ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು (OMC's) ಗುರುವಾರದಂದು (ಫೆಬ್ರವರಿ 4, 2021) ನಾನ್ ಸಬ್ಸಿಡೈಸ್ಡ್ ಎಲ್ ಪಿಜಿ ದರವನ್ನು ಮೆಟ್ರೋ ನಗರಗಳಲ್ಲಿ 25 ರುಪಾಯಿ ಹೆಚ್ಚಳ ಮಾಡಿವೆ. ಇಂದಿನಿಂದ ಹೊಸ ದರಗಳು ಜಾರಿಗೆ ಬರಲಿವೆ. ಈಗ ಹೊಸ ಬೆಲೆ ಜಾರಿಗೆ ಬಂದ ಮೇಲೆ 14.2 ಕೇಜಿಯ ಅಡುಗೆ ಅನಿಲ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರು. 719 ಆಗಿದೆ.
ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕೂಡ ರು. 25 ಹೆಚ್ಚಳ ಮಾಡಲಾಗಿದೆ. ದರವು ಕ್ರಮವಾಗಿ ರು. 745.5, ರು. 719 ಹಾಗೂ ರು. 735 ಆಗಿದೆ. ಜನವರಿಯಲ್ಲಿ ಎಲ್ ಪಿಜಿ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಡಿಸೆಂಬರ್ ನಲ್ಲಿ ದೆಹಲಿಯಲ್ಲಿ ಎರಡು ಬಾರಿಯಿಂದ ಸೇರಿ ಸಿಲಿಂಡರ್ ಗೆ ರು. 100 ಮೇಲೇರಿತ್ತು.
ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ದರ ಮತ್ತು ಯುಎಸ್ ಡಾಲರ್ ವಿರುದ್ಧದ ರುಪಾಯಿ ಮೌಲ್ಯ ಇವುಗಳ ಆಧಾರದ ಮೇಲೆ ತೈಲ ಮಾರ್ಕೆಟಿಂಗ್ ಕಂಪೆನಿಗಳು ಎಲ್ ಪಿಜಿ ದರದ ಪರಿಷ್ಕರಣೆ ಮಾಡುತ್ತವೆ. ಅಡುಗೆ ಅನಿಲ ಸಿಲಿಂಡರ್ ಮಾರುಕಟ್ಟೆ ದರದಲ್ಲೇ ಖರೀದಿ ಆಗುತ್ತದೆ. ಸಬ್ಸಿಡಿ ಹಣವನ್ನು ಸರ್ಕಾರವು ಅರ್ಹ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತದೆ.

ಎಲ್ ಪಿಜಿ ಸಿಲಿಂಡರ್ ಮಾರುಕಟ್ಟೆ ದರ ಮತ್ತು ಸಬ್ಸಿಡೈಸ್ಡ್ ಎಲ್ ಪಿಜಿ ಸಿಲಿಂಡರ್ ದರದ ವ್ಯತ್ಯಾಸವೇ ಸಬ್ಸಿಡಿ. ಗ್ರಾಹಕರಿಗೆ 14.2 ಕೇಜಿ ತೂಕದ ಹನ್ನೆರಡು ಅಡುಗೆ ಅನಿಲ ಸಿಲಿಂಡರ್ ಸಬ್ಸಿಡೈಸ್ಡ್ ದರದಲ್ಲಿ ದೊರೆಯುತ್ತದೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG cylinder Price: ದೇಶದ ಜನರಿಗೆ ಅಡುಗೆ ಅನಿಲ ದರ ಶಾಕ್… LPG ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ!

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG Gas Cylinder: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ, ಹೋಟೆಲ್ ಉದ್ಯಮಕ್ಕೆ ಅಡ್ಡಿ; ಪ್ರಧಾನಿಗೆ ಪತ್ರ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications