'ಹರತಾಳ ಮಾಡುವುದಿದ್ದರೆ ಹದಿನಾಲ್ಕು ದಿನಕ್ಕೆ ಮುಂಚೆ ನೋಟಿಸ್ ನೀಡಬೇಕು'

ಹೊಸ ಕಾರ್ಮಿಕ ಕಾನೂನಿನ ಪ್ರಕಾರ, ಕಾರ್ಮಿಕರು ಹರತಾಳ ಮಾಡುವ ಹದಿನಾಲ್ಕು ದಿನ ಮುಂಚಿತವಾಗಿ ನೋಟಿಸ್ ನೀಡಬೇಕು ಎಂಬ ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ. ಈ ಬಗ್ಗೆ ಬುಧವಾರ ರಾಜ್ಯಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವರ್ ಮಾಹಿತಿ ನೀಡಿದ್ದಾರೆ. ಯಾವುದೇ ಘಟಕದಲ್ಲಿ ಹರತಾಳ ಮಾಡಬೇಕು ಅಂದರೂ ಸಿಬ್ಬಂದಿ ಕನಿಷ್ಠ ಹದಿನಾಲ್ಕು ದಿನಗಳಿಗೆ ಮುಂಚಿತವಾಗಿ ನೋಟಿಸ್ ನೀಡಬೇಕಾಗುತ್ತದೆ ಎಂದಿದ್ದಾರೆ.

ಇದು ಹೊಸ ಕಾರ್ಮಿಕ ಕಾನೂನಿನ ಭಾಗವಾಗಿದೆ. ವಿವಿಧ ರಾಜ್ಯ ಸರ್ಕಾರಗಳ ಜತೆಗೆ ಈ ವಿಚಾರವಾಗಿ ಕೇಂದ್ರವು ಸಂಪರ್ಕದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನಿನಲ್ಲಿ ಸುಧಾರಣೆ ತರಲು ಮುಂದಾಗಿದೆ. ನಲವತ್ನಾಲ್ಕು ಕಾರ್ಮಿಕ ಕಾನೂನುಗಳು ಸೇರಿಸಿ ನಾಲ್ಕು ಸಂಹಿತೆಯನ್ನಾಗಿ ಮಾಡಲಿದೆ.

ಮೂರು ವರ್ಷಗಳ ಹಿಂದಿನ ಸಮೀಕ್ಷೆಯೊಂದರ ಲೆಕ್ಕಾಚಾರವನ್ನು ಮುಂದಿಟ್ಟ ಅವರು, ದೇಶದಲ್ಲಿ ಒಟ್ಟು ಹತ್ತು ಕೋಟಿ ವಲಸಿಗ ಕಾರ್ಮಿಕರಿದ್ದಾರೆ. ಅದು ಒಟ್ಟು ಕಾರ್ಮಿಕ ಬಲದ ಶೇಕಡಾ ಇಪ್ಪತ್ತರಷ್ಟು ಆಗುತ್ತದೆ ಎಂದು ಅವರು ಹೇಳಿದ್ದಾರೆ.

'ಹರತಾಳ ಮಾಡುವುದಿದ್ದರೆ ಹದಿನಾಲ್ಕು ದಿನಕ್ಕೆ ಮುಂಚೆ ನೋಟಿಸ್ ನೀಡಬೇಕು'

ಸಂಹಿತೆಯಲ್ಲಿ ವಲಸಿಗ ಕಾರ್ಮಿಕರ ಸಮಸ್ಯೆ ಬಗ್ಗೆ ಕೂಡ ಚರ್ಚಿಸುತ್ತೇವೆ. ಸರ್ಕಾರಕ್ಕೆ ಈ ಸಮಸ್ಯೆ ಅರ್ಥವಾಗುತ್ತದೆ ಎಂದು ಗಂಗ್ವರ್ ತಿಳಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+