ದಕ್ಷಿಣ ಭಾರತದ ಪ್ರಮುಖ ಸಂಬಾರ ಪದಾರ್ಥಗಳ ಉತ್ಪಾದಕ ಈಸ್ಟರ್ನ್ ಕಾಂಡಿಮೆಂಟ್ಸ್ ನಲ್ಲಿ ಷೇರಿನ ಪಾಲು ಖರೀದಿ ಬಗ್ಗೆ ನಾರ್ವೆ ಮೂಲದ ಓರ್ಕ್ಲಾದಿಂದ ಘೋಷಣೆ ಮಾಡಲಾಗಿದೆ. ಕೇರಳ ಮೂಲದ ಈಸ್ಟರ್ನ್ ಕಾಂಡಿಮೆಂಟ್ಸ್ ಅನ್ನು 2000 ಕೋಟಿ ರುಪಾಯಿಗೆ ಮೌಲ್ಯಮಾಪನ ಮಾಡಲಾಗಿದೆ. ಓರ್ಕ್ಲಾ ಕಂಪೆನಿಯು 68% ಷೇರು ಖರೀದಿ ಮಾಡಲಿದೆ. ಅದು ಓರ್ಕ್ಲಾದ ಸಂಪೂರ್ಣ ಮಾಲೀಕತ್ವ ಹೊಂದಿರುವ MTR ಫುಡ್ಸ್ ಮೂಲಕ.
ಅಂದ ಹಾಗೆ 2007ರಲ್ಲಿ ಓರ್ಕ್ಲಾದಿಂದ MTR ಫುಡ್ಸ್ ಖರೀದಿ ಮಾಡಲಾಗಿದೆ. ಈಗಿನ ವ್ಯವಹಾರದ ಭಾಗವಾಗಿ ಎಂಟಿಆರ್ ನಿಂದ ಈಸ್ಟರ್ನ್ ಬ್ರ್ಯಾಂಡ್ ನಲ್ಲಿ 41.8% ಹಾಗೂ ಮೆಕ್ ಕಾರ್ಮಿಕ್ ಇಂಗ್ರೆಡಿಯೆಂಟ್ಸ್ ನಿಂದ ಈಸ್ಟರ್ನ್ ಕಾಂಡಿಮೆಂಟ್ಸ್ ನಲ್ಲಿ ಹೊಂದಿರುವ ಸಂಪೂರ್ಣ 26% ಷೇರು ಖರೀದಿ ಮಾಡಲಾಗುತ್ತದೆ.
ಭಾರತದ ಸ್ಪರ್ಧಾತ್ಮಕ ಆಯೋಗವು ಒಪ್ಪಿಗೆ ನೀಡಬೇಕು
ಮೊದಲ ಹಂತದ ನಂತರ ಈಸ್ಟರ್ನ್ ಕಾಂಡಿಮೆಂಟ್ಸ್ ವಿಲೀನಕ್ಕೆ ಎಂಟಿಆರ್ ನಿಂದ ಅರ್ಜಿ ಹಾಕಲಾಗುತ್ತದೆ. ಆ ನಂತರ ವಿಲೀನವಾದ ಸಂಸ್ಥೆಯನ್ನು ಓರ್ಕ್ಲಾ ಮತ್ತು ಈಸ್ಟರ್ನ್ ಕಾಂಡಿಮೆಂಟ್ಸ್ ಮಾಲೀಕರು ಫಿರೋಜ್ ಹಾಗೂ ನವಸ್ ಮೀರನ್ ಕ್ರಮವಾಗಿ 90.01%, 9.99% ಪಾಲಿನ ಮಾಲೀಕರರಾಗಿರುತ್ತಾರೆ. ಈ ವ್ಯವಹಾರಕ್ಕೆ ಭಾರತದ ಸ್ಪರ್ಧಾತ್ಮಕ ಆಯೋಗವು ಒಪ್ಪಿಗೆ ನೀಡಬೇಕಿದೆ. ಆ ನಂತರವೇ ಇದು ಅಂತಿಮವಾಗುತ್ತದೆ.
ಈಸ್ಟರ್ನ್ ಕಾಂಡಿಮೆಂಟ್ಸ್ 1983ರಲ್ಲಿ ಸ್ಥಾಪನೆ
ಈಸ್ಟರ್ನ್ ಕಾಂಡಿಮೆಂಟ್ಸ್ ಸ್ಥಾಪನೆಯಾದದ್ದು 1983ರಲ್ಲಿ. ಎಂ.ಇ. ಮೀರನ್ ಇದರ ಸ್ಥಾಪಕರು. 2020ರ ಜೂನ್ 30ಕ್ಕೆ ಕೊನೆಯಾದ ಅವಧಿಯ ಹಿಂದಿನ 12 ತಿಂಗಳಲ್ಲಿ ಈಸ್ಟರ್ನ್ ಕಾಂಡಿಮೆಂಟ್ಸ್ ವಹಿವಾಟು 900 ಕೋಟಿ ರುಪಾಯಿ ಇತ್ತು. ಕಂಪೆನಿಯ ಒಟ್ಟು ವಹಿವಾಟಿನಲ್ಲಿ ಅರ್ಧದಷ್ಟು ಕೇರಳದಿಂದಲೇ ಬಂದಿದೆ. ಇನ್ನರ್ಧ ಭಾರತದ ಉಳಿದ ಭಾಗ ಹಾಗೂ ರಫ್ತಿನ ಮೂಲಕ ಬಂದಿದೆ.
ಓಸ್ಲೋದಲ್ಲಿ ಮುಖ್ಯ ಕಚೇರಿ
ಈಸ್ಟರ್ನ್ ನಿಂದ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಸಂಬಾರ ಪದಾರ್ಥಗಳ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಇನ್ನು ಎಂಟಿಆರ್ ನಿಂದ ಶುದ್ಧ ಶಾಕಾಹಾರಿ ಸಂಬಾರ ಪದಾರ್ಥಗಳನ್ನು ಮಾತ್ರ ಮಾಡಲಾಗುತ್ತದೆ. ಇದೀಗ ಈಸ್ಟರ್ನ್ ಹಾಗೂ ಎಂಟಿಆರ್ ಎರಡೂ ಒಂದೇ ಕಂಪೆನಿ ಅಡಿಯಲ್ಲಿ ಬರುವುದರಿಂದ ಉತ್ಪನ್ನಗಳ ಪೋರ್ಟ್ ಫೋಲಿಯೋ ಹಾಗೂ ಭೌಗೋಳಿಕ ವೈವಿದ್ಯದಿಂದಲೂ ಸಾಮರ್ಥ್ಯ ಹೆಚ್ಚಾಗಲಿದೆ. ಓಸ್ಲೋದಲ್ಲಿ ಮುಖ್ಯ ಕಚೇರಿ ಇರುವ ಓರ್ಕ್ಲಾವು ಗ್ರಾಹಕ ವಸ್ತುಗಳ ಪೂರೈಕೆ ಮಾಡುವ ಪ್ರಮುಖ ಕಂಪೆನಿ. ನಾರ್ಡಿಕ್ಸ್, ಬಾಲ್ಟಿಕ್ಸ್ ಮತ್ತು ಕೇಂದ್ರ ಯುರೋಪ್ ಹಾಗೂ ಭಾರತದ ಆಯ್ದ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಪೂರೈಸುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications