Yuva Nidhi Scheme: ಯುವ ನಿಧಿ ಯೋಜನೆಗೆ ನೋಂದಣಿ ಆರಂಭ: ಅರ್ಹತೆ, ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕದ ಪದವೀಧರ ನಿರುದ್ಯೋಗಿ ಯುವಕರಿಗೆ ಮಾಸಿಕ 3,000 ರೂ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯು ರಾಜ್ಯದಲ್ಲಿ ಜಾರಿಗೆ ಬರಲಿದೆ. ಕರ್ನಾಟಕ ಸರ್ಕಾರವು ಈ ಯೋಜನೆಗೆ 250 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು ಡಿಸೆಂಬರ್ 26 ರಂದು ನೋಂದಣಿ ಪ್ರಾರಂಭವಾಗಿದೆ.

ರಾಜ್ಯಾದ್ಯಂತ 5,29,123 ಪದವೀಧರರು ಮತ್ತು ಡಿಪ್ಲೊಮಾ ಶಿಕ್ಷಣ ಪಡೆದಿರುವರು ಇದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಕರ್ನಾಟಕ ಸರ್ಕಾರ ಹೇಳಿದೆ. ಯುವ ನಿಧಿ ಯೋಜನೆಯಡಿ ಪದವಿ ಪಡೆದಿರುವ ನಿರುದ್ಯೋಗಿ ಯುವಕರು ಪ್ರತಿ ತಿಂಗಳು ರೂ. 3000, ಡಿಪ್ಲೊಮಾ ಹೊಂದಿರುವವರು 1,500 ರೂ. ಪಡೆಯಲಿದ್ದಾರೆ.

 ಯುವ ನಿಧಿ ಯೋಜನೆಗೆ ನೋಂದಣಿ ಆರಂಭ: ಅರ್ಹತೆ, ಅರ್ಜಿ ಸಲ್ಲಿಕೆ ಹೇಗೆ?

ಈ ಯೋಜನೆಯು ಕರ್ನಾಟಕದ ಜನತೆಗೆ ಕಾಂಗ್ರೆಸ್‌ನ ಐದನೇ ಚುನಾವಣಾ ಭರವಸೆಯಾಗಿದೆ. ಪ್ರತಿ ತಿಂಗಳು ಈ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದೆ.

ಅರ್ಹತೆಗಳೇನು?

ಯುವ ನಿಧಿ ಯೋಜನೆಯ ಹಣ ಪಡೆಯಲು ಅಭ್ಯರ್ಥಿಗಳು 2022-23 ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ ಅಥವಾ ಪದವಿ ಪಾಸಾಗಿರಬೇಕು. ಕರ್ನಾಟಕದ ನಿವಾಸಿಗಳಾಗಿರಬೇಕು. ಪದವಿ ಅಥವಾ ಡಿಪ್ಲೊಮಾ ಪಾಸಾದ ಬಳಿಕ ಆರು ತಿಂಗಳವರೆಗೆ ಕೆಲಸ ಹೊಂದಿರಬಾರದು.

ಅರ್ಜಿದಾರರು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಅಥವಾ ಪದವಿ ಅಂಕಪಟ್ಟಿಗಳನ್ನು ಹೊಂದಿರಬೇಕು. 2018 ರ ಮೊದಲು ನೀಡಲಾದ ಸಿಇಟಿ ನೋಂದಣಿ ಸಂಖ್ಯೆ ಅಥವಾ ಪಡಿತರ ಚೀಟಿಯನ್ನು ವಾಸಸ್ಥಳ ಪರಿಶೀಲನೆ ದಾಖಲೆಯಾಗಿ ಸರ್ಕಾರ ಪರಿಗಣಿಸುತ್ತದೆ.

ಅರ್ಜಿದಾರರು ಯುವ ನಿಧಿಗೆ ಈಗಿನಿಂದಲೇ ಅರ್ಜಿ ಸಲ್ಲಿಸಬಹುದು ಮತ್ತು ಕೋರ್ಸ್ ಪೂರ್ಣಗೊಂಡ ನಂತರ 180-ದಿನಗಳ ಅವಧಿಯವರೆಗೆ ಕಾಯಬೇಕಾಗಿಲ್ಲ. ಸ್ವಯಂ ಉದ್ಯೋಗಿ ಅಥವಾ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಅರ್ಜಿದಾರರು ಅರ್ಹರಲ್ಲ.

ಇನ್ನೂ ಉನ್ನತ ಶಿಕ್ಷಣವನ್ನು ಪಡಯುತ್ತಿರುವ/ಪಡೆಯುವ ಅರ್ಜಿದಾರರು ಯೋಜನೆಯ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ. ಅಪ್ರಂಟಿಸ್ ಸಂಬಳ ಪಡೆಯುವವರು ಕೂಡ ಈ ಯೋಜನೆಗೆ ಅರ್ಹರಲ್ಲ. ಅರ್ಜಿದಾರರು ನೀಡುವ ಬ್ಯಾಂಕ್ ವಿವರಗಳು ಆಧಾರ್ ಸಂಖ್ಯೆಗೆ ಜೋಡಣೆಯಾಗಿರಬೇಕು.

ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ

ಅರ್ಹ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಸೇವಾಸಿಂದು ಪೋರ್ಟಲ್ ಮೂಲಕ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.

ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ನಿವಾಸ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಶೈಕ್ಷಣಿಕ ಅರ್ಹತೆಯ ದಾಖಲೆಗಳು
  • ಬ್ಯಾಂಕ್ ಖಾತೆ ವಿವರಗಳು

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+