ಕಳೆದ ನಾಲ್ಕು ದಿನಗಳಿಂದ ಇಂಧನ ದರ ಏರಿಕೆಯಾಗುತ್ತಿದ್ದು, ಇಂದು ಶುಕ್ರವಾರ (ಅ.29) ಮತ್ತೆ ತೈಲ ದರ ಏರಿಕೆ ಆಗಿದೆ. ದಿನದಿಂದ ದಿನಕ್ಕೆ ಪೈಸೆಗಳ ಲೆಕ್ಕದಲ್ಲಿ ದರ ಏರಿಕೆಯಾಗಿ ಆ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗರಿಷ್ಠ ಮಟ್ಟ ತಲುಪಿವೆ.
ಈಗಾಗಲೇ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿದ್ದು, ಸತತ ನಾಲ್ಕು ದಿನಗಳಿಂದ ಏರಿಕೆಯಾಗುತ್ತಲೇ ಇರುವ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಂದು ಶುಕ್ರವಾರ (ಅ.29) ಲೀಟರ್ ಪೆಟ್ರೋಲ್ ಬೆಲೆ ಇಂದು 35 ಪೈಸೆ ಹೆಚ್ಚಳವಾಗಿದೆ ಅದೇ ರೀತಿ ಲೀಟರ್ ಡೀಸೆಲ್ ಬೆಲೆಯಲ್ಲಿಯೂ ಇಂದು 35 ಪೈಸೆ ಹೆಚ್ಚಳವಾಗಿದೆ.
ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿ ಇಂಧನ ದರ ಏರಿಕೆಯಾಗಿದ್ದು, ಇಂದು (ಅ.29, ಶುಕ್ರವಾರ) ಕೂಡ ದೇಶದ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ಮತ್ತು ಲೀಟರ್ ಡೀಸೆಲ್ ದರದಲ್ಲಿ ಏರಿಕೆ ಬಳಿಕ ಇಂಧನ ದರ ಗರಿಷ್ಠ ಮಟ್ಟ ತಲುಪಿದೆ. ಈ ಹಬ್ಬದ ಋತುವಿನಲ್ಲಿ ಇಂಧನ ದರ ಏರುಗತಿಯಲ್ಲಿ ಸಾಗುತ್ತಿದೆ. ಈ ಮೂಲಕ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವೊಂದೇ ಅಲ್ಲದೇ ಲೀಟರ್ ಡೀಸೆಲ್ ದರವೂ ಸಹ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ. ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ ಎಂಬ ಮಾಹಿತಿ ಇಲ್ಲಿದೆ ಪರಿಶೀಲಿಸಿ.
ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಅ.29: 114.35
ಅ.28: 114.00
ಅ.27: 113.69 (35 ಪೈಸೆ ಏರಿಕೆ)
ಅ.26: 113.34 (ಬೆಲೆ ಏರಿಕೆ ಇಲ್ಲ)
ಅ.25: 113.34 (ಬೆಲೆ ಏರಿಕೆ ಇಲ್ಲ)
ಡೀಸೆಲ್ (ಪ್ರತಿ ಲೀಟರ್)
ಅ.29: 97.37
ಅ.28: 97.02
ಅ.27: 96.67 (35 ಪೈಸೆ ಏರಿಕೆ)
ಅ.26: 96.32 (ಬೆಲೆ ಏರಿಕೆ ಇಲ್ಲ)
ಅ.25: 96.32 (ಬೆಲೆ ಏರಿಕೆ ಇಲ್ಲ)
ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಅ.29: 108.64
ಅ.28: 108.29
ಅ.27: 107.94 (35 ಪೈಸೆ ಏರಿಕೆ)
ಅ.26: 107.59 (ಬೆಲೆ ಏರಿಕೆ ಇಲ್ಲ)
ಅ.25: 107.59 (ಬೆಲೆ ಏರಿಕೆ ಇಲ್ಲ)
ಡೀಸೆಲ್ (ಪ್ರತಿ ಲೀಟರ್)
ಅ.29: 97.37
ಅ.28: 97.02
ಅ.27: 96.67 (35 ಪೈಸೆ ಏರಿಕೆ)
ಅ.26: 96.32 (ಬೆಲೆ ಏರಿಕೆ ಇಲ್ಲ)
ಅ.25: 96.32 (ಬೆಲೆ ಏರಿಕೆ ಇಲ್ಲ)
ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಅ. 29: 114.47
ಅ.28: 114.14
ಅ.27: 113.80 (44 ಪೈಸೆ ಏರಿಕೆ)
ಅ.26: 113.34 (ಬೆಲೆ ಏರಿಕೆ ಇಲ್ಲ)
ಅ.25: 113.34 (ಬೆಲೆ ಏರಿಕೆ ಇಲ್ಲ)
ಡೀಸೆಲ್ (ಪ್ರತಿ ಲೀಟರ್)
ಅ.29: 105.49
ಅ.28: 105.12
ಅ.27: 104.75
ಅ.26: 102.23 (ಬೆಲೆ ಏರಿಕೆ ಇಲ್ಲ)
ಅ.25: 102.23 (ಬೆಲೆ ಏರಿಕೆ ಇಲ್ಲ)
ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಅ.29: 105.43
ಅ.28: 105.13
ಅ.27: 104.83
ಅ.26: 104.68 (ಬೆಲೆ ಏರಿಕೆ ಇಲ್ಲ)
ಅ.25: 104.68 (ಬೆಲೆ ಏರಿಕೆ ಇಲ್ಲ)
ಡೀಸೆಲ್ (ಪ್ರತಿ ಲೀಟರ್)
ಅ.29: 101.59
ಅ.28: 101.25
ಅ.27: 100.92
ಅ.26: 100.74 (ಬೆಲೆ ಏರಿಕೆ ಇಲ್ಲ)
ಅ.25: 100.74 (ಬೆಲೆ ಏರಿಕೆ ಇಲ್ಲ)
ಹೈದ್ರಾಬಾದ್‌ನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಅ.29: 113.99
ಅ.28: 112.64
ಅ.27: 112.26
ಅ.26: 111.91 (ಬೆಲೆ ಏರಿಕೆ ಇಲ್ಲ)
ಅ.25: 111.91 (ಬೆಲೆ ಏರಿಕೆ ಇಲ್ಲ)
ಡೀಸೆಲ್ (ಪ್ರತಿ ಲೀಟರ್)
ಅ.29: 106.19
ಅ.28: 105.84
ಅ.27: 105.43
ಅ.26: 105.08 (ಬೆಲೆ ಏರಿಕೆ ಇಲ್ಲ)
ಅ.25: 105.08 (ಬೆಲೆ ಏರಿಕೆ ಇಲ್ಲ)
ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications