ಭಾರತದ ಸ್ವಾಧಿಷ್ಠ ಆಹಾರದಂತೆ ಇಲ್ಲಿನ ಬಾಣಸಿಗರು ತಮ್ಮ ಕೌಶಲ್ಯಗಳಿಂದಾಗಿ ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಅಂಥಹ ಬಾಣಸಿಗರಲ್ಲಿ ವಿಕಾಸ್ ಖನ್ನಾ ಒಬ್ಬರಾಗಿದ್ದು, ಅವರು ಭಾರತದ ಅತ್ಯಂತ ಶ್ರೀಮಂತ ಚೆಫ್ ಕೂಡ ಆಗಿದ್ದಾರೆ. ಈಗ ಅವರು ತಮ್ಮ ಪಾಕಶಾಲೆಯ ಕೌಶಲ್ಯಕ್ಕೆ ಎಲ್ಲೆಡೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಆದರೆ, ಅವರು ಈ ಸ್ಥಾನಕ್ಕೆ ಏರುವ ಮೂಲಕ ಇಷ್ಟೊಂದು ದೊಡ್ಡ ಸಾಧನೆ ಮಾಡುವುದಕ್ಕೆ ಬದುಕಿನಲ್ಲಿ ಹಲವಾರು ಸವಾಲು ಎದುರಿಸಿದ್ದಾರೆ.
ವಿಕಾಸ್ ಖನ್ನಾ ಯಾರು?: ಅಮೃತಸರದಲ್ಲಿ ವಿಡಿಯೋ ಕ್ಯಾಸೆಟ್ ಬಾಡಿಗೆ ವ್ಯವಹಾರ ಮಾಡುವ ವ್ಯಕ್ತಿಯ ಮಗನಾದ ವಿಕಾಸ್ ಖನ್ನಾ ಅವರು ಪಾಕಶಾಲೆ ಉದ್ಯಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಕಾಲು ಊನತೆಯಿಂದ ಹುಟ್ಟಿದ್ದ ಕಾರಣ ಇತರೆ ಮಕ್ಕಳಂತೆ ಆಟವಾಡಲು ಸಾಧ್ಯವಾಗದೆ ತಮ್ಮ ಸ್ನೇಹಿತರ ನಡುವೆ ಸಾಕಷ್ಟು ಅಪಹಾಸ್ಯಕ್ಕೆ ಒಳಗಾಗಿದ್ದರು. ನಂತರ ಯೌವನದಲ್ಲಿ ಮರದ ಪಾದರಕ್ಷೆಗಳನ್ನು ಮಾಡಿಸಿಕೊಂಡಿದ್ದರು.

ಬದುಕಿನಲ್ಲಿನ ಈ ಕೊರಗಿನ ಹೊರತಾಗಿಯೂ ವಿಕಾಸ್ ತನ್ನ ಬಾಲ್ಯದಲ್ಲೇ ನಿಗದಿತ ಗುರಿಯನ್ನು ಇಟ್ಟುಕೊಂಡು ಆ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಅವರು ಹೊರಗಡೆ ಇತರೆ ಮಕ್ಕಳೊಂದಿಗೆ ಆಟವಾಡುವುದಕ್ಕಿಂತ ಹೆಚ್ಚಾಗಿ ಮನೆಯಲ್ಲಿಯೇ ಇರಲು ಇಷ್ಟಪಡುತ್ತಿದ್ದರು. ಆ ವೇಳೆ ವಿವಿಧ ರೀತಿಯ ಅಡುಗೆ ಮಾಡುವುದಕ್ಕೆ ಪ್ರಾರಂಭಿಸಿದ್ದರು. ಶಾಲಾ ದಿನಗಳಲ್ಲೇ ತಮ್ಮದೇ ಸ್ವಂತ ಕ್ಯಾಟರಿಂಗ್ ಕಂಪನಿಯನ್ನು ಪ್ರಾರಂಭಿಸುವ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.
