ಕೊಟಕ್ ವೆಲ್ತ್ ಮತ್ತು ಹ್ಯುರನ್ ಇಂಡಿಯಾದ ಅಧ್ಯಯನದ ಪ್ರಕಾರ ಎಚ್ ಸಿಎಲ್ ಟೆಕ್ನಾಲಜೀಸ್ ಮುಖ್ಯಸ್ಥೆ ರೋಷನಿ ನಾಡಾರ್ ಮಲ್ಹೋತ್ರ 2020ರಲ್ಲಿ ಭಾರತದ ಅತ್ಯಂತ ಶ್ರೀಮಂತೆ ಎನಿಸಿಕೊಂಡಿದ್ದಾರೆ. ಅವರ ನಿವ್ವಳ ಆಸ್ತಿ 54,850 ಕೋಟಿ ರುಪಾಯಿ ಎಂದು ತಿಳಿಸಲಾಗಿದೆ.
ರೋಷನಿ ನಂತರದ ಸ್ಥಾನದಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಇದ್ದು, ನಿವ್ವಳ ಆಸ್ತಿ 36,600 ಕೋಟಿ ರುಪಾಯಿ ಇದೆ. ಇನ್ನು ಯುಎಸ್ ವಿ ಮುಖ್ಯಸ್ಥೆ ಲೀನಾ ಗಾಂಧಿ ತಿವಾರಿ ಬಳಿ 21,340 ಕೋಟಿ ರುಪಾಯಿ ಆಸ್ತಿ ಇದ್ದು, ಮೂರನೇ ಸ್ಥಾನದಲ್ಲಿ ಇದ್ದಾರೆ.
ಅಂದ ಹಾಗೆ, ಈ ಪಟ್ಟಿಯಲ್ಲಿ ಇರುವ 100 ಮಹಿಳೆಯರ ಒಟ್ಟು ಆಸ್ತಿ 2.73 ಲಕ್ಷ ಕೋಟಿ ರುಪಾಯಿ ಇದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ. ಅವರ ಸರಾಸರಿ ವಯಸ್ಸು 53 ವರ್ಷ. ಕೊಟಕ್ ವೆಲ್ತ್ ಹ್ಯುರನ್ ಭಾರತದ ಟಾಪ್ ಟೆನ್ ಶ್ರೀಮಂತ ಮಹಿಳೆಯರು ಹಾಗೂ ಅವರ ಬಳಿ ಇರುವ ಆಸ್ತಿ ಮೌಲ್ಯದ ವಿವರ ಹೀಗಿದೆ:

* ರೋಷನಿ ನಾಡಾರ್ ಮಲ್ಹೋತ್ರಾ 54850 ಕೋಟಿ
* ಕಿರಣ್ ಮಜುಂದಾರ್ ಷಾ 36600 ಕೋಟಿ
* ಲೀನಾ ಗಾಂಧಿ ತಿವಾರಿ 21340 ಕೋಟಿ
* ನೀಲಿಮಾ ಮೋಟಪರ್ತಿ 18620 ಕೋಟಿ
* ರಾಧಾ ವೆಂಬು 11590 ಕೋಟಿ
* ಜಯಶ್ರೀ ಉಲ್ಲಾಳ್ 10200 ಕೋಟಿ
* ರೇಣು ಮುಂಜಲ್ 8690 ಕೋಟಿ
* ಮಲಿಕಾ ಚಿರಾಯು ಅಮಿನ್ 7570 ಕೋಟಿ


Click it and Unblock the Notifications