ರೂ.675ಕ್ಕಿಂತ ಕೆಳಕ್ಕೆ ಇಳಿದ ಎಲ್‌ಐಸಿ ಷೇರು: ಶೇ.30ರಷ್ಟು ಕುಸಿತ

ಭಾರತದ ಪ್ರಮುಖ ವಿಮಾ ಸಂಸ್ಥೆಯಾದ ಎಲ್‌ಐಸಿ ಷೇರುಗಳು ಭಾರೀ ಇಳಿಕೆಯನ್ನು ಕಾಣುತ್ತಿದೆ. ನಿರಂತರವಾಗಿ ಇಳಿಕೆ ಕಾಣುತ್ತಿದೆ. ತನ್ನ ವಿತರಣೆಯ ಬೆಲೆಯಿಂದ ಸುಮಾರು ಶೇಕಡ 30ರಷ್ಟು ಕುಸಿತ ಕಂಡಿದೆ. ಸದ್ಯ ಎಲ್‌ಐಸಿ ಷೇರು ಬೆಲೆ ರೂಪಾಯಿ 675ಕ್ಕೆ ಇಳಿದಿದೆ.

ಪ್ರಮುಖವಾಗಿ ಹಣದುಬ್ಬರದ ನಡುವೆ ಆರ್‌ಬಿಐ ರೆಪೋ ದರ ಏರಿಕೆ ಮಾಡಿರುವುದು ಎಲ್‌ಐಸಿ ಷೇರು ಕುಸಿತದ ಮೇಲೆ ಪರಿಣಾಮವನ್ನು ಉಂಟು ಮಾಡಿದೆ. ಎಲ್‌ಐಸಿ ಷೇರು ಸೋಮವಾರ ಆರಂಭಿಕ ವಹಿವಾಟಿನ ವೇಳೆ ಹೊಸ ಸಾರ್ವಕಾಲಿಕ ಕುಸಿತ ರೂಪಾಯಿ 673ಕ್ಕೆ ತಲುಪಿದೆ. ಆದರೆ ವಹಿವಾಟಿನ ಅಂತ್ಯದಲ್ಲಿ ರೂಪಾಯಿ 673.70ಕ್ಕೆ ತಲುಪಿದೆ.

ಶುಕ್ರವಾರ ಎಲ್‌ಐಸಿ ಷೇರು ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಬಳಿಕ ಸುಮಾರು ಶೇಕಡ ಐದರಷ್ಟು ಇಳಿಕೆ ಕಂಡು ರೂಪಾಯಿ 673.70ಕ್ಕೆ ತಲುಪಿದೆ. ಸೋಮವಾರ ಆರಂಭಿಕ ವಹಿವಾಟಿನಲ್ಲಿ ಮತ್ತೆ ಸಾರ್ವಕಾಲಿಕ ಕುಸಿತ ಕಂಡಿದೆ.

 ರೂ.675ಕ್ಕಿಂತ ಕೆಳಕ್ಕೆ ಇಳಿದ ಎಲ್‌ಐಸಿ ಷೇರು: ಶೇ.30ರಷ್ಟು ಕುಸಿತ

ಸರ್ಕಾರ ಹೇಳುವುದು ಏನು?

"ಈ ಕುಸಿತ ಬಗ್ಗೆ ನಾವು ಕಾಳಜಿಯನ್ನು ಹೊಂದಿದ್ದೇವೆ," ಎಂದು ಸರ್ಕಾರ ಹೇಳಿಕೊಂಡಿದೆ. "ಈ ತಾತ್ಕಾಲಿಕ ಕುಸಿತದ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ. ಎಲ್‌ಐಸಿ ಬಗ್ಗೆ ತಿಳಿಯಲು ಜನರು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. ಎಲ್ಐಸಿ ನಿರ್ವಹಣಾ ತಂಡವು ಈ ಎಲ್ಲಾ ಅಂಶಗಳನ್ನು ಪರಿಗಣಿಸುತ್ತದೆ ಮತ್ತು ಷೇರುದಾರರ ಮೌಲ್ಯವನ್ನು ಹೆಚ್ಚಳ ಮಾಡಲು ನಾವು ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ," ಎಂದು ದೀಪಂ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

ಎಲ್‌ಐಸಿ ಷೇರು ಸ್ಟಾಕ್ ಮಾರುಕಟ್ಟೆಯಲ್ಲಿ ಮೇ 17ರಂದು ತನ್ನ ವಿತರಣೆ ಬೆಲೆಗಿಂತ ಕುಸಿದು 872 ರೂಪಾಯಿಯಲ್ಲಿ ವಹಿವಾಟು ಆರಂಭ ಮಾಡಿದೆ. ಇದಾದ ಬಳಿಕ ನಾಲ್ಕು ಸೆಷನ್‌ಗಳಲ್ಲಿ ಮಾತ್ರ ಎಲ್‌ಐಸಿ ಷೇರು ಲಾಭವನ್ನು ಕಂಡಿದೆ. ಆದರೆ ಬಳಿಕ ಭಾರೀ ಇಳಿಕೆ ಕಾಣುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+