ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಆಸ್ತಿಗಳನ್ನು ಹಣಗಳಿಸಲು ಬಳಸಲು ಕರ್ನಾಟಕ ಸರ್ಕಾರವು ಚಿಂತನೆ ನಡೆಸಿದೆ. ಕರ್ನಾಟಕ ಸರ್ಕಾರವು ಇದರಿಂದಾಗಿ ಹಣ ಗಳಿಸಲು ಮುಂದಾದರೆ ಭಾರತದಲ್ಲಿ ಮೊದಲ ಪ್ರಯತ್ನ ಇದಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಸಚಿವ ಪ್ರಿಯಾಂಕ್ ಖರ್ಗೆ ಡೆಕ್ಕನ್ ಹೆರಾಲ್ಡ್‌ಗೆ ಹೇಳಿದ್ದಾರೆ.
ಪ್ರಿಯಾಂಕ್ ಕನ್ಸಲ್ಟಿಂಗ್ ದೈತ್ಯ ಡೆಲಾಯ್ಟ್‌ಗೆ ಈ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಈ ಪಾಲಿಸಿಯು ಮಾರ್ಚ್ ಅಥವಾ ಏಪ್ರಿಲ್‌ನೊಳಗೆ ಸಿದ್ಧವಾಗಬೇಕು ಎಂದು ಡಿಎಚ್‌ಗೆ ಸಚಿವರು ತಿಳಿಸಿದರು. "ನಾವು ಪಂಚಾಯತ್‌ಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಹೇಗೆ ಉತ್ಪಾದಿಸಬಹುದು ಎಂಬುದನ್ನು ಲೆಕ್ಕಾಚಾರ ಮಾಡುವ ಚಿಂತನೆಯಾಗಿದೆ," ಎಂದು ಪ್ರಿಯಾಂಕ್ ತಿಳಿಸಿದರು.

ಕರ್ನಾಟಕವು 6,000 ಗ್ರಾಮ ಪಂಚಾಯತ್‌ಗಳನ್ನು ಹೊಂದಿದ್ದು, ಅವುಗಳು ಅನೇಕ ಆಸ್ತಿಗಳನ್ನು ಹೊಂದಿವೆ. ಹೊಸ ಪಾಲಿಸಿಯೊಂದಿಗೆ ಸರ್ಕಾರವು ಈ ಸ್ವತ್ತುಗಳಿಂದ ಆದಾಯವನ್ನು ಗಳಿಸಲು ಬಯಸಿದೆ. ಕರ್ನಾಟಕವು ಪಂಚಾಯತ್ ವ್ಯಾಪ್ತಿಯಲ್ಲಿ ಅಂದಾಜು 1.5 ಕೋಟಿ ಗ್ರಾಮೀಣ ಆಸ್ತಿಗಳನ್ನು ಹೊಂದಿದೆ.
ಸಂಬಳ ವಿಳಂಬದ ಬಳಿಕ ಈಗ 290 ಕೋಟಿ ರೂಪಾಯಿ ಫಂಡ್ ರೈಸ್ ಮಾಡಲಿದೆ ಡೊನ್ಜೊ
"ತೆರಿಗೆ ಸಂಗ್ರಹದಿಂದ ಮಾತ್ರ ಆದಾಯದ ಸಾಮರ್ಥ್ಯವು 2,000 ಕೋಟಿ ರೂಪಾಯಿಯಾಗಿದೆ. ಆಸ್ತಿ ಹಣಗಳಿಕೆಯಿಂದ ಆದಾಯದ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕಾಗುತ್ತದೆ," ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
"ಮೊದಲು, ನಾವು ಆಸ್ತಿಗಳನ್ನು ಲೆಕ್ಕಾಚಾರ ಮಾಡಬೇಕು. ಎಲ್ಲವನ್ನೂ ತೆರಿಗೆ ಅಡಿಯಲ್ಲಿ ತರಬೇಕು. ನಂತರ, ಹಣಗಳಿಸಬಹುದಾದ ಸ್ವತ್ತುಗಳನ್ನು ನಾವು ಲೆಕ್ಕಾಚಾರ ಮಾಡಬೇಕು. ಉದ್ದೇಶಿತ ಹಣಗಳಿಕೆಯ ಕ್ರಮದ ಅಡಿಯಲ್ಲಿ, ಸಾರ್ವಜನಿಕ ಆಸ್ತಿಗಳನ್ನು ಗುತ್ತಿಗೆ ನೀಡುವ ಸಾಂಪ್ರದಾಯಿಕ ಮಾದರಿಯನ್ನು ಮೀರಿ ನೋಡಲು ಸರ್ಕಾರ ಬಯಸುತ್ತದೆ," ಎಂದು ಪ್ರಿಯಾಂಕ್ ಮಾಹಿತಿ ನೀಡಿದರು.
"ಕೆಲವು ವಿಚಾರಗಳನ್ನು ಪರಿಶೋಧಿಸಲಾಗುತ್ತಿದೆ. ಅಥಣಿಯಲ್ಲಿ ಪಾದರಕ್ಷೆಗಳ ಕ್ಲಸ್ಟರ್ ಇದೆ. ನಾವು ಅವರಿಗೆ ಗೋದಾಮಿನ ಸ್ಥಳವನ್ನು ಒದಗಿಸಬಹುದು. ಅವರು ಗಳಿಸುವ ಆದಾಯದಲ್ಲಿ ಪಂಚಾಯತ್ ಪಾಲುದಾರರಾಗಿರುತ್ತದೆ," ಎಂದು ಒಂದು ಐಡಿಯಾವನ್ನು ತಿಳಿಸಿದರು.
"ಕಲಬುರಗಿ, ರಾವೂರ ಗ್ರಾಮ ವಾಡಿಗೆ ಸಂಚರಿಸುವ ಟ್ರಕ್‌ಗಳ ಕೇಂದ್ರವಾಗಬಹುದು. ಟ್ರಕ್ಕರ್‌ಗಳಿಗೆ ಅಗತ್ಯವಿರುವ ಸೇವೆಗಳೊಂದಿಗೆ ಪಂಚಾಯತ್ ಟ್ರಕ್ ಟರ್ಮಿನಲ್ ಮಾಡಬಹುದು. ಇದರಿಂದ ಪಂಚಾಯಿತಿಗೆ ವ್ಯಾಪಾರ ಆಗಬಹುದು. ನಂದಿನಿ ಹಾಲಿನ ಪಾರ್ಲರ್‌ಗಳನ್ನು ಸ್ಥಾಪಿಸಲು ಪಂಚಾಯತ್ ಜಾಗವನ್ನು ಸಹ ನೀಡಬಹುದು," ಎಂದು ಸಚಿವರು ವಿವರಿಸಿದರು.
"ಆದರೆ ರಾಷ್ಟ್ರೀಯ ಹಣಗಳಿಕೆ ಯೋಜನೆ (ಎನ್‌ಎಂಪಿ) ಪಂಚಾಯತ್‌ಗಳನ್ನು ಒಳಗೊಂಡಿಲ್ಲ. ನಾವು ಪ್ರಯತ್ನಿಸುತ್ತಿರುವುದನ್ನು ದೇಶದಲ್ಲಿ ಎಲ್ಲಿಯೂ ಮಾಡಲಾಗಿಲ್ಲ," ಎಂದು ಪ್ರಿಯಾಂಕ್ ಹೇಳಿದರು.
ಇನ್ನು 2021 ರಲ್ಲಿ, ಕೇಂದ್ರ ಸರ್ಕಾರವು ಗ್ರಾಮ ಪಂಚಾಯತಿಗಳಿಗೆ ಆಸ್ತಿ ಹಣಗಳಿಕೆಯನ್ನು ಪರಿಗಣಿಸುವಂತೆ ಸಲಹೆಯನ್ನು ನೀಡಿದೆ. 2021 ರಲ್ಲಿ, ಕೇಂದ್ರ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಎನ್‌ಎಂಪಿ ಅನ್ನು ನಾಲ್ಕು ವರ್ಷಗಳ ಅವಧಿಯಲ್ಲಿ 6 ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸಲು ಖಾಸಗಿ ಸಂಸ್ಥೆಗಳಿಗೆ ಪ್ರಮುಖ ಮೂಲಸೌಕರ್ಯ ಆಸ್ತಿಗಳನ್ನು ಗುತ್ತಿಗೆ ನೀಡುವ ಗುರಿಯನ್ನು ಹೊಂದಿದೆ.


Click it and Unblock the Notifications