ಡಿ.04: ಸತತ ಒಂದು ತಿಂಗಳು ಇಂಧನ ದರದಲ್ಲಿ ಸ್ಥಿರತೆ; ಇಳಿಕೆ ನಿರೀಕ್ಷೆ

ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದೇಶದಲ್ಲಿ ಇಂದು (ಡಿಸೆಂಬರ್ 04, ಶನಿವಾರ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಒಂದು ತಿಂಗಳ ಕಾಲ ಇಂಧನ ದರ ಸ್ಥಿರವಾಗಿದೆ. ದೀಪಾವಳಿ ಹಬ್ಬದ ವೇಳೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ ಬಳಿಕ ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿತ್ತು.

ಕೊರೊನಾದ ಹೊಸ ರೂಪಾಂತರ ವೈರಸ್​ ಒಮಿಕ್ರಾನ್​​ನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತಲೈದ ಬೆಲೆ ಶುಕ್ರವಾರ ಇಳಿಕೆಯಾಗಿದೆ. ಹಾಗಂತ ದೇಶಾದ್ಯಂತ ಇನ್ನೂ ಪೆಟ್ರೋಲ್-ಡೀಸೆಲ್​ ದರ ಇಳಿಕೆಯಾಗಿಲ್ಲ. ಇತ್ತೀಚೆಗೆ ದೆಹಲಿ ಸರ್ಕಾರ ಪೆಟ್ರೋಲ್​ ಮೇಲಿನ ವ್ಯಾಟ್​ ಕಡಿತಗೊಳಿಸಿದ್ದರಿಂದ ಅಲ್ಲಿ 103 ರೂ.ಇದ್ದ ದರ 95 ರೂ.ಗೆ ಇಳಿಕೆಯಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಅನೇಕ ನಗರಗಳಲ್ಲಿ ಇಂಧನ ದರ ತಗ್ಗಿದೆ. ನವೆಂಬರ್ 4ರಂದು ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಅನೇಕ ರಾಜ್ಯಗಳು ವ್ಯಾಟ್ ಅನ್ನು ಕಡಿಮೆ ಮಾಡಿತ್ತು.

ನವದೆಹಲಿಯಲ್ಲಿ ಶನಿವಾರ (ಡಿಸೆಂಬರ್ 02)ದಂದು ಪೆಟ್ರೋಲ್ ದರ ಪರಿಷ್ಕರಿಸಿದ್ದು, ಪೆಟ್ರೋಲ್ ದರ 95.41 ರೂ./ಲೀಟರ್ ಇದ್ದರೆ, ಡೀಸೆಲ್ ಬೆಲೆ ಪರಿಷ್ಕರಿಸಿಲ್ಲದ ಕಾರಣ ಇಂದು ಡೀಸೆಲ್ ದರವು 86.67 ರೂ./ಲೀಟರ್ ನಂತೆ ಇದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

ದೀಪಾವಳಿ ಸಂದರ್ಭದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆ ಆಯಿತು. ಆನಂತರ ದೇಶದಲ್ಲಿ ಇಂಧನ ದರದಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

 ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಡಿ. 04: 100.58 ರೂ.
ಡಿ. 03: 100.58 ರೂ.
ಡಿ. 02: 100.58 ರೂ.
ಡಿ. 01: 100.58 ರೂ.
ನ. 30: 100.58 ರೂ.

ಡೀಸೆಲ್ (ಪ್ರತಿ ಲೀಟರ್)
ಡಿ. 04: 85.01 ರೂ.
ಡಿ. 03: 85.01 ರೂ.
ಡಿ. 02: 85.01 ರೂ.
ಡಿ. 01: 85.01 ರೂ.
ನ. 30: 85.01 ರೂ.

 ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಡಿ. 04: 95.41 ರೂ.
ಡಿ. 03: 95.41 ರೂ.
ಡಿ. 02: 95.41 ರೂ. (8 ರೂ. ಇಳಿಕೆ)
ಡಿ. 01: 103.97 ರೂ.
ನ. 30: 103.97 ರೂ.

ಡೀಸೆಲ್ (ಪ್ರತಿ ಲೀಟರ್)
ಡಿ. 04: 86.67 ರೂ.
ಡಿ. 03: 86.67 ರೂ.
ಡಿ. 02: 86.67 ರೂ.
ಡಿ. 01: 86.67 ರೂ.
ನ. 30: 86.67 ರೂ.

 ಮುಂಬೈನಲ್ಲಿ  5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಡಿ. 04: 109.98 ರೂ.
ಡಿ. 03: 109.98 ರೂ.
ಡಿ. 02: 109.98 ರೂ.
ಡಿ. 01: 109.98 ರೂ.
ನ. 30: 109.98 ರೂ.

ಡೀಸೆಲ್ (ಪ್ರತಿ ಲೀಟರ್)
ಡಿ. 04: 94.14 ರೂ.
ಡಿ. 03: 94.14 ರೂ.
ಡಿ. 02: 94.14 ರೂ.
ಡಿ. 01: 94.14 ರೂ.
ನ. 30: 94.14 ರೂ.

 ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಡಿ. 04: 101.40 ರೂ.
ಡಿ. 03: 101.40 ರೂ.
ಡಿ. 02: 101.40 ರೂ.
ಡಿ. 01: 101.40 ರೂ.
ನ. 30: 101.40 ರೂ.

ಡೀಸೆಲ್ (ಪ್ರತಿ ಲೀಟರ್)
ಡಿ. 04: 91.43 ರೂ.
ಡಿ. 03: 91.43 ರೂ.
ಡಿ. 02: 91.43 ರೂ.
ಡಿ. 01: 91.43 ರೂ.
ನ. 30: 91.43 ರೂ.

 ಹೈದ್ರಾಬಾದ್‌ನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಹೈದ್ರಾಬಾದ್‌ನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಡಿ. 04: 108.20 ರೂ.
ಡಿ. 03: 108.20 ರೂ.
ಡಿ. 02: 108.20 ರೂ.
ಡಿ. 01: 108.20 ರೂ.
ನ. 30: 108.20 ರೂ.

ಡೀಸೆಲ್ ದರ (ಪ್ರತಿ ಲೀಟರ್)
ಡಿ. 04: 94.62 ರೂ.
ಡಿ. 03: 94.62 ರೂ.
ಡಿ. 02: 94.62 ರೂ.
ಡಿ. 01: 94.62 ರೂ.
ನ. 30: 94.62 ರೂ.

 ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ

ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾದ ಬೆನ್ನಲ್ಲೇ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಇದೇ ವೇಳೆ ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 70 ಡಾಲರ್​ಗಳಷ್ಟು ಕುಸಿದಿದೆ. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+