ತಿಂಗಳ ಮೊದಲ ದಿನ ಬಂತು ಎಂದರೆ ಸಾಕು ಒಂದೆಲ್ಲಾ ಒಂದು ಬದಲಾವಣೆಗಳು ಆಗುತ್ತಲೇ ಇರುತ್ತೇವೆ. ಅದರಲ್ಲೂ ಹಣಕಾಸಿಗೆ ಸಂಬಂಧಿಸಿದಂತೆ ಹೊಸ ಹೊಸ ನಿಯಮಗಳು ಅನ್ವಯವಾಗುತ್ತಲೇ ಇರುತ್ತೇವೆ. ಇದು ಗ್ರಾಹರ ಮೇಲೆ ನೇರ ಪರಿಣಾಮವನ್ನು ಬೀರುತ್ತೇವೆ. ಹಾಗಿದ್ರೆ ಮೇ 1ರಿಂದ ಯಾವೆಲ್ಲಾ ಬದಲಾವಣೆಗಳು ಆಗಿವೆ ಎಂಬ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ....
ಹೌದು, ಮೇ 1ರಿಂದ ಹಣಕಾಸು ಕ್ಷೇತ್ರದಲ್ಲಿ ಹಲವಾರು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳ, ಗೃಹ ಸಾಲದ ಬಡ್ಡಿ ದರ ಇಳಿಕೆ,ಆರ್‌ಬಿಐ ರೆಪೊ ದರ ಕಡಿತ, ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಹೊಸ ನಿಯಮಗಳು,11 ರಾಜ್ಯಗಳಲ್ಲಿ ಬ್ಯಾಂಕ್ ವಿಲೀನಗಳು ಇತರ ರಾಜ್ಯಗಳ ಮೇಲೆ ಪರಿಣಾಮ ಬೀರಬಹುದು. ಏಪ್ರಿಲ್ 30 ರಂದು ಕೆಲವು ಐಟಿಆರ್ ಫಾರ್ಮ್‌ಗಳ ಅಧಿಸೂಚನೆಯ ನಂತರ ತೆರಿಗೆದಾರರು ಮೇ ತಿಂಗಳಲ್ಲಿ ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಕೆಯ ಸಿದ್ಧತೆಗಳು ಆರಂಭವಾಗಬಹುದು. ಈ ಎಲ್ಲಾ ಬದಲಾವಣೆಗೆ ಸಾರ್ವಜನಿಕರು ಸಿದ್ದರಿರಬೇಕು.

ATM ವಿತ್ ಡ್ರಾ ಮಾಡುವ ಶುಲ್ಕ ಹೆಚ್ಚಳ
ದೇಶಾದ್ಯಂತ ಎಟಿಎಂ ವಹಿವಾಟು ಶುಲ್ಕಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪರಿಷ್ಕೃತ ಶುಲ್ಕವನ್ನ ಆದೇಶವನ್ನು ಹೊರಡಿಸಿದೆ.ಈ ನಿಯಮದ ಪ್ರಕಾಯ ಎಟಿಎಂನಲ್ಲಿ ವಿತ್ ಡ್ರಾ ಮಾಡುವ ಶುಲ್ಕ ಹೆಚ್ಚಳವಾಗಲಿದೆ. ATMನಲ್ಲಿ ಮಿತಿ ಮೀರಿ ಹೆಚ್ಚು ಬಾರಿ ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡಿದರೆ, ಪ್ರತಿ ವಿತ್ ಡ್ರಾಗೆ 2 ರೂಪಾಯಿ ಶುಲ್ಕ ವಿಧಿಸಲಾಗುತ್ತೆ. ಸದ್ಯಕ್ಕೆ ತಿಂಗಳಲ್ಲಿ 5 ಬಾರಿ ವಿತ್ ಡ್ರಾ ಉಚಿತವಾಗಿದೆ ಮೆಟ್ರೋ ನಗರಗಳಲ್ಲಿ, ಗ್ರಾಹಕರು ತಿಂಗಳಿಗೆ ಮೂರು ಉಚಿತ ವಹಿವಾಟುಗಳನ್ನು ಪಡೆಯಬಹುದು. ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ, ತಿಂಗಳಿಗೆ ಐದು ಉಚಿತ ವಹಿವಾಟುಗಳಿಗೆ ಮಿತಿಯನ್ನು ನಿಗದಿ ಮಾಡಲಾಗಿದೆ. ಈ ಮಿತಿಗಳು ಹಣಕಾಸು ಮತ್ತು ಹಣಕಾಸುೇತರ ವಹಿವಾಟುಗಳೆರಡಕ್ಕೂ ಒಟ್ಟಾರೆಯಾಗಿ ಅನ್ವಯಿಸುತ್ತವೆ. ಮೇ 1, 2025 ರಿಂದ ಉಚಿತ ಮಿತಿಗಳನ್ನು ಮೀರುವುದಕ್ಕೆ ಪರಿಷ್ಕೃತ ಶುಲ್ಕಗಳು ಗ್ರಾಹಕರು ತಮ್ಮ ಮಾಸಿಕ ಉಚಿತ ವಹಿವಾಟು ಮಿತಿಯನ್ನು ಮೀರಿದರೆ, ಪ್ರತಿ ವಹಿವಾಟಿಗೆ ಈಗಿರುವ 21 ರೂ. ಬದಲು 23 ರೂ. ಶುಲ್ಕ ಅನ್ವಯವಾಗಲಿದೆ.
ರೈಲ್ವೆ ಟಿಕೆಟ್ ಬುಕಿಂಗ್
ಭಾರತೀಯ ರೈಲ್ವೆಯಲ್ಲಿನ ವೇಟಿಂಗ್ ಲಿಸ್ಟ್ ಟಿಕೆಟ್‌ಗಳು ಮೇ 1 ರಿಂದ ಸ್ಲೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಮಾನ್ಯವಾಗಿಲ್ಲ ಎಂದು ಹೇಳಿದೆ ಅಂತಹ ಟಿಕೆಟ್‌ಗಳನ್ನು ಹೊಂದಿರುವವರು ಸಾಮಾನ್ಯ ಕೋಚ್‌ಗಳಲ್ಲಿ ಮಾತ್ರ ಪ್ರಯಾಣಿಸಲು ಸಾಧ್ಯವಾಗುತ್ತದೆ.ಮುಂಗಡ ಬುಕಿಂಗ್ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ ಮತ್ತು ರದ್ದತಿ ಮರುಪಾವತಿ ಸಮಯವನ್ನು ಕೇವಲ ಎರಡು ದಿನಗಳಿಗೆ ಇಳಿಸಲಾಗಿದೆ.
FD ದರಗಳು
ಕೆಲವು ಬ್ಯಾಂಕುಗಳು ಸ್ಥಿರ ಠೇವಣಿ ದರಗಳನ್ನು ಪರಿಷ್ಕರಿಸಿವೆ ಮತ್ತು ಮೇ 1 ರಿಂದ ಹೊಸ ನೀತಿಗಳನ್ನು ಘೋಷಿಸಿವೆ. ಆರ್‌ಬಿಎಲ್ ಬ್ಯಾಂಕಿನ ಉಳಿತಾಯ ಖಾತೆದಾರರು ಈಗ ಗರಿಷ್ಠ ಶೇ.7 ದರದೊಂದಿಗೆ ಮಾಸಿಕ ಬಡ್ಡಿ ಪಾವತಿಗಳನ್ನು (ತ್ರೈಮಾಸಿಕವಲ್ಲ) ಪಡೆಯುತ್ತಾರೆ.ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಕೆಲವು ಗ್ರಾಹಕರಿಗೆ ತನ್ನ ಎಫ್‌ಡಿ ದರಗಳಲ್ಲಿ ಬದಲಾವಣೆಯನ್ನು ಘೋಷಿಸಿದೆ ಎಂದು ವರದಿಯಾಗಿದೆ. ಹಿರಿಯ ನಾಗರಿಕರು ಈಗ ವಾರ್ಷಿಕ ಶೇ.0.50 ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ ಮತ್ತು ಮಹಿಳಾ ಠೇವಣಿದಾರರು ವಾರ್ಷಿಕ ಶೇ.0.10ಹೆಚ್ಚುವರಿ ಬಡ್ಡಿಯನ್ನು ಪಡೆಯಲಿದ್ದಾರೆ.
ಸಾಲದ ಬಡ್ಡಿ ದರ ಇಳಿಕೆ
ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿದ ನಂತರ ಮೇ ತಿಂಗಳಲ್ಲಿ ಗೃಹ ಸಾಲದ ದರಗಳು ಕಡಿಮೆಯಾಗುವ ಸಾಧ್ಯತೆ ಇದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರವನ್ನು ಇತ್ತೀಚೆಗೆ ಎರಡು ಬಾರಿ ಇಳಿಕೆ ಮಾಡಿದ್ದು, ಇದೀಗ ಅದು ಶೇ.6 ರಷ್ಟಾಗಿದೆ. ಇದರಿಂದಾಗಿ, ಸಾಲದ ಬಡ್ಡಿ ದರಗಳು ಇಳಿಕೆಯಾಗುವ ಸಾಧ್ಯತೆ ಇದೆ.ವಿಶೇಷವಾಗಿ ಗೃಹ ಸಾಲಗಳ ಬಡ್ಡಿ ದರ ಇಳಿಯುವ ಸಾಧ್ಯತೆ ಹೆಚ್ಚಾಗಿದೆ.
ರೆಪೋ ದರ ಇಳಿಕೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರವನ್ನು ಇತ್ತೀಚೆಗೆ ಎರಡು ಬಾರಿ ಇಳಿಕೆ ಮಾಡಿದೆ. ಫೆಬ್ರವರಿ 7ರಂದು 25 ಬೇಟು ಪಾಯಿಂಟ್ (bps) ಇಳಿಕೆ ಮಾಡಿತ್ತು. ನಂತರ ಏಪ್ರಿಲ್ 9 ರಂದು ಮತ್ತೊಮ್ಮೆ 25 bps ಇಳಿಕೆ ಮಾಡಿದೆ. ಈಗಿನ ರೆಪೋ ದರ ಶೇ. 6.ರಷ್ಟಾಗಿದೆ
ಗೃಹ ಸಾಲದ ಬಡ್ಡಿ ದರದ ಪರಿಣಾಮ
ಹಲವಾರು ಬ್ಯಾಂಕುಗಳು ಈಗಾಗಲೇ RLLR (Repo Linked Lending Rate) ಅನ್ನು ಕಡಿಮೆ ಮಾಡಿ ಗ್ರಾಹಕರಿಗೆ ಲಾಭ ನೀಡಲು ಆರಂಭಿಸಿವೆ. ಇನ್ನು ಕೆಲ ಬ್ಯಾಂಕುಗಳು ಶೀಘ್ರದಲ್ಲೇ ಬಡ್ಡಿ ದರ ಇಳಿಕೆ ಮಾಡುವ ನಿರೀಕ್ಷೆಯಿದೆ.ಹೊಸ ಸಾಲಗಾರರಿಗೆ ಈ ಬಡ್ಡಿದರ ಇಳಿಕೆಯಿಂದ ಅನುಕೂಲಕರ ಇಎಂಐ (EMI) ಹಾಗೂ ಸಾಲದ ಒಟ್ಟು ವೆಚ್ಚದಲ್ಲಿ ಕಡಿತವಾಗುತ್ತದೆ.
ತೆರಿಗೆ ರಿಟರ್ನ್ (ITR) ಸಲ್ಲಿಕೆ ಪ್ರಕ್ರಿಯೆ ಆರಂಭ
ಜೂನ್ ತಿಂಗಳಲ್ಲಿ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನೀವು ಈಗಿನಿಂದಲೇ ಅದರ ಸಿದ್ಧತೆ ಆರಂಭಿಸುವುದು ತುಂಬಾ ಒಳ್ಳೆಯದ್ದು, ಇದಕ್ಕೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳನ್ನು ತಯಾರಾಗಿಸಿಕೊಂಡು ನಿಮ್ಮ ಬಳಿ ಇಟ್ಟಕೊಳ್ಳುವುದು ಉತ್ತಮ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications