ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನ ಅಂಗಸಂಸ್ಥೆಯಾದ ಹೈವೇಸ್ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (ಎನ್‌ಎಚ್‌ಎಲ್‌ಎಂಎಲ್) ಬೆಂಗಳೂರಿನಲ್ಲಿ ಸುಮಾರು ಅಂದಾಜು 1,770 ಕೋಟಿ ರೂಪಾಯಿ ವೆಚ್ಚದಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ಸ್ ಪಾರ್ಕ್ (ಎಂಎಂಎಲ್‌ಪಿ) ಅಭಿವೃದ್ಧಿಯ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಬಗ್ಗೆ ಸೋಮವಾರ ಹೆದ್ದಾರಿ ಪ್ರಾಧಿಕಾರ ಅಧಿಕೃತ ಹೇಳಿಕೆಯನ್ನು ನೀಡಿದೆ. ಹೇಳಿಕೆ ಪ್ರಕಾರ ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಈ ಲಾಜಿಸ್ಟಿಕ್ಸ್ ಪಾರ್ಕ್ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಇರಲಿದೆ. ಹಾಗೆಯೇ ಈ ಯೋಜನೆಯು ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ದೇಶದಲ್ಲಿ ಜಾರಿಗೆ ತರಲಾಗುವ ಮೊದಲ ಮತ್ತು ಅತಿದೊಡ್ಡ ಎಂಎಂಎಲ್‌ಪಿಯಾಗಲಿದೆ.

ಈ ಯೋಜನೆ ಸಂಬಂಧಿತ ಎಸ್‌ಪಿವಿಯಾದ (Special Purpose Vehicle) ಬೆಂಗಳೂರು ಮಲ್ಟಿ ಮಾಡಲ್ ಲಾಜಿಸ್ಟಿಕ್ಸ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ ಮತ್ತು ಇನ್ನೊಂದು ಎಸ್‌ಪಿವಿ M/s ಪಿಎಟಿಎಚ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ ನಡುವೆ ಒಪ್ಪಂದ ನಡೆದಿದೆ.
Bengaluru - Mysuru Expressway: ಹೈವೇ ಅಧಿಕಾರಿಗಳಿಗೆ ರೈತರ ಎಚ್ಚರಿಕೆ, ಅಡಕತ್ತರಿಯಲ್ಲಿ ಪ್ರಾಧಿಕಾರ!
ಎನ್‌ಎಚ್‌ಎಲ್‌ಎಂಎಲ್, ರೈಲು ವಿಕಾಸ ನಿಗಮ ಲಿಮಿಟೆಡ್ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃಧಿ ಮಂಡಳಿ ನಡುವೆ ಸರ್ಕಾರಿ ಎಸ್‌ಪಿವಿ ಅನ್ನು ಸಂಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ. ಇಲ್ಲಿ ಎಸ್‌ಪಿವಿ ಎನ್ನುವುದು ಯೋಜನೆಯನ್ನು ಸರ್ಕಾರದ ಘಟಕದಿಂದ ಪ್ರತ್ಯೇಕಿಸುವ ಕಾನೂನು ಘಟಕವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುದ್ದಲಿಂಗನಹಳ್ಳಿಯಲ್ಲಿ 400 ಎಕರೆ ಪ್ರದೇಶದಲ್ಲಿ ಎಂಎಂಎಲ್‌ಪಿಯನ್ನು ಮೂರು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೊದಲ ಹಂತವು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 45 ವರ್ಷಗಳ ಅವಧಿಯ ಅಂತ್ಯದ ವೇಳೆಗೆ ಎಂಎಂಎಲ್‌ಪಿ ಸುಮಾರು 30 ಮಿಲಿಯನ್ ಮೆಟ್ರಿಕ್ ಟನ್ ಸರಕುಗಳನ್ನು ಪೂರೈಸುತ್ತದೆ ಎಂದೂ ಉಲ್ಲೇಖಿಸಲಾಗಿದೆ.
ಎಂಎಂಎಲ್‌ಪಿಯ ಅಭಿವೃದ್ಧಿಯು ಒಟ್ಟಾರೆ ಸರಕು ವೆಚ್ಚಗಳು ಮತ್ತು ಸಮಯವನ್ನು ಕಡಿಮೆ ಮಾಡಲು ಉತ್ತಮವಾಗಿದೆ. ಇದು ಸರಕು ಸಾಗಣೆಯನ್ನು ಸಕ್ರಿಯಗೊಳಿಸುವ ಮೂಲಕ ದೇಶದ ಸರಕು ಸಾಗಣೆ ವಲಯವನ್ನು ಸುಧಾರಿಸಲು ಕೇಂದ್ರ ಸರ್ಕಾರದ ಪ್ರಮುಖ ಉಪಕ್ರಮವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬೆಂಗಳೂರು ಎಂಎಂಎಲ್‌ಪಿ ಬೆಂಗಳೂರು ವಿಮಾನ ನಿಲ್ದಾಣದಿಂದ 58 ಕಿಮೀ ಮತ್ತು ಬೆಂಗಳೂರು ನಗರ ರೈಲು ನಿಲ್ದಾಣದಿಂದ 48 ಕಿಮೀ ದೂರದಲ್ಲಿರಲಿದೆ.


Click it and Unblock the Notifications