ಭಾರತದಲ್ಲಿ ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣವನ್ನು ವಿತ್‌ಡ್ರಾ ಮಾಡುವ ಪ್ರಮಾಣವು ಅಧಿಕವಾಗಿದೆ. 2023ರ ಮಾರ್ಚ್‌ನಲ್ಲಿ ಭಾರತದಲ್ಲಿ ಎಟಿಎಂಗಳಲ್ಲಿ ಒಟ್ಟಾಗಿ 2.85 ಲಕ್ಷ ಕೋಟಿ ರೂಪಾಯಿ ವಿತ್‌ಡ್ರಾ ಮಾಡಲಾಗಿದೆ. ಡಿಸೆಂಬರ್ 2016ರಲ್ಲಿ ಎಟಿಎಂಗಳಿಂದ 84,934 ಕೋಟಿ ರೂಪಾಯಿ ವಿತ್‌ಡ್ರಾ ಮಾಡಲಾಗಿದೆ. ಇದಕ್ಕೆ ಹೋಲಿಕೆ ಮಾಡಿದಾಗ ವಿತ್‌ಡ್ರಾ ಪ್ರಮಾಣ ಶೇಕಡ 235ರಷ್ಟು ಏರಿಕೆಯಾಗಿದೆ.
ಬ್ಯಾಂಕಿಂಗ್ ಲಾಜಿಸ್ಟಿಕ್ಸ್ ಸೇವೆಗಳನ್ನು ಒದಗಿಸುವ ಸಿಎಂಎಸ್ ಮಾಹಿತಿ ವ್ಯವಸ್ಥೆ (CMS Info Systems) ವರದಿಯಲ್ಲಿ ಈ ಉಲ್ಲೇಖವನ್ನು ಮಾಡಲಾಗಿದೆ. ಸಿಎಂಎಸ್ ಇಂಡಿಯಾ ಕ್ಯಾಶ್ ವೈಬ್ರೆನ್ಸಿ ವರದಿ 2023ರಲ್ಲಿ ಡಿಸೆಂಬರ್ 2016ರಲ್ಲಿ ಡೆಬಿಟ್ ಕಾರ್ಡ್ ಅನ್ನು ಬಳಸಿ ಎಟಿಎಂಗಳಲ್ಲಿ ಅತೀ ಕಡಿಮೆ ಹಣವನ್ನು ವಿತ್‌ಡ್ರಾ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

2016ರಲ್ಲಿ 500 ರೂಪಾಯಿ ಹಾಗೂ 1000 ರೂಪಾಯಿಯ ನೋಟನ್ನು ಕೇಂದ್ರ ಸರ್ಕಾರವು ಅಪನಗದೀಕರಣ ಮಾಡಿದ ಒಂದು ತಿಂಗಳ ಬಳಿಕ ಡಿಸೆಂಬರ್ 2016ರಲ್ಲಿ ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಬಳಸಿ ನಗದು ವಿತ್‌ಡ್ರಾ ಪ್ರಮಾಣ ಕಡಿಮೆಯಾಗಿದೆ ಎಂದು ಸಿಎಂಎಸ್ ಇಂಡಿಯಾ ಕ್ಯಾಶ್ ವೈಬ್ರೆನ್ಸಿ ವರದಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಎಟಿಎಂಗಳಲ್ಲಿ ಅಧಿಕ ನಗದು
2023ರಲ್ಲಿ ಕರ್ನಾಟಕದಲ್ಲಿ ಅಧಿಕ ಎಟಿಎಂಗಳಲ್ಲಿ ಹಣ ವಿತ್‌ಡ್ರಾ ಮಾಡಲಾಗಿದೆ. ಪ್ರತಿ ಎಟಿಎಂಗಳಲ್ಲಿ 1.73 ಕೋಟಿ ರೂಪಾಯಿ ಇರಿಸಲಾಗಿದೆ. ಹಣಕಾಸು ವರ್ಷ 2022ಕ್ಕೆ ಹೋಲಿಕೆ ಮಾಡಿದಾಗ ಈ ನಗದು ಪ್ರಮಾಣ ಶೇಕಡ 18.14ರಷ್ಟು ಅಧಿಕವಾಗಿದೆ. 2022ರಲ್ಲಿ ಕರ್ನಾಟಕದಲ್ಲಿ ಪ್ರತಿ ಎಟಿಎಂಗಳಲ್ಲಿ 1.46 ಕೋಟಿ ರೂಪಾಯಿ ಇರಿಸಲಾಗಿತ್ತು.
