ಪೇಟಿಎಂನ ಮಾತೃಸಂಸ್ಥೆಯಾದ One 97 ಕಮ್ಯುನಿಕೇಷನ್ಸ್ 2019- 20ನೇ ಸಾಲಿಗೆ ನಷ್ಟವನ್ನು 28% ಕಡಿತ ಮಾಡಿಕೊಂಡು, 2833 ಕೋಟಿ ರುಪಾಯಿ ತಲುಪಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ನೋಯ್ಡಾ ಮೂಲದ One 97 ಕಮ್ಯುನಿಕೇಷನ್ಸ್ ವೆಚ್ಚ 20% ಕಡಿಮೆಯಾಗಿ, 5,861 ಕೋಟಿ ರುಪಾಯಿಯನ್ನು ಮುಟ್ಟಿದೆ. FY19ರಲ್ಲಿ 7,254 ಕೋಟಿ ರುಪಾಯಿ ವೆಚ್ಚವಾಗಿತ್ತು ಎಂಬ ಮಾಹಿತಿ ನೀಡಲಾಗಿದೆ.
ಇನ್ನು ಇದೇ ವೇಳೆ ಕಂಪೆನಿಯ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಆಗಿದೆ. ಅಂದರೆ, 1% ಕುಸಿದು, 3350 ಕೋಟಿ ರುಪಾಯಿಯನ್ನು ಮುಟ್ಟಿದೆ. 2019- 20ರ ಹಣಕಾಸು ವರ್ಷದಲ್ಲಿ ಕಾರ್ಯ ನಿರ್ವಹಣ್ ಮೂಲಕ 3115 ಕೋಟಿ ರು. ಆದಾಯ ಬಂದಿದ್ದರೆ, FY19ರಲ್ಲಿ 3049 ಕೋಟಿ ರು. ಬಂದಿತ್ತು. 2019- 20ರಲ್ಲಿ ಬಹುತೇಕ ವೆಚ್ಚಗಳನ್ನು "ಇತರ ಖರ್ಚುಗಳು" ಎಂಬ ವಿಭಾಗದಲ್ಲಿ ಸೇರಿಸಿದ್ದು, ಅದು ಒಟ್ಟು ರು. 5861 ಕೋಟಿ ರು. ವರದಿ ಆಗಿದೆ.
ಸತತ ಏಳನೇ ಹಣಕಾಸು ವರ್ಷ ನಷ್ಟ
One 97 ಕಮ್ಯುನಿಕೇಷನ್ಸ್ ಸತತ ಏಳನೇ ಹಣಕಾಸು ವರ್ಷ ನಷ್ಟ ಕಾಣುತ್ತಿದೆ. FY22ರ ಹೊತ್ತಿಗೆ ಕಂಪೆನಿ ಲಾಭದಾಯಕ ಆಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಸಾಲ ವಿತರಣೆ, ಇನ್ಷೂರೆನ್ಸ್, ವೆಲ್ತ್ ಮ್ಯಾನೇಜ್ ಮೆಂಟ್, ವಾಣಿಜ್ಯ ಮತ್ತು ಗೇಮಿಂಗ್ ಸೇರಿ ಇತರ ಹಣಕಾಸು ಸೇವೆಗಳನ್ನು ಆರಂಭಿಸಲಿರುವ ಹಿನ್ನೆಲೆಯಲ್ಲಿ ಕಂಪೆನಿಗೆ ಲಾಭ ಆಗಬಹುದು ಎಂಬ ನಿರೀಕ್ಷೆಯಿದೆ.
ಇತರ ಪ್ಲಾಟ್ ಫಾರ್ಮ್ ಗಳ ಜತೆ ಪೇಟಿಎಂ ಸ್ಪರ್ಧೆ
ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (UPI) ಮತ್ತು ಇ ವ್ಯಾಲೆಟ್ ನಲ್ಲಿ ಪೇಟಿಎಂನೊಂದಿಗೆ ಗೂಗಲ್ ಪೇ, ವಾಲ್ ಮಾರ್ಟ್ ನವರ ಫೋನ್ ಪೇ, ಮೊಬಿಕ್ವಿಕ್, ಭಾರತ್ ಪೇ ಮತ್ತು ಅಮೆಜಾನ್ ಪೇ ಸ್ಪರ್ಧಿಸುತ್ತಿವೆ. ಪೇಟಿಎಂಗೆ 1.7 ಕೋಟಿಗೂ ಹೆಚ್ಚು ವರ್ತಕರು ಹಾಗೂ ಸಕ್ರಿಯ ಸಣ್ಣ ಉದ್ಯಮಿಗಳು ಅದರ ಪ್ಲಾಟ್ ಫಾರ್ಮ್ ನಲ್ಲಿ ಇದ್ದಾರೆ.
ಗಣನೀಯವಾಗಿ ವೆಚ್ಚ ಇಳಿಕೆ
FY20ರ ಸೆಪ್ಟೆಂಬರ್ ತ್ರೈಮಾಸಿಕವೊಂದರಲ್ಲೇ ಪೇಟಿಎಂ ನಷ್ಟವು 37% ಇಳಿಕೆಯಾಗಿ, 2597 ಕೋಟಿ ರುಪಾಯಿ ಮುಟ್ಟಿದೆ ಎಂದು ವರದಿ ಆಗಿತ್ತು. ವೆಚ್ಚವನ್ನು ಗಣನೀಯವಾಗಿ ಇಳಿಕೆ ಮಾಡಿದ್ದು, FY22ರ ಹೊತ್ತಿಗೆ ಕಂಪೆನಿಯು ಲಾಭದಾಯಕವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications