ಕೆಲಸ ಸರ್ಕಾರವು ಉದ್ಯೋಗ ಅವಧಿಯ ವಿಚಾರದಲ್ಲಿ ಮಹತ್ವ ಹೆಜ್ಜೆಯನ್ನು ಇಟ್ಟಿದೆ. ವಿಶೇಷ ಅಗತ್ಯವುಳ್ಳ ಮಕ್ಕಳ ಪೋಷಕರಿಗೆ ಕೆಲಸದ ಸಮಯವನ್ನು ಸಡಿಲಿಸುವ ಮೂಲಕ ಅವರಿಗೆ ಬೆಂಬಲ ನೀಡಲು ಕೇರಳ ಸರ್ಕಾರವು ನಿರ್ಧಾರ ಮಾಡಿದೆ. ಶೇಕಡ 40 ಅಥವಾ ಅದಕ್ಕಿಂತ ಅಧಿಕ ಅಂಗವೈಕಲ್ಯ ಹೊಂದಿರುವ ಮಕ್ಕಳ ಪೋಷಕರಾಗಿರುವ ಸರ್ಕಾರಿ ನೌಕರರು ಮಾಸಿಕ 16 ಗಂಟೆಗಳ ಕೆಲಸದ ಅವಧಿ ಮನ್ನಾ ಪಡೆಯಬಹುದಾಗಿದೆ.
ಹೌದು ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ, "ಈ ನಿರ್ಧಾರವು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸರ್ಕಾರದ ಧ್ಯೇಯೋದ್ದೇಶದ ಒಂದು ಭಾಗವಾಗಿದೆ. ಜನಸ್ನೇಹಿ ಸರ್ಕಾರ ರಚಿಸುವುದು ಮುಖ್ಯ ಉದ್ದೇಶವಾಗಿದೆ. ಈ ಕ್ರಮವು ಪೋಷಕರಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಅವರಿಗೆ ಅಗತ್ಯ ಸಹಕಾರವನ್ನು ನೀಡಲು ಸಹಾಯ ಮಾಡುತ್ತದೆ," ಎಂದು ತಿಳಿಸಿದ್ದಾರೆ.

ಕೇರಳ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದ್ದೇಕೆ?
ತಿಂಗಳಿಗೆ 16 ಗಂಟೆಗಳ ಕಾಲ ಕೆಲಸದ ಅವಧಿಯನ್ನು ಮನ್ನಾ ಮಾಡಲಾಗಿದ್ದು, ತಮ್ಮ ಕೆಲಸ ಮತ್ತು ತಮ್ಮ ಮಕ್ಕಳ ಆರೈಕೆಯ ನಡುವೆ ಪೋಷಕರಿಗೆ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯವಾಗಲಿದೆ. ಈ ನಿರ್ಧಾರವು ಪೋಷಕರು ತಮ್ಮ ವಿಶೇಷಚೇತನ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಮತ್ತು ಅವರಿಗೆ ವಿಶೇಷ ಗಮನವನ್ನು ಹರಿಸಲು ಅವಕಾಶ ನೀಡುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಕೇರಳ ಸರ್ಕಾರದ ಈ ನಿರ್ಧಾರವು ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಸರ್ಕಾರವನ್ನು ಶ್ಲಾಘಿಸಲಾಗುತ್ತಿದೆ. ಹೆಚ್ಚು ಸಹಾನುಭೂತಿ ಮತ್ತು ಸಮಾನ ಸಮಾಜವನ್ನು ನಿರ್ಮಿಸುವ ಪ್ರಮುಖ ಹೆಜ್ಜೆ ಇದು ಎಂದು ವಿವರಿಸಲಾಗಿದೆ.
ಭಾರತದಲ್ಲಿ ಸಾಮಾನ್ಯ ಕೆಲಸದ ನಿಯಮಗಳು
ಕಳೆದ ವರ್ಷ, ಕೇಂದ್ರ ಸರ್ಕಾರವು ಭಾರತದಲ್ಲಿ ಹಲವಾರು ಕಾರ್ಮಿಕ, ಉದ್ಯೋಗ ಮತ್ತು ಕೆಲಸದ ಕಾನೂನುಗಳನ್ನು ಒಟ್ಟುಗೂಡಿಸಿ ನಾಲ್ಕು ಕಾರ್ಮಿಕ ಕೋಡ್‌ಗಳನ್ನು ರಚಿಸಿದೆ.
ವೇತನಗಳ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಕೋಡ್ 2020, ಸಾಮಾಜಿಕ ಭದ್ರತೆ 2020, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಷರತ್ತುಗಳ ಕೋಡ್ 2020 ಈ ಪ್ರಮುಖ ನಾಲ್ಕು ಕೋಡ್‌ಗಳಾಗಿದೆ. ಈ ಕೋಡ್‌ಗಳನ್ನು ಸಾಮಾನ್ಯ ಮಾಹಿತಿಗಾಗಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಕಾರ್ಮಿಕ ಸಂಹಿತೆಗಳ ಪ್ರಕಾರ, ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸಲು ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಸಕಾಲಿಕ ವೇತನ ಪಾವತಿಗೆ ಶಾಸನಬದ್ಧ ಹಕ್ಕನ್ನು ಒದಗಿಸಲಾಗಿದೆ.
ಇದಲ್ಲದೆ, ಕಾರ್ಮಿಕ ಸಂಹಿತೆಗಳ ಪ್ರಕಾರ ಪ್ರತಿ ಕೆಲಸಗಾರನಿಗೆ 180 ದಿನಗಳವರೆಗೆ ಕೆಲಸ ಮಾಡಿದ ನಂತರ ವೇತನದೊಂದಿಗೆ ವಾರ್ಷಿಕ ರಜೆಗೆ ಅರ್ಹತೆ ಇದೆ. ಈ ಹಿಂದೆ 240 ದಿನಗಳವರೆಗೆ ಕೆಲಸ ಮಾಡಿದ ನಂತರ ವೇತನದೊಂದಿಗೆ ವಾರ್ಷಿಕ ರಜೆಗೆ ಅರ್ಹತೆ ಇತ್ತು. ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಸೇವೆಯಲ್ಲಿರುವಾಗ ರಜೆಯನ್ನು ಪಡೆದುಕೊಳ್ಳುವ ಅವಕಾಶವು ಇದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications