For Quick Alerts
ALLOW NOTIFICATIONS  
For Daily Alerts

ಮುಬದಾಲದಿಂದ ಜಿಯೋದಲ್ಲಿ 9093 ಕೋಟಿ ಹೂಡಿಕೆ: ಒಟ್ಟು ಲೆಕ್ಕ 87,000 ಕೋಟಿ

|

ಅಬುಧಾಬಿ ಮೂಲದ ಸವರನ್ ಹೂಡಿಕೆದಾರರಾದ ಮುಬದಾಲ ಹೂಡಿಕೆ ಕಂಪೆನಿಯು ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 9093.60 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ. ಜಿಯೋ ಪ್ಲಾಟ್ ಫಾರ್ಮ್ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ಮತ್ತು ಎಂಟರ್ ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರುಪಾಯಿ ಎಂದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಶುಕ್ರವಾರ ನೀಡಿದೆ.

ಮುಬದಾಲ ಇನ್ವೆಸ್ಟ್ ಮೆಂಟ್ ನಿಂದ 1.85 ಪರ್ಸೆಂಟ್ ನಷ್ಟು ಷೇರು ಖರೀದಿ ಮಾಡಲಾಗುತ್ತದೆ. ಈ ಕಂಪೆನಿಯು ಐದು ಖಂಡಗಳಲ್ಲಿ 229 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೂಡಿಕೆ ಮಾಡಿದೆ. ಅದರಲ್ಲಿ ಏರೋಸ್ಪೇಸ್, ಐಸಿಟಿ, ಸೆಮಿಕಂಡಕ್ಟರ್ಸ್, ಲೋಹ, ಗಣಿಗಾರಿಕೆ, ನವೀಕೃತ ಇಂಧನ, ತೈಲ ಮತ್ತು ಅನಿಲ, ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ಹೆಲ್ತ್ ಕೇರ್, ಫಾರ್ಮಾಸ್ಯುಟಿಕಲ್ಸ್, ವೈದ್ಯಕೀಯ ತಂತ್ರಜ್ಞಾನ ಹೀಗೆ ನಾನಾ ಕ್ಷೇತ್ರಗಳಲ್ಲಿ ಹಣ ಹೂಡಿದೆ.

ಜಿಯೋದಿಂದ 87,665.35 ಕೋಟಿ ರುಪಾಯಿ ಸಂಗ್ರಹ

ಜಿಯೋದಿಂದ 87,665.35 ಕೋಟಿ ರುಪಾಯಿ ಸಂಗ್ರಹ

ಈ ಹೂಡಿಕೆಯ ಮೊತ್ತವೂ ಸೇರಿದರೆ ಜಿಯೋ ಪ್ಲಾಟ್ ಫಾರ್ಮ್ ನಿಂದ 87,665.35 ಕೋಟಿ ರುಪಾಯಿ ಸಂಗ್ರಹ ಮಾಡಿದಂತೆ ಆಯಿತು. ಜಾಗತಿಕ ಪ್ರಮುಖ ತಂತ್ರಜ್ಞಾನ ಕಂಪೆನಿಗಳಾದ ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್ ಹಾಗೂ ಮುಬದಾಲ ಹೀಗೆ ಆರು ವಾರದಲ್ಲಿ ಹೂಡಿಕೆ ಕಂಪೆನಿಗಳ ವ್ಯವಹಾರದ ಬಗ್ಗೆ ಘೋಷಣೆ ಮಾಡಲಾಗಿದೆ ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಗತ್ತಿನ ಪ್ರಮುಖ ಡಿಜಿಟಲ್ ದೇಶ

ಜಗತ್ತಿನ ಪ್ರಮುಖ ಡಿಜಿಟಲ್ ದೇಶ

ಆ ಗ್ರೂಪ್ ಅನುಭವ ಹಾಗೂ ಒಳನೋಟಗಳಿಂದ ದೊರೆಯಬಹುದಾದ ಅನುಕೂಲಗಳನ್ನು ಎದುರು ನೋಡುತ್ತಿದ್ದೇನೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷರೂ ಆಗಿರುವ ಮುಕೇಶ್ ಅಂಬಾನಿ ಹೇಳಿದ್ದಾರೆ. ಜಗತ್ತಿನ ಪ್ರಮುಖ ಡಿಜಿಟಲ್ ದೇಶ ಆಗುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆ ಎಂದಿದ್ದಾರೆ.

ಕಮ್ಯುನಿಕೇಷನ್ ಹಾಗೂ ಕನೆಕ್ಟಿವಿಟಿಯನ್ನು ಬದಲಾಯಿಸಿದೆ

ಕಮ್ಯುನಿಕೇಷನ್ ಹಾಗೂ ಕನೆಕ್ಟಿವಿಟಿಯನ್ನು ಬದಲಾಯಿಸಿದೆ

ಜಿಯೋ ಈಗಾಗಲೇ ಭಾರತದಲ್ಲಿ ಹೇಗೆ ಕಮ್ಯುನಿಕೇಷನ್ ಹಾಗೂ ಕನೆಕ್ಟಿವಿಟಿಯನ್ನು ಬದಲಾಯಿಸಿದೆ ಎಂಬುದನ್ನು ನೋಡಿದ್ದೇವೆ. ಹೂಡಿಕೆದಾರರು, ಭಾಗೀದಾರರಾಗಿ ಭಾರತದ ಡಿಜಿಟಲ್ ಪ್ರಗತಿಯ ಪ್ರಯಾಣವನ್ನು ಬೆಂಬಲಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಜಿಯೋದ ಹೂಡಿಕೆದಾರರು ಮತ್ತು ಪಾರ್ಟನರ್ಸ್ ಗಳ ನೆಟ್ ವರ್ಕ್ ಮೂಲಕ ಕಂಪೆನಿಯ ಡಿಜಿಟಲ್ ಆರ್ಥಿಕತೆ ಮತ್ತಷ್ಟು ಅಭಿವೃದ್ಧಿ ಸಾಧಿಸುತ್ತದೆ ಎಂದು ನಂಬಿರುವುದಾಗಿ ಮುಬದಾಲ ಗ್ರೂಪ್ ಸಿಇಒ ಹಾಗೂ ಎಂ.ಡಿ. ಖಲ್ದೂನ್ ಅಲ್ ಮುಬಾರಕ್ ಹೇಳಿದ್ದಾರೆ.

ಭಾರತದ ಲಕ್ಷಾಂತರ ಚಂದಾದಾರರಿಗೆ ಗುಣಮಟ್ಟದ ಡಿಜಿಟಲ್ ಸೇವೆ

ಭಾರತದ ಲಕ್ಷಾಂತರ ಚಂದಾದಾರರಿಗೆ ಗುಣಮಟ್ಟದ ಡಿಜಿಟಲ್ ಸೇವೆ

ಜಿಯೋ ಪ್ಲಾಟ್ ಫಾರ್ಮ್ಸ್ ಸಂಪೂರ್ಣವಾಗಿ ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗ ಸಂಸ್ಥೆ. ಮುಂದಿನ ತಲೆಮಾರಿನ ತಂತ್ರಜ್ಞಾನ ಪ್ಲಾಟ್ ಫಾರ್ಮ್. ಭಾರತದಾದ್ಯಂತ ಇರುವ ಲಕ್ಷಾಂತರ ಚಂದಾದಾರರಿಗೆ ಕೈಗೆಟುಕುವ ದರಲ್ಲಿ ಉತ್ತಮ ಗುಣಮಟ್ಟದ ಡಿಜಿಟಲ್ ಸೇವೆ ನೀಡುವ ಗುರಿ ಇರಿಸಿಕೊಂಡಿದೆ. ಭಾರತದ ಸಣ್ಣ ವರ್ತಕರು, ಕಿರು ವ್ಯಾಪಾರಿಗಳು, ರೈತರು ಹೀಗೆ ಎಲ್ಲರಿಗೂ ಡಿಜಿಟಲ್ ಇಂಡಿಯಾದ ಅನುಕೂಲ ದೊರಕಿಸಬೇಕು ಎಂಬುದು ಜಿಯೋದ ಉದ್ದೇಶವಾಗಿದೆ.

English summary

Mubadala Investment Company Will Invest 9093 Crore In Jio Platform

Reliance Industries announced on Friday, sovereign investors Mubadala investment company will invest 9093 crores in Jio platform.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X