100 ರುಪಾಯಿ ಗಡಿ ದಾಟಿದ ಕೇಜಿ ಈರುಳ್ಳಿ ಬೆಲೆ

ಪಶ್ಚಿಮ ಬಂಗಾಲದಲ್ಲಿ ಈರುಳ್ಳಿ ಬೆಲೆ ಸೆಂಚುರಿ ಬಾರಿಸಿದೆ. ಇಲ್ಲಿನ ನಗರಗಳ ಕೆಲವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸೋಮವಾರದಂದು ಒಂದು ಕೇಜಿ ಈರುಳ್ಳಿಯ ಬೆಲೆ 100 ರುಪಾಯಿ ಇತ್ತು. ಬರೀ ನೂರು ರುಪಾಯಿ ದರ ತಲುಪಿದ್ದಷ್ಟೇ ಅಲ್ಲ, ಕೆಲವು ಕಡೆ ನೂರು ರುಪಾಯಿಯನ್ನು ಸಹ ದಾಟಿ ಹೋಗಿದೆ.

ಕಳೆದ ಕೆಲವು ವಾರಗಳಿಂದ ಕೇಜಿ ಈರುಳ್ಳಿ ಬೆಲೆ 70ರಿಂದ 80 ರುಪಾಯಿ ಇತ್ತು. ವರ್ತಕರು ಅಭಿಪ್ರಾಯ ಪಡುವಂತೆ, ಇನ್ನೂ ಕೆಲವು ವಾರಗಳ ಕಾಲ ಇದೇ ಬೆಲೆಯಲ್ಲಿ ಈರುಳ್ಳಿ ಮಾರಾಟ ಆಗುತ್ತದೆ. ಇತ್ತ ಪಶ್ಚಿಮ ಬಂಗಾಲ ರಾಜ್ಯ ಸರ್ಕಾರವು ರಾಜಸ್ಥಾನ ಮತ್ತು ಕರ್ನಾಟಕದಿಂದ ಈರುಳ್ಳಿ ಖರೀದಿಸಲು ನಿರ್ಧರಿಸಿದೆ. ಆದರೆ ಈ ದಾಸ್ತಾನು ಮಾರುಕಟ್ಟೆಗೆ ಬರುವುದು ಮುಂದಿನ ತಿಂಗಳ ಹೊತ್ತಿಗೆ.

ಮಹಾರಾಷ್ಟ್ರದ ನಾಸಿಕ್ ನಲ್ಲಿ ಭಾರೀ ಮಳೆಯಾಗಿದ್ದರಿಂದ ಪಶ್ಚಿಮ ಬಂಗಾಲದಲ್ಲಿ ಈ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರತಿ ತಿಂಗಳು ಪಶ್ಚಿಮ ಬಂಗಾಲಕ್ಕೆ 1 ಲಕ್ಷ ಟನ್ ಈರುಳ್ಳಿ ಬೇಕಾಗುತ್ತದೆ. ಅದರಲ್ಲಿ 70,000 ಟನ್ ನಷ್ಟು ಈರುಳ್ಳಿಯನ್ನು ಮಹಾರಾಷ್ಟ್ರ ಪೂರೈಸುತ್ತದೆ. ಬಾಕಿ ದಾಸ್ತಾನನ್ನು ಕರ್ನಾಟಕ, ಆಂಧ್ರಪ್ರದೇಶದಿಂದ ಖರೀದಿಸಲಾಗುತ್ತದೆ.

100 ರುಪಾಯಿ ಗಡಿ ದಾಟಿದ ಕೇಜಿ ಈರುಳ್ಳಿ ಬೆಲೆ

ನಾಸಿಕ್ ನ ಈರುಳ್ಳಿ ಡಿಸೆಂಬರ್ ಮಧ್ಯದ ಹೊತ್ತಿಗೆ ಮಾರುಕಟ್ಟೆ ತಲುಪಲಿದೆ. ಆಗ ದರದಲ್ಲಿ ಇಳಿಕೆ ಆಗುವ ಬಗ್ಗೆ ನಿರೀಕ್ಷೆ ಮಾಡಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+