ಭಾರತೀಯ ಜೀವ ವಿಮಾ ನಿಗಮದ ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೇ 4 ರಿಂದ ಆರಂಭ ಆಗಲಿದೆ ಹಾಗೂ ಆಫರ್ ಬೆಲೆ 902 ರು ನಿಂದ 949 ರು ಎಂದು ನಿಗದಿ ಪಡಿಸಲಾಗಿದೆ, ಮೇ 4-9 ರಿಂದ 3.5% ಈಕ್ವಿಟಿಯೊಂದಿಗೆ ಚಂದಾದಾರಿಕೆ ಮತ್ತು ಪಾಲಿಸಿದಾರರಿಗೆ ಮತ್ತು ಚಿಲ್ಲರೆ ಹೂಡಿಕೆದಾರರಿಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ ಎಂದು ಭಾರತೀಯ ಜೀವ ವಿಮಾ ನಿಗಮದ ಮಹತ್ವದ ಸುದ್ದಿಗೋಷ್ಠಿಯಲ್ಲಿ DIPAM ಕಾರ್ಯದರ್ಶಿ ತುಹಿಂ ಕಾಂತಾ ಪಾಂಡೆ ಹೇಳಿದರು.
ಈ ವಿಮಾ ಸಂಸ್ಥೆಯಲ್ಲಿ ಸಂಪೂರ್ಣ ಪಾಲುದಾರಿಕೆಯನ್ನು ಹೊಂದಿರುವ ಸರ್ಕಾರವು ಸುಮಾರು 22 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ 21,000 ಕೋಟಿ ರೂಪಾಯಿ($2.74 billion)ಗಳನ್ನು ಸಂಗ್ರಹಿಸಲು ಯೋಜಿಸಿದೆ. ಅಂದರೆ ಸರ್ಕಾರವು ಎಲ್‌ಐಸಿಯ ಸುಮಾರು ಶೇಕಡ 3.5 ಪಾಲನ್ನು ಮಾರಾಟ ಮಾಡಲು ಮುಂದಾಗಿದೆ.
ಸುದ್ದಿಗೋಷ್ಠಿ ಮುಖ್ಯಾಂಶಗಳು ಇಲ್ಲಿದೆ:
* ಆಫರ್ ಬೆಲೆ ನಿಗದಿ ಬಳಿಕ ಸರ್ಕಾರವು ಸುಮಾರು 2.61 ಬಿಲಿಯನ್ ಡಾಲರ್ ಗಳಿಸುವ ನಿರೀಕ್ಷೆಯಿದೆ. ಎಲ್ಐ ಸಿ ಐಪಿಒ ಮೇ 2ಕ್ಕೆ ಓಪನ್ ಆಗಲಿದೆ. ಆದರೆ, ಚಂದಾದರಿಕೆಗೆ ಮೇ 4ರಿಂದ ಹೂಡಿಕೆಗೆ ಅವಕಾಶ, ಮೇ 9ಕ್ಕೆ ಆಫರ್ ಕ್ಲೋಸ್ ಆಗಲಿದೆ. ಇಶ್ಶ್ಯೂ ಪ್ರಮಾಣ 20,557 ಕೋಟಿ ರು ಎಂದು ಅಂದಾಜಿಸಲಾಗಿದೆ.

* ಉದ್ಯೋಗಿಗಳು ಮತ್ತು ಚಿಲ್ಲರೆ ಹೂಡಿಕೆದಾರರಿಗೆ ರೂ.45/ಷೇರಿಗೆ ರಿಯಾಯಿತಿ ನೀಡಲಾಗುವುದು, ಎಲ್ಐಸಿ ಪಾಲಿಸಿದಾರರು ರೂ.60/ಷೇರಿಗೆ ರಿಯಾಯಿತಿಯನ್ನು ಪಡೆಯುತ್ತಾರೆ.
ಐಪಿಒ ಅರ್ಜಿ ಹಾಕುವುದು ಹೇಗೆ? ಈ ಕೆಳಗಿನ ವೆಬ್ ಸ್ಟೋರಿ ನೋಡಿ
* ಪಾಲಿಸಿದಾರರು ಮತ್ತು ಷೇರುದಾರರಲ್ಲದೆ, ಉಳಿದ ಷೇರುಗಳನ್ನು ಹೀಗೆ ಹಂಚಲಾಗುತ್ತದೆ: 50 ಪ್ರತಿಶತ ಅರ್ಹ ಸಾಂಸ್ಥಿಕ ಖರೀದಿದಾರರಿಗೆ (QIBs), 35 ಪ್ರತಿಶತ ಚಿಲ್ಲರೆ ಖರೀದಿದಾರರಿಗೆ ಮತ್ತು 15 ಪ್ರತಿಶತ ಸಾಂಸ್ಥಿಕ ಹೂಡಿಕೆದಾರರಿಗೆ. 50 ಪ್ರತಿಶತ QIB ಹಂಚಿಕೆಯಲ್ಲಿ, 60 ಪ್ರತಿಶತವನ್ನು ಆಂಕರ್ ಹೂಡಿಕೆದಾರರಿಗೆ ಮೀಸಲಿಡಲಾಗುತ್ತದೆ.
* ಅಹಮದಾಬಾದ್, ಬೆಂಗಳೂರು, ಕೋಲ್ಕತ್ತಾ, ಮುಂಬೈ, ನವದೆಹಲಿ ಮತ್ತು ರಾಜ್‌ಕೋಟ್‌ನಾದ್ಯಂತ ನಿರೀಕ್ಷಿತ ಹೂಡಿಕೆದಾರರು ಮತ್ತು ವಿಶ್ಲೇಷಕರ ರೋಡ್‌ಶೋಗಳು ಈ ವಾರದೊಳಗೆ ಕೊನೆಗೊಳ್ಳುತ್ತವೆ. ಇತರ ಪ್ರದೇಶಗಳಲ್ಲಿ ಹೂಡಿಕೆದಾರರಿಗೆ ಆನ್‌ಲೈನ್ ರೋಡ್‌ಶೋಗಳು ಮುಂದುವರಿಯಲಿವೆ ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.
ಎಲ್ಐಸಿ 6 ಟ್ರಿಲಿಯನ್ ರೂಪಾಯಿ ಮೌಲ್ಯದ್ದಾಗಿದೆ. ಇದು ಸರ್ಕಾರದ ಪರಿಷ್ಕೃತ ಅಂದಾಜಿನ ಪ್ರಕಾರ 5.39 ಟ್ರಿಲಿಯನ್‌ನ ಮೂಲ ಮೌಲ್ಯದ ಕೇವಲ 1.1 ಪಟ್ಟು ಹೆಚ್ಚಾಗಿದೆ. ಸರ್ಕಾರವು ಆರಂಭದಲ್ಲಿ ಮಾರ್ಚ್ 31 ಕ್ಕೆ ಕೊನೆಗೊಂಡ ಕಳೆದ ಹಣಕಾಸು ವರ್ಷದಲ್ಲಿ ಎಲ್‌ಐಸಿ ಐಪಿಒ ಅನ್ನು ಆರಂಭ ಮಾಡಲು ಮುಂದಾಗಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ಎಲ್‌ಐಸಿ ಐಪಿಒ ವಿಳಂಬವಾಗಿದೆ.


Click it and Unblock the Notifications