ಹೀಗಿರುವಾಗ, ಒಂದು ದಿನ ಶಾಲೆಯ ಮುಖ್ಯ ಶಿಕ್ಷಕರು ಅವರ ತಾಯಿಯನ್ನು ಸಂಪರ್ಕಿಸಿ 580 ಸ್ವೆಟರ್‌ಗಳನ್ನು ಮಾಡುವುದಕ್ಕೆ ನೆರವಾಗುವಂತೆ ಕೋರಿದ್ದರು. ಆದರೆ ಹೊಲಿಗೆಯಲ್ಲಿ ಯಾವುದೇ ಅನುಭವಿಲ್ಲದಿದ್ದರೂ ಅವರು ಈ ಕರಕುಶಲತೆಯನ್ನು ಕಲಿಯುವ ಅವಕಾಶವನ್ನು ಪಡೆದುಕೊಂಡಿರುವುದಾಗಿ Mensxp ವರದಿ ಮಾಡಿದೆ. ಹೆಣಿಗೆ ಸ್ವೆಟರ್‌ಗಳಿಂದ ಪಡೆದ 15,000 ರೂಪಾಯಿಗಳಿಂದ ವಿಕಾಸ್ ಅವರು ತಮ್ಮ 17 ವರ್ಷದ ಬಳಿಕ ಲಾರೆನ್ಸ್ ಗಾರ್ಡನ್ಸ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು.
ಕರ್ನಾಟಕದ ಮಣಿಪಾಲದಲ್ಲಿ ವಿದ್ಯಾಭ್ಯಾಸ ಮಾಡಿದ ಖನ್ನಾ
ಆ ಮೂಲಕ ತಮ್ಮ ಮೊದಲ ತಂದೂರ್ ಅನ್ನು ಖರೀದಿಸಿದರು. ದೆಹಲಿಯ ಐಟಿಸಿ ಮೌರ್ಯ ಶೆರಾಟನ್‌ನಲ್ಲಿ ಅವರ ಚಿಕ್ಕಪ್ಪ ಒಮ್ಮೆ ರಾತ್ರಿಯ ಬಫೆಗೆ ಕರೆದುಕೊಂಡು ಬಂದಿದ್ದರು. ಆಗ ಅವರಿಗೆ ತಮ್ಮ ತಂದೂರ್‌ಗಿಂತ ಮುಂದೆ ವಿಭಿನ್ನವಾದ ಜೀವನವಿದೆ ಎಂಬುದರ ಅರಿವಾಗಿತ್ತು. ಆ ಬಳಿಕ ಅವರು ಕರ್ನಾಟಕದ ಮಣಿಪಾಲದ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್‌ನಲ್ಲಿ ನೋಂದಣಿ ಮಾಡಿಸಿಕೊಂಡರು.
1994ರಲ್ಲಿ ವಿಕಾಸ್ ಪದವಿ ಪಡೆದುಕೊಂಡಿದ್ದು, ಐಟಿಸಿ ನೇಮಕಾತಿಗಾಗಿ ತನ್ನ ಕ್ಯಾಂಪಸ್‌ಗೆ ಭೇಟಿ ನೀಡಿದ್ದ ಮೊದಲ ಉದ್ಯೋಗದಾತ ಸಂಸ್ಥೆಯಾಗಿತ್ತು. ಆದರೆ ಇಂಗ್ಲಿಷ್ ಅಷ್ಟೊಂದು ಸರಿಯಾಗಿ ಬರದಿದ್ದ ಕಾರಣ ಅವರನ್ನು ಕೆಲಸಕ್ಕೆ ನೇಮಿಸಿಕೊಂಡಿರಲಿಲ್ಲ. ಆದರೆ ಒಂದು ದಿನ ಮ್ಯಾಗಜಿನ್‌ವೊಂದನ್ನು ಓದುತ್ತಿದ್ದಾಗ ಪಾಕಶಾಲೆಯ ಆಸ್ಕರ್ ಬಗ್ಗೆ ಓದಿ ಅದರಿಂದ ಪ್ರೇರಿತರಾಗಿದ್ದರು.
2000ದ ಡಿಸೆಂಬರ್ 2ರಂದು ವಿಕಾಸ್ ಅವರು ನ್ಯೂಯಾರ್ಕ್‌ನ ಜಾನ್‌ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂಬ ಛಲ ಬಿಟ್ಟರೆ ಕೈಯಲ್ಲಿ ಯಾವುದೇ ಹಣವಿರಲಿಲ್ಲ. ಅಲ್ಲಿ ಅವರಿಗೆ ಸಣ್ಣ ಉಪಹಾರ ಗೃಹವೊಂದರಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಒಪ್ಪಿಕೊಂಡರು. ಆದರೆ ನಂತರ ತಮಗೆ ಮಾಣಿಯಾಗಿ ಅವಕಾಶ ನೀಡಬೇಕೆಂದು ಕೋರಿದಾಗ ಅವರನ್ನು ಅಲ್ಲಿಂದ ವಜಾ ಮಾಡಲಾಯಿತು.
ಮುಂದೆ ಮ್ಯಾನ್‌ಹ್ಯಾಟನ್‌ನ ಟ್ರಿಬೆಕಾದಲ್ಲಿನ ಸಣ್ಣ ಕೆಫೆಯಲ್ಲಿ ಅರೆಕಾಲಿಕ ಕೆಲಸಗಳನ್ನು ಮಾಡುವುದರ ಜತೆಗೆ ಹಿರಿಯ ನಾಗರಿಕರು ತಮ್ಮ ಸಾಕು ಪ್ರಾಣಿಗಳನ್ನು ವಾಕಿಂಗ್ ಮಾಡಿಸುತ್ತಿದ್ದ ವೇಳೆ ಅವರಿಗೆ ನೆರವಾಗುತ್ತಿದ್ದರು. ಈ ಸಾಕಷ್ಟು ಸವಾಲು- ಸಂಕಷ್ಟ ಎದುರಿಸುವ ಮೂಲಕ ವಿಕಾಸ್ ಜೀವನದಲ್ಲಿ ಯಶಸ್ಸನ್ನು ಗಳಿಸುವುದಕ್ಕೆ ಪ್ರಾರಂಭಿಸಿದರು. 2010ರಲ್ಲಿ ಅವರು ತಮ್ಮ ಸ್ವಂತ ರೆಸ್ಟೊರೆಂಟ್ ಜುನೂನ್ ಅನ್ನು ಪ್ರಾರಂಭಿಸಿದರು. ಇದರ ಗುಣಮಟ್ಟಕ್ಕಾಗಿ ಅವರು ಮುಂದೆ ಮೈಕೆಲಿನ್ ಸ್ಟಾರ್ ಅನ್ನು ಪಡೆದುಕೊಂಡರು.
ಮುಂದೆ ವಿಕಾಸ್ ಒಬ್ಬ ನುರಿತ ಚೆಫ್ ಆಗುವ ಜತೆಗೆ ಲೇಖಕರಾಗಿ, ಟಿವಿ ನಿರೂಪಕರಾಗಿ ಗುರುತಿಸಿಕೊಂಡರು. ಅಡುಗೆ ಮನೆಯಲ್ಲಿ 450 ರೂಪಾಯಿಗೆ ಕೆಲಸ ಪ್ರಾರಂಭಿಸಿದ್ದ ವಿಕಾಸ್ ಖಾನ್ ಈಗ ಶ್ರೀಮಂತ ಚೆಫ್‌ಗಳ ಪಟ್ಟಿಯಲ್ಲಿದ್ದಾರೆ. ಫೋರ್ಬ್ಸ್ ಇಂಡಿಯಾ ಪ್ರಕಾರ, ವಿಕಾಸ್ ಖನ್ನಾ 2019ರಲ್ಲಿ 3.75 ಕೋಟಿ ರೂಪಾಯಿ ಗಳಿಕೆಯೊಂದಿಗೆ ಗಮನಸೆಳೆದಿದ್ದರು. ಖನ್ನಾ ಅವರ ನಿವ್ವಳ ಆಸ್ತಿ 80ರಿಂದ 120 ಕೋಟಿ ರೂಪಾಯಿ ಆಗಿದೆ.


Click it and Unblock the Notifications