ಇನ್ನು ಪ್ರತಿ ಎಟಿಎಂಗೆ ಸರಾಸರಿ ಎಟಿಎಂ ನಗದು ಇರಿಸುವಿಕೆ ಅತ್ಯಧಿಕ ವಾರ್ಷಿಕ ಬೆಳವಣಿಗೆಗೆ ಸಂಬಂಧಿಸಿದಂತೆ, ದೆಹಲಿ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರಗಳು ಹಿಂದಿನ ಹಣಕಾಸು ವರ್ಷದಲ್ಲಿ ಕ್ರಮವಾಗಿ ಶೇಕಡ 23.78, ಶೇಕಡ 18.14, ಶೇಕಡ 15.77, ಶೇಕಡ 14.67 ಮತ್ತು ಶೇಕಡ 13.69ರಷ್ಟು ಬೆಳವಣಿಗೆಯನ್ನು ಕಂಡಿವೆ.
ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಕರ್ನಾಟಕ ಮತ್ತು ಉತ್ತರ ಪ್ರದೇಶವು ಗರಿಷ್ಠ ಜಿಎಸ್‌ಡಿಪಿ ಹೊಂದಿರುವ ಮೊದಲ ಐದು ರಾಜ್ಯಗಳಾಗಿವೆ. ಒಟ್ಟಾರೆಯಾಗಿ, ಈ ರಾಜ್ಯಗಳು 2022-23ರ ಅವಧಿಯಲ್ಲಿ ಎಟಿಎಂನಲ್ಲಿ ಇರಿಸಲಾಗುವ ಒಟ್ಟು ಮೊತ್ತದ ಶೇಕಡ 43.10ರಷ್ಟು ಪಾಲನ್ನು ಹೊಂದಿದೆ.
ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಮಾರ್ಚ್‌ನಲ್ಲಿ ಎಟಿಎಂಗಳಲ್ಲಿ 2.86 ಲಕ್ಷ ಕೋಟಿ ರೂಪಾಯಗಳನ್ನು ವಿತ್‌ಡ್ರಾ ಮಾಡಲಾಗಿದೆ. ಈ ಪೈಕಿ 396 ಕೋಟಿ ರೂಪಾಯಿಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಮತ್ತು 1,411 ಕೋಟಿ ರೂಪಾಯಿಗಳನ್ನು ಪ್ರಿಪೇಯ್ಡ್ ಕಾರ್ಡ್ ಬಳಸಿ ವಿತ್‌ಡ್ರಾ ಮಾಡಲಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ ಎಟಿಎಂ ನಗದು ವಿತ್‌ಡ್ರಾ ಮೌಲ್ಯವು 33.04 ಲಕ್ಷ ಕೋಟಿ ರೂಪಾಯಿ ಆಗಿದೆ.
"ನೋಟು ಅಪನಗದೀಕರಣ ಮಾಡಿದ ಬಳಿಕ ಚಲಾವಣೆಯಲ್ಲಿರುವ ಕರೆನ್ಸಿ (ಸಿಐಸಿ) 2016 ರ ಅಕ್ಟೋಬರ್‌ನಲ್ಲಿ 17.78 ಲಕ್ಷ ಕೋಟಿ ರೂಪಾಯಿಯಿಂದ 2016 ರ ನವೆಂಬರ್‌ನಲ್ಲಿ 1.88 ಲಕ್ಷ ಕೋಟಿ ರೂಪಾಯಿಗೆ ಅಂದರೆ ಸುಮಾರು ಶೇಕಡ 33.14ರಷ್ಟು ಕುಸಿತವನ್ನು ಕಂಡಿದೆ. ಆದರೆ ಅದಾದ ಬಳಿಕ ಪ್ರಸ್ತುತ ಚಲಾವಣೆಯಲ್ಲಿರುವ ನೋಟು ಪ್ರಮಾಣ ಹೆಚ್ಚಳವಾಗಿದೆ. ಮಾರ್ಚ್ 2023 ರಲ್ಲಿ ಶೇಕಡ 258.39ರಷ್ಟು ಏರಿಕೆಯಾಗಿದೆ," ಎಂದು ವರದಿಯು ಹೇಳಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications