ಐಸ್‌ಕ್ರೀಂ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ? ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನವರು ಐಸ್‌ಕ್ರೀಂ ಅಂದ್ರೆ ಇಷ್ಟಪಡುತ್ತಾರೆ. ಬೇಸಿಗೆ ಕಾಲದಲ್ಲಂತೂ ಐಸ್‌ಕ್ರೀಂನ ಬೇಡಿಕೆ ಹೆಚ್ಚು. ಹಲವು ಬಗೆಯ ಫ್ಲೇವರ್‌ನಲ್ಲಿ ಸಿಗುವ ಐಸ್‌ಕ್ರೀಂಗಳು ಜನರನ್ನು ಆಕರ್ಷಿಸುತ್ತವೆ.
ನೀವು ಐಸ್‌ಕ್ರೀಂ ಪ್ರಿಯರಾಗಿದ್ದರೆ ಕಡಿಮೆ ಬೆಲೆಯಿಂದ ನೂರಾರು ರುಪಾಯಿವರೆಗೂ ಐಸ್‌ಕ್ರೀಂ ನೋಡಿರಬಹುದು. ಆದರೆ ಐಸ್‌ಕ್ರೀಂ ಬೆಲೆ ಕೋಟಿ ರುಪಾಯಿವರೆಗೂ ಇದೆ ಅಂದರೆ ನಂಬೋದು ಕಷ್ಟವಾಗುತ್ತೆ. ಆದರೆ ಈ ಐಸ್‌ಕ್ರೀಂ ಬಗ್ಗೆ ತಿಳಿದ ಮೇಲೆ ನಂಬಲೇಬೇಕು. ಜಗತ್ತಿನಲ್ಲಿ ಲಕ್ಷ, ಕೋಟಿಗಟ್ಟಲೆ ಬೆಲೆಯುಳ್ಳ ದುಬಾರಿ ಐಸ್‌ಕ್ರೀಂ ಎಂತವರನ್ನೂ ಆಶ್ಚರ್ಯಗೊಳಿಸುತ್ತೆ. ಹಾಗಿದ್ರೆ ಜಗತ್ತಿನ ಅತಿ ದುಬಾರಿ ಐಸ್‌ಕ್ರೀಂ ಯಾವುವು ಎಂದು ತಿಳಿಯಲು ಈ ಕೆಳಗಿನ ವಿವರಣೆ ನೋಡಿ
Strawberries Arnaud
ಇದು ವಿಶ್ವದ ಅತ್ಯಂತ ದುಬಾರಿ ಐಸ್‌ಕ್ರೀಂ ಆಗಿದೆ. ಒಂದು ಸ್ಟ್ರಾಬೆರಿ ಅರ್ನಾಡ್ ಐಸ್‌ಕ್ರೀಂ ಬೆಲೆ 1.4 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಭಾರತದ ರುಪಾಯಿಗಳಲ್ಲಿ 10 ಕೋಟಿ 43 ಲಕ್ಷದ 82,600 ರೂಪಾಯಿ. ಅಮೆರಿಕಾ ರಾಜ್ಯ ಲೂಯಿಸಿಯಾನದ ನಗರ ನ್ಯೂ ಓರ್ಲಿಯನ್ಸ್‌ನ ಅರ್ನಾಡ್ ರೆಸ್ಟೋರೆಂಟ್‌ನಲ್ಲಿ ಈ ದುಬಾರಿ ಐಸ್‌ಕ್ರೀಂ ಸಿಗುತ್ತದೆ. ಆಯ್ದ ಸ್ಟ್ರಾಬೆರಿಗಳು, ವೈನ್, ಕ್ರೀಮ್, ಮಸಾಲೆಗಳನ್ನು ಹಾಕಿ ಈ ಐಸ್‌ಕ್ರೀಂ ತಯಾರಿಸಲಾಗುತ್ತದೆ.
Absurdity Sundae
ಇದು ಜಗತ್ತಿನ 2ನೇ ದುಬಾರಿ ಐಸ್‌ಕ್ರೀಂ ಆಗಿದೆ. ಮೂರು ಐಸ್‌ಕ್ರೀಂ ಕಂಪನಿಗಳು ಒಟ್ಟಾಗಿ ಅಬ್ಸರ್ಡಿಟಿ ಸಂಡೇ ಎಂಬ ವಿಭಿನ್ನ ಐಸ್‌ಕ್ರೀಂ ತಯಾರಿಸಿವೆ. ಈ ಐಸ್‌ಕ್ರೀಂ ಟಾಂಜೇನಿಯಾದಲ್ಲಿ ಸಿಗಲಿದ್ದು ಇದರ ಬೆಲೆ 60,000 ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 44 ಲಕ್ಷದ 73,540 ). ಈ ಐಸ್‌ಕ್ರೀಂ ನಿಂದ ಬರುವ ಲಾಭವನ್ನು ಆಫ್ರಿಕಾದಲ್ಲಿ ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತದೆ. ಮತ್ತು ಪರಿಸರ ಸಂರಕ್ಷಣೆಗೆ ಈ ಹಣವನ್ನು ಬಳಸಲಾಗುತ್ತದೆ.
Frozen Chocolate Haute
ಫ್ರೋಜನ್ ಚಾಕಲೇಟ್ ಐಸ್‌ಕ್ರೀಂ ಅತ್ಯಂತ ವಿಭಿನ್ನವಾದ ಐಸ್‌ಕ್ರೀಂ ಆಗಿದೆ. ಅಪರೂಪದ ಕೋಕೋ, ಹಾಲಿನ ಕೆನೆ, ಹಾಲು ಜೊತೆಗೆ 23 ಕ್ಯಾರೆಟ್‌ನ 5 ಗ್ರಾಂ ಚಿನ್ನವು ಸಹ ಈ ಐಸ್‌ಕ್ರೀಂನ ಒಳಗಿದೆ.
ನ್ಯೂಯಾರ್ಕ್‌ನ ಸೆರೆಂಡಿಪಿಟಿ ಎಂಬ ರೆಸ್ಟೋರೆಂಟ್ ಈ ಅದ್ಭುತ ಐಸ್‌ಕ್ರೀಂ ತಯಾರಿಸಿದೆ. ಇದರ ಬೆಲೆ 25,000 ಅಮೆರಿಕನ್ ಡಾಲರ್ ( ಭಾರತದ ರುಪಾಯಿಗಳಲ್ಲಿ 18 ಲಕ್ಷದ 63,975). ಈ ಅಪರೂಪದ ಐಸ್‌ಕ್ರೀಂ ಚಿನ್ನದ ತಟ್ಟೆ ಹಾಗೂ ಚಮಚದೊಂದಿಗೆ ನೀಡಲಾಗುತ್ತದೆ.
Three Twins Ice Cream Sundae
ಅಬ್ಸರ್ಡಿಟಿ ಸಂಡೇ ಎಂಬ ಐಸ್‌ಕ್ರೀಂ ತಯಾರಿಸಿದ ಮೂರು ಕಂಪನಿಗಳೇ ಈ ತ್ರಿ ಟ್ವಿನ್ಸ್ ಐಸ್‌ಕ್ರೀಂ ತಯಾರಿಸಿದೆ. ಇದರ ಬೆಲೆಯು 3,333 ಅಮೆರಿಕನ್ ಡಾಲರ್ ( ಭಾರತದ ರುಪಾಯಿಗಳಲ್ಲಿ 2 ಲಕ್ಷದ 48,518 ರೂ.). ಈ ಐಸ್‌ಕ್ರೀಂ ಜೊತೆಗೆ ಅಪರೂಪದ ಸಿಹಿ ವೈನ್‌ಗಳನ್ನು ಸಹ ನೀಡಲಾಗುತ್ತದೆ.
Golden Opulence sundae
ನ್ಯೂಯಾರ್ಕ್ ನಗರದ ರೆಸ್ಟೋರೆಂಟ್ ಸೆರೆಂಡಿಪಿಟಿ 3ನಲ್ಲಿ ವಿಶೇಷ ಆರ್ಡರ್ ಮೂಲಕ ಈ ಐಸ್‌ಕ್ರೀಂ ತಯಾರಿಸಲಾಗುತ್ತದೆ. ಇದು ಕೂಡ ವಿಶ್ವದ ಅತ್ಯಂತ ದುಬಾರಿ ಐಸ್‌ಕ್ರೀಂಗಳಲ್ಲಿ ಒಂದಾಗಿದೆ. ಇದರ ಬೆಲೆ 1000 ಅಮೆರಿಕನ್ ಡಾಲರ್ (74,577 ರುಪಾಯಿಗಳು)
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications