಬದಲಾವಣೆಯನ್ನು 1966ರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ತರಲಾಗಿದೆ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೂಡ ಅಧಿಕೃತ ಅಧಿಸೂಚನೆಹೊರಡಿಸಿದೆ.
ಅಧಿಸೂಚನೆಯಲ್ಲಿ ಇರುವ ಮಾಹಿತಿ ಪ್ರಕಾರ ಪರೀಕ್ಷೆ ಬರೆಯುವವರು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆಗಳಲ್ಲಿ ಸರಾಸರಿ ಶೇ.33 ಅಂಕವನ್ನು ಪಡೆಯಬೇಕಾಗುತ್ತದೆ. ಆರು ಅಧ್ಯಾಯದ ವಿಷಯದಲ್ಲಿ ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನ ಪಡೆಯಬೇಕು. ಪ್ರತಿ ವಿಷಯದಲ್ಲೂ ಆ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇ. 30 ಅಂಕಗಳವನ್ನು ಪಡೆದುಕೊಂಡರೆ ಆತ ಉತ್ತೀರ್ಣರಾಗುತ್ತಾರೆ ಎಂಬ ಮಾಹಿತಿ ಇದೆ.
ಈ ಬದಲಾವಣೆಗಳ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ತಿಳಿಸಲು ಸರ್ಕಾರ 15 ದಿನಗಳ ಕಾಲಾವಕಾಶ ನೀಡಿದೆ. ಸಾರ್ವಜನಿಕರು ತಮ್ಮ ಸಲಹೆಗಳನ್ನ ಸರ್ಕಾರಕ್ಕೆ ತಿಳಿಸಬಹುದು.
ಇತ್ತೀಚೆಗೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು, 2024-25ನೇ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (KREIS) ಶಾಲೆಗಳ ಎಸ್ಎಸ್ಎಲ್ಸಿ ಫಲಿತಾಂಶ ಶೇಕಡಾ ಶೇ. 91 ರಷ್ಟಿತ್ತು. ಇದು ರಾಜ್ಯದ ಸರಾಸರಿ ಶೇಕಡಾ ಶೇ. 62.34ಕ್ಕಿಂತ ಹೆಚ್ಚು ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯ ತರೋದಕ್ಕೆ ಶಿಕ್ಷಣ ಒಂದು ಮುಖ್ಯವಾದ ಗುರಿ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. KRIES ಕರ್ನಾಟಕ ಸರ್ಕಾರ ನಡೆಸುವ ವಸತಿ ಶಿಕ್ಷಣ ಸಂಸ್ಥೆಯಾಗಿದೆ. ಹಿಂದುಳಿದ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯಯನ್ನು ನೀಡುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ವಿದ್ಯಾರ್ಥಿ ಜೀವನದಲ್ಲಿ ಮುಖ್ಯ ಘಟ್ಟವೆಂದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ.ಪಾಸ್ ಆಗಲು ನಿಮ್ಮಗೆ ಎಲ್ಲಾ ವಿಷಯದಿಂದ ಶೇ.35ರಷ್ಟು ಅಂಕವನ್ನು ಗಳಿಸುದ್ದರೆ ಮಾತ್ರ ನೀವು ಪಾಸ್ ಇಲ್ಲವಾದರೂ ಫೀಲ್ ಆಗುತ್ತಿದ್ದರೆ. ಇದರಿಂದ ಎಷ್ಟು ವಿದ್ಯಾರ್ಥಿಗಳು ಆತ್ನಹತ್ಯೆಯನ್ನು ಕೂಡ ಮಾಡಿಕೊಂಡಿದ್ದರೆ. ಇದನೆಲ್ಲಾ ಗಮನಿಸಿದ ಸರ್ಕಾರ ಪಾಸ್ ಅಂಕವನ್ನು ಕಡಿಮೆ ಮಾಡಲು ನಿರ್ಧಾರವನ್ನು ಮಾಡಿದೆ.


Click it and Unblock the Notifications