ಇನ್ಮುಂದೆ ಒಂದು ಬಾಟಲ್ ಮದ್ಯ, ಒಂದು ಪ್ಯಾಕ್ ಸಿಗರೇಟ್ ಖರೀದಿಗೆ ಮಾತ್ರ ಅವಕಾಶ ಸಾಧ್ಯತೆ!

ಅಂತರಾಷ್ಟ್ರೀಯ ಪ್ರಯಾಣಿಕರು ಡ್ಯೂಟಿ ಫ್ರೀ (ಸುಂಕ ಪಾವತೀಸದೆ ಇರುವ) ಮಳಿಗೆಗಳಿಂದ ಇನ್ಮುಂದೆ ಒಂದೇ ಒಂದು ಮದ್ಯ ಬಾಟಲಿ ಖರೀದಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆ ಇದೆ.

ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020ರ ಕೇಂದ್ರ ಬಜೆಟ್ ಮಂಡಿಸಲಿದ್ದು, ವಾಣಿಜ್ಯ ಸಚಿವಾಲಯವು ವಿತ್ತ ಖಾತೆಗೆ ನೀಡಲಾಗಿರುವ ಬಜೆಟ್ ಸಲಹೆಗಳಲ್ಲಿ ಈ ಅಂಶ ಉಲ್ಲೇಖವಾಗಿದೆ. ಅಲ್ಲದೆ ಮದ್ಯದ ಜೊತೆಗೆ ಬಳಕೆಯಾಗುವ ಸಿಗರೇಟ್ ಖರೀದಿಯ ಮೇಲೆ ಕೂಡ ನಿಯಂತ್ರಣ ಹೇರುವುದು ಒಳಿತು ಎಂದು ವಾಣಿಜ್ಯ ಇಲಾಖೆ ಸಲಹೆ ನೀಡಿದೆ.

ಇನ್ಮುಂದೆ ಒಂದು ಬಾಟಲ್ ಮದ್ಯ ಖರೀದಿಗೆ ಮಾತ್ರ ಅವಕಾಶ ಸಾಧ್ಯತೆ!

ಅಂತರಾಷ್ಟ್ರೀಯ ಪ್ರಯಾಣಿಕರು ವಿದೇಶದಿಂದ ಹಿಂತಿರುಗಿದಾಗ ಭಾರತೀಯ ವಿಮಾಣ ನಿಲ್ದಾಣದ ಡ್ಯೂಟಿ ಫ್ರೀ ಮಳಿಗೆಗಳಲ್ಲಿ 2 ಲೀಟರ್ ಮದ್ಯವನ್ನು ಖರೀದಿಸಬಹುದಾಗಿತ್ತು. ಹಾಗೆಯೇ ಒಂದು ಪ್ಯಾಕ್ ಸಿಗರೇಟ್ ಖರೀದಿ ಮಾಡಲು ಅವಕಾಶವಿದೆ. ಆದರೆ ಮುಂಬರುವ ದಿನಗಳಲ್ಲಿ ಒಂದು ಬಾಟಲ್ ಖರೀದಿಗೆ ಮಾತ್ರ ಅವಕಾಶದ ಸಾಧ್ಯತೆ ಇದೆ.

ಈಗಾಗಲೇ ಕೆಲವು ರಾಷ್ಟ್ರಗಳಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಒಂದು ಲೀಟರ್ ಮದ್ಯ ಮಾತ್ರ ಖರೀದಿಗೆ ಅವಕಾಶ ನೀಡಿವೆ. ಇದೆ ನಿಯಮವನ್ನು ನಮ್ಮ ದೇಶಕ್ಕೂ ಅನ್ವಯಿಸಬಹುದು ಎಂದು ವಾಣಿಜ್ಯ ಸಚಿವಾಲಯ ಸಲಹೆ ನೀಡಿದೆ.

ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಇಂಥ ನಿಯಮ ಜಾರಿಗೆ ತರಬಹುದು ಎಂದು ವಾಣಿಜ್ಯ ಇಲಾಖೆ ಸಲಹೆ ನೀಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+