ದೇಶದ ಸರ್ಕಾರಿ ತೈಲ ಕಂಪನಿಗಳು ಇಂದು ಬುಧವಾರ (ಫೆಬ್ರವರಿ 23) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿದ್ದು, ಇಂದು ಕೂಡ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ದೇಶದ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಕಳೆದ ನವೆಂಬರ್ 4ರಿಂದ ಇಂಧನ ದರ ಸ್ಥಿರವಾಗಿದೆ.
ಜಾರ್ಖಂಡ್ ಸರ್ಕಾರ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ಬೆಲೆಯಲ್ಲಿ 25 ರೂ. ಕಡಿತಗೊಳಿಸಿದ ನಂತರ ಕಳೆದ ಜನವರಿ 26ರಿಂದ ಜಾರಿಗೆ ಬಂದಿದೆ. ಉಳಿದಂತೆ ಎಲ್ಲೆಡೆ ಇಂಧನ ದರ ಸ್ಥಿರವಾಗಿದ್ದು, ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಂದು ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾರತದಲ್ಲಿ ಭಾರೀ ಏರಿಕೆ ಕಾಣುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದರೂ, ಅದು ಪೆಟ್ರೋಲ್- ಡೀಸೆಲ್ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ.
ವರದಿಗಳ ಪ್ರಕಾರ, ರಷ್ಯಾ- ಉಕ್ರೇನ್ ಯುದ್ಧ ಭೀತಿಯ ನಡುವೆ ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ 99 (£73) ಗಿಂತ ಹೆಚ್ಚಾಗಿದ್ದು, ಏಳು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಕಳೆದ ಭಾನುವಾರದಂದು ದಾಖಲೆಯ 149.12 ಪ್ರತಿ ಲೀಟರ್‌ಗೆ ತಲುಪಿದ ನಂತರ, ರಷ್ಯಾ- ಉಕ್ರೇನ್ ಬಿಕ್ಕಟ್ಟು ಪೆಟ್ರೋಲ್ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು RAC ಎಚ್ಚರಿಸಿದೆ.
ಸಾಮಾನ್ಯ ಹಣದುಬ್ಬರದ ಹಿನ್ನೆಲೆಯಿಂದಾಗಿ ಭಾರತದಲ್ಲಿ ತೈಲ ಬೆಲೆಗೆ ಇನ್ನಷ್ಟು ಉತ್ತೇಜನ ನೀಡಬಹುದು. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣ ಆಗುತ್ತದೆ. ಅಂದಹಾಗೆ ಕಳೆದ ವರ್ಷದ ನವೆಂಬರ್ನಲ್ಲಿ ಸರ್ಕಾರದಿಂದ ತೈಲ ಬೆಲೆಯ ಅಬಕಾರಿ ಸುಂಕ ಇಳಿಕೆ ಮಾಡಿದ ಮೇಲೆ ಬೆಲೆ ಸ್ಥಿರವಾಗಿಯೇ ಇದೆ. ಆದರೆ ಹೊಸ ವರ್ಷದ ಶುರುವಿನಿಂದಲೂ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇದೆ.
ಕೆಲ ತಿಂಗಳ ಹಿಂದೆ ದೆಹಲಿಯ ಆಪ್ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಅನ್ನು ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಹಾಗಾಗಿ ಅಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 8 ರೂ. ಕಡಿಮೆಯಾಗಿದೆ. ಆದರೆ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 23: 100.58 ರೂ.
ಫೆ. 22: 100.58 ರೂ.
ಫೆ. 21: 100.58 ರೂ.
ಫೆ. 20: 100.58 ರೂ.
ಫೆ. 19: 100.58 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 23: 85.01 ರೂ.
ಫೆ. 22: 85.01 ರೂ.
ಫೆ. 21: 85.01 ರೂ.
ಫೆ. 20: 85.01 ರೂ.
ಫೆ. 19: 85.01 ರೂ.
ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 23: 95.41 ರೂ.
ಫೆ. 22: 95.41 ರೂ.
ಫೆ. 21: 95.41 ರೂ.
ಫೆ. 20: 95.41 ರೂ.
ಫೆ. 19: 95.41 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 23: 86.67 ರೂ.
ಫೆ. 22: 86.67 ರೂ.
ಫೆ. 21: 86.67 ರೂ.
ಫೆ. 20: 86.67 ರೂ.
ಫೆ. 19: 86.67 ರೂ.
ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 23: 109.98 ರೂ.
ಫೆ. 22: 109.98 ರೂ.
ಫೆ. 21: 109.98 ರೂ.
ಫೆ. 20: 109.98 ರೂ.
ಫೆ. 19: 109.98 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 23: 94.14 ರೂ.
ಫೆ. 22: 94.14 ರೂ.
ಫೆ. 21: 94.14 ರೂ.
ಫೆ. 20: 94.14 ರೂ.
ಫೆ. 19: 94.14 ರೂ.
ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 23: 101.40 ರೂ.
ಫೆ. 22: 101.40 ರೂ.
ಫೆ. 21: 101.40 ರೂ.
ಫೆ. 20: 101.40 ರೂ.
ಫೆ. 19: 101.40 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 23: 91.43 ರೂ.
ಫೆ. 22: 91.43 ರೂ.
ಫೆ. 21: 91.43 ರೂ.
ಫೆ. 20: 91.43 ರೂ.
ಫೆ. 19: 91.43 ರೂ.
ಹೈದ್ರಾಬಾದ್‌ನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 23: 108.20 ರೂ.
ಫೆ. 22: 108.20 ರೂ.
ಫೆ. 21: 108.20 ರೂ.
ಫೆ. 20: 108.20 ರೂ.
ಫೆ. 19: 108.20 ರೂ.
ಡೀಸೆಲ್ ದರ (ಪ್ರತಿ ಲೀಟರ್)
ಫೆ. 23: 94.62 ರೂ.
ಫೆ. 22: 94.62 ರೂ.
ಫೆ. 21: 94.62 ರೂ.
ಫೆ. 20: 94.62 ರೂ.
ಫೆ. 19: 94.62 ರೂ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ವರದಿಗಳ ಪ್ರಕಾರ, ರಷ್ಯಾ- ಉಕ್ರೇನ್ ಯುದ್ಧ ಭೀತಿಯ ನಡುವೆ ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ 99 (£73) ಗಿಂತ ಹೆಚ್ಚಾಗಿದ್ದು, ಏಳು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಕಳೆದ ಭಾನುವಾರದಂದು ದಾಖಲೆಯ 149.12 ಪ್ರತಿ ಲೀಟರ್‌ಗೆ ತಲುಪಿದ ನಂತರ, ರಷ್ಯಾ- ಉಕ್ರೇನ್ ಬಿಕ್ಕಟ್ಟು ಪೆಟ್ರೋಲ್ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು RAC ಎಚ್ಚರಿಸಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications