ಕೊರೊನಾವೈರಸ್ ಸೋಂಕು ತಡೆಗಟ್ಟಲು ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಈ ವರ್ಷ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ 1,122 ಕೋಟಿ ಡಾಲರ್ ನಷ್ಟು ನಷ್ಟವಾಗಲಿದೆ. ಭಾರತದ ರುಪಾಯಿಗಳಲ್ಲಿ ಸುಮಾರು 85,419 ಕೋಟಿ ನಷ್ಟಗೊಳ್ಳಲಿದೆ. ಇದರ ಜೊತೆಗೆ 29 ಲಕ್ಷಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾಗುತ್ತಾರೆ ಎಂದು ಹೇಳಲಾಗಿದೆ.
ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (IATA) ಶುಕ್ರವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಪ್ರಯಾಣಿಕರ ವಿಮಾನಯಾನ ಸೇವೆಯ ಮೇಲೆ ಮೂರು ತಿಂಗಳ ನಿರ್ಬಂಧ ಹೇರಿದರೆ, ನಷ್ಟದ ಪ್ರಮಾಣ ಹೆಚ್ಚಾಗುತ್ತದೆ. 2019 ಕ್ಕೆ ಹೋಲಿಸಿದರೆ, ದೇಶದಲ್ಲಿ ಪ್ರಯಾಣಿಕರ ಸಂಖ್ಯೆ 8.98 ಕೋಟಿಗಳಷ್ಟು ಇಳಿಯುತ್ತದೆ. ಅಂದರೆ ಸುಮಾರು 47 ಪರ್ಸೆಂಟ್ ಕಡಿತವಾಗುತ್ತದೆ. ಇದ್ರಿಂದಾಗಿ ವಿಮಾನಯಾನ ಕಂಪನಿಗಳಿಗೆ 1,122.1 ಕೋಟಿ ಡಾಲರ್ ನಷ್ಟವಾಗಲಿದ್ದು, 29,32,900 ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದೆ.

ಎಐಟಿಎ ಈ ಹಿಂದೆ ಏಪ್ರಿಲ್ 14 ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದಲ್ಲಿ ಪ್ರಯಾಣಿಕರ ಸಂಖ್ಯೆ 36 ಪರ್ಸೆಂಟ್‌ರಷ್ಟು ಕುಸಿಯುತ್ತದೆ, ಇದರಿಂದಾಗಿ 884 ಮಿಲಿಯನ್ ಡಾಲರ್ ಆದಾಯ ನಷ್ಟ ಮತ್ತು 22.47 ಲಕ್ಷ ಜನರ ಉದ್ಯೋಗ ನಷ್ಟವಾಗಲಿದೆ ಎಂದು ಸೂಚಿಸಿತ್ತು.
ಇದರ ಜೊತೆಗೆ ವಿಮಾನಯಾನ ಕಂಪನಿಗಳು ತಮ್ಮ ಅಸ್ತಿತ್ವವನ್ನು ಉಳಿಸಲು ಹೆಣಗಾಡುತ್ತಿವೆ. ಸರ್ಕಾರ ಅವರಿಗೆ ಸಹಾಯ ಮಾಡದಿದ್ದರೆ ಅನೇಕ ವಿಮಾನಯಾನ ಸಂಸ್ಥೆಗಳು ಮುಚ್ಚಿಹೋಗಬಹುದು ಎಂದು ಎಚ್ಚರಿಸಿದೆ. ಆದಾಯ ನಷ್ಟದಲ್ಲಿ ಭಾರತವು ಜಪಾನ್ ಮತ್ತು ಆಸ್ಟ್ರೇಲಿಯಾ ನಂತರದಲ್ಲಿದ್ದು, ಭಾರೀ ಸಂಖ್ಯೆಯಲ್ಲಿ ಉದ್ಯೋಗ ಕಡಿತವಾಗಲಿದೆ ಎಂದಿದೆ.


Click it and Unblock the Notifications