ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) 21,000 ಕೋಟಿ ರೂಪಾಯಿ ಮೊತ್ತದ ಐಪಿಒ, ಭಾರತದ ಅತಿದೊಡ್ಡ ಸಾರ್ವಜನಿಕ ವಿತರಣೆಗೆ ಗುರುವಾರ ಎರಡನೇ ದಿನದ ಬಿಡ್ಡಿಂಗ್‌ನಲ್ಲಿ ಶೇ 100 ರಷ್ಟು ಚಂದಾದಾರಿಕೆಯಾಗಿದೆ. ಎಲ್‌ಐಸಿ ಷೇರುಗಳನ್ನು ಮೇ 17 ರಂದು ಪಟ್ಟಿ ಮಾಡಲಾಗುತ್ತದೆ.
ಸಂಜೆ 6:27 ರ ಹೊತ್ತಿಗೆ, ಹೂಡಿಕೆದಾರರು 16.26 ಕೋಟಿ ಷೇರುಗಳಿಗೆ ಬಿಡ್ ಮಾಡಿದ್ದಾರೆ. ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಈಗಾಗಲೇ ಸಂಪೂರ್ಣವಾಗಿ ಚಂದಾದಾರಿಕೆ ನಡೆದಿದೆ. ನಿನ್ನೆಯೇ ಸಂಪೂರ್ಣ ಚಂದಾದಾರಿಕೆಯಾಗಿದೆ.
ಪಾಲಿಸಿದಾರರಿಗೆ 3.02 ಪಟ್ಟು, ಉದ್ಯೋಗಿಗಳು 2.14 ಪಟ್ಟು, ಚಿಲ್ಲರೆ ಹೂಡಿಕೆದಾರರು 0.91 ಪಟ್ಟು, ಸಾಂಸ್ಥಿಕವಲ್ಲದ ಹೂಡಿಕೆದಾರರು 0.46 ಪಟ್ಟು ಮತ್ತು ಅರ್ಹ ಸಾಂಸ್ಥಿಕ ಖರೀದಿದಾರರು 0.40 ಪಟ್ಟು ಚಂದಾದಾರರಾಗಿದ್ದಾರೆ.
ಈ ಎಲ್‌ಐಸಿ ಐಪಿಒ ಮೂಲಕ ಕೇಂದ್ರ ಸರ್ಕಾರವು ನಿಗಮದಲ್ಲಿನ ತನ್ನ 3.5 ಪ್ರತಿಶತ ಪಾಲನ್ನು ಮಾರಾಟ ಮಾಡಲಿದೆ. ಪ್ರತಿ ಷೇರಿಗೆ ರೂ 902 - 949 ರ ಬೆಲೆ ಇದ್ದು ಒಟ್ಟು ಸುಮಾರು 21,000 ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

ಚಂದಾದಾರಿಕೆಯು ಉದ್ಯೋಗಿಗಳಿಗೆ ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಪ್ರತಿ ಷೇರಿಗೆ 45 ರೂಪಾಯಿ ರಿಯಾಯಿತಿಯನ್ನು ನೀಡುತ್ತದೆ. ಎಲ್ಐಸಿ ಪಾಲಿಸಿದಾರರಿಗೆ ಪ್ರತಿ ಷೇರಿಗೆ 60 ರೂಪಾಯಿ ರಿಯಾಯಿತಿ ನೀಡಲಾಗುವುದು. ಮಧ್ಯಾಹ್ನ 12:18 ರ ಹೊತ್ತಿಗೆ, ಹೂಡಿಕೆದಾರರು 13.17 ಕೋಟಿ ಷೇರುಗಳಿಗೆ ಬಿಡ್ ಮಾಡಿದ್ದಾರೆ.
ಮೊದಲ ದಿನದ ಪ್ರಮುಖ ಬೆಳವಣಿಗೆಗಳು
ಭಾರತೀಯ ಮಾರುಕಟ್ಟೆಗಳ ಇತಿಹಾಸದಲ್ಲಿ ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ), ಮೇ 4 ರಂದು ಬಿಡ್ಡಿಂಗ್‌ನ ಮೊದಲ ದಿನದಲ್ಲಿ 67 ಪ್ರತಿಶತದಷ್ಟು ಚಂದಾದಾರಿಕೆಯಾಗಿದೆ. ಮೊದಲ ದಿನವೇ ಷೇರು ಕೊಳ್ಳಲು ಭಾರೀ ಪೈಪೋಟಿ ನಡೆದಿದೆ. ಸಂಜೆ 6:48 ರ ಹೊತ್ತಿಗೆ, ಎಲ್ಐಸಿಯ ಐಪಿಒ ಹರಾಜಿನ ಮೊದಲ ದಿನದ ಎಂಟು ಗಂಟೆಗಳಲ್ಲಿ ಶೇಕಡಾ 65 ರಷ್ಟು ಚಂದಾದಾರಿಕೆಯಾಗಿದೆ. ಮೊದಲ ದಿನ ಮಧ್ಯಾಹ್ನದವರೆಗೆ ಶೇಕಡ 39 ಷೇರಿಗೆ ಅರ್ಜಿ ಸಲ್ಲಿಕೆಯಾಗಿದೆ. ಚಂದಾದಾರಿಕೆ ಆರಂಭವಾದ ಹತ್ತು ನಿಮಿಷದಲ್ಲೇ ಶೇಕಡ 1ರಷ್ಟು ಚಂದಾದಾರಿಕೆಗೆ ಅರ್ಜಿ ಸಲ್ಲಿಸಲಾಗಿದೆ.
ಬಿಡ್ಡಿಂಗ್ ಆರಂಭವಾದ ಅರ್ಧ ಗಂಟೆಯಲ್ಲೇ ಶೇಕಡ 4ರಷ್ಟು ಮಂದಿ ಚಂದಾದಾರಿಕೆ ಮಾಡಿಕೊಂಡಿದ್ದಾರೆ. ಇನ್ನು ಒಂದು ಗಂಟೆಯಲ್ಲೇ ಶೇಕಡ 12ರಷ್ಟು ಚಂದಾದಾರಿಕೆಗೆ ಅರ್ಜಿಗಳು ಸಲ್ಲಿಕೆಯಾಗಿದೆ. ಎಲ್‌ಐಸಿ ಐಪಿಒ ಮೇ 9 ರಂದು ಮುಕ್ತಾಯಗೊಳ್ಳಲಿದೆ. ಆದರೆ ಮೊದಲ ದಿನದಂದು ನಡೆದ ಚಂದಾದಾರಿಕೆಯೇ ಮುಂದುವರಿದರೆ ಎರಡನೇ ದಿನವೇ ಚಂದಾದಾರಿಕೆ ಸಂಪೂರ್ಣವಾಗುವ ನಿರೀಕ್ಷೆ ಇತ್ತು. ಅದರಂತೆ ಎರಡನೇ ದಿನವೇ ಸಂಪೂರ್ಣ ಬಿಡ್ಡಿಂಗ್ ಆಗಿದೆ.


Click it and Unblock the Notifications