ಬೆಂಗಳೂರು, ಏಪ್ರಿಲ್ 4: ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್)ಯು ಹೀಲಲಿಗೆಯಿಂದ ಬೆಂಗಳೂರಿನ ರಾಜಾನುಕುಂಟೆವರೆಗೆ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) ಕಾರಿಡಾರ್ 4 ನಿರ್ಮಾಣಕ್ಕಾಗಿ 114.472 ಎಕರೆ ಭೂಮಿಯನ್ನು ನೀಡಿದೆ.
ನೈಋತ್ಯ ರೈಲ್ವೇಯು ಈ ಭೂಮಿಯನ್ನು ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ-ಕರ್ನಾಟಕ ಲಿಮಿಟೆಡ್‌ಗೆ (ಕೆ-ರೈಡ್) ಹಸ್ತಾಂತರಿಸಿದೆ. ಇದು ಯೋಜನೆಯನ್ನು ಕಾರ್ಯಗತಗೊಳಿಸುವ ಉಸ್ತುವಾರಿ ವಹಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಕಾರಿಡಾರ್-2 (ಮಲ್ಲಿಗೆ ಲೈನ್) ಗಾಗಿ 157.07 ಎಕರೆಯಿಂದ 85.707 ಎಕರೆಗೆ ಪರಿಷ್ಕೃತ ರೈಲ್ವೆ ಭೂಮಿಗೆ ಗುತ್ತಿಗೆ ಒಪ್ಪಂದಕ್ಕೂ ಸಹ ಇಂದು ಸಹಿ ಹಾಕಲಾಗಿದೆ.

ಈ ಭೂಮಿ ಹಸ್ತಾಂತರವು ರೈಲ್ವೆ ಯೋಜನೆಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಆಮೆ ವೇಗದಲ್ಲಿ ನಡೆಯುತ್ತಿದೆ ಎಂದು ಯೋಜನೆಗೆ ಸಂಬಂಧಿಸಿದ ಮೂಲಗಳು ಏಜೆನ್ಸಿಗೆ ತಿಳಿಸಿವೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಡಿಸೆಂಬರ್ 2025 ರಿಂದ ಡಿಸೆಂಬರ್ 2027 ಕ್ಕೆ ಯೋಜನೆ ಪೂರ್ಣಗೊಳಿಸುವ ದಿನಾಂಕವನ್ನು ಮುಂದೂಡಿದ ನಂತರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾರ್ಚ್ ಮಧ್ಯದಲ್ಲಿ ಮುಂಬರುವ ಯೋಜನೆಯನ್ನು ವೇಗಗೊಳಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರೈಲ್ವೆ ತಾಂತ್ರಿಕ ವಿಷಯವಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಅರ್ಥಮಾಡಿಕೊಳ್ಳಬೇಕು. ತಾಂತ್ರಿಕ ಜನರನ್ನು ಕೆ-ರೈಡ್‌ಗೆ ನೀಡಬೇಕು. ಸದ್ಯ ಇದು ಹೆಚ್ಚಿನ ತಾಂತ್ರಿಕ ಪರಿಣತಿ ಹೊಂದಿರುವ ಜನರನ್ನು ಹೊಂದಿಲ್ಲ. ಅಂತಹ ತಜ್ಞರನ್ನು ಬಳಸಿಕೊಳ್ಳಲು ನಾನು ಕರ್ನಾಟಕ ಸರ್ಕಾರವನ್ನು ವಿನಂತಿಸುತ್ತೇನೆ, ಇದರಿಂದ ಯೋಜನೆಯ ಕೆಲಸವನ್ನು ತ್ವರಿತಗೊಳಿಸಬಹುದು ಎಂದು ವೈಷ್ಣವ್ ಹೇಳಿದ್ದಾರೆ.
ಬೆಂಗಳೂರು ಉಪನಗರ ರೈಲ್ವೇ ಯೋಜನೆಯು ಸಾವಿರಾರು ಜನರ ದೃಷ್ಟಿಯಿಂದ ಬಹಳ ಮುಖ್ಯವಾದ ಯೋಜನೆಯಾಗಿದೆ. ಆದರೆ ದುರದೃಷ್ಟವಶಾತ್ ಪ್ರಸ್ತುತ ಕೆ-ರೈಡ್‌ಗೆ ಇರಬೇಕಾದ ಪರಿಣತಿಯ ಕೊರತೆಯಿದೆ. ದೇಶದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪರಿವರ್ತಿಸಿದ ಇ ಶ್ರೀಧರನ್ ಅವರಂತಹ ಜನರು ನಮಗೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.


Click it and Unblock the Notifications