ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಂದು (ಅ.26, ಮಂಗಳವಾರ) ಸಹ ಯಾವುದೇ ಬದಲಾವಣೆ ಮಾಡಿಲ್ಲ. ಸತತವಾಗಿ ಏರುಗತಿಯಲ್ಲಿ ಸಾಗುತ್ತಿದ್ದ ಇಂಧನ ದರದಲ್ಲಿ ಸ್ಥಿರತೆ ಕಾಪಾಡಿಕೊಂಡಿದೆ.
ಈಗಾಗಲೇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಖಲಿಸಿರುವ ಇಂಧನ ದರವು, ನಿರಂತರ ಐದು ದಿನಗಳ ಏರಿಕೆಯ ಬಳಿಕ ಸೋಮವಾರ ಹಾಗೂ ಇಂದು ದೇಶದ ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಸಹ ಸ್ಥಿರವಾಗಿದೆ. ನಿರಂತರವಾಗಿ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ನೋಡಿ ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ತಿಂಗಳಿನಿಂದ ಏರುತ್ತಿರುವ ಕಚ್ಚಾ ತೈಲ ಬೆಲೆಗಳಿಂದ ಇಂಧನ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆ ಕಂಡಿವೆ. ಆ ಮೂಲಕ ಪೆಟ್ರೋಲ್ ಡೀಸೆಲ್ ಬೆಲೆ ಗರಿಷ್ಠ ಮಟ್ಟ ತಲುಪಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ 100ರ ಗಡಿ ದಾಟಿರುವುದಲ್ಲದೇ, ಒಂದು ಲೀಟರ್ ಡೀಸೆಲ್ ಬೆಲೆಯೂ ಸಹ 100ರ ಗಡಿ ದಾಟಿದೆ. ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಅ.26: 113.34 (ಬೆಲೆ ಏರಿಕೆ ಇಲ್ಲ)
ಅ.25: 113.34 (ಬೆಲೆ ಏರಿಕೆ ಇಲ್ಲ)
ಅ. 24: 113.34 (36 ಪೈಸೆ ಏರಿಕೆ)
ಅ. 23: 110.98 (37 ಪೈಸೆ ಏರಿಕೆ)
ಅ. 22: 110.61
ಡೀಸೆಲ್ (ಪ್ರತಿ ಲೀಟರ್)
ಅ.26: 96.32 (ಬೆಲೆ ಏರಿಕೆ ಇಲ್ಲ)
ಅ.25: 96.32 (ಬೆಲೆ ಏರಿಕೆ ಇಲ್ಲ)
ಅ. 24: 96.32 (35 ಪೈಸೆ ಏರಿಕೆ)
ಅ. 23: 95.97(35 ಪೈಸೆ ಏರಿಕೆ)
ಅ. 22: 95.62
ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಅ.26: 113.34 (ಬೆಲೆ ಏರಿಕೆ ಇಲ್ಲ)
ಅ.25: 113.34 (ಬೆಲೆ ಏರಿಕೆ ಇಲ್ಲ)
ಅ. 24: 113.34 (36 ಪೈಸೆ ಏರಿಕೆ)
ಅ. 23: 110.98 (37 ಪೈಸೆ ಏರಿಕೆ)
ಅ. 22: 110.61
ಡೀಸೆಲ್ (ಪ್ರತಿ ಲೀಟರ್)
ಅ.26: 102.23 (ಬೆಲೆ ಏರಿಕೆ ಇಲ್ಲ)
ಅ.25: 102.23 (ಬೆಲೆ ಏರಿಕೆ ಇಲ್ಲ)
ಅ. 24: 102.23 (37 ಪೈಸೆ ಏರಿಕೆ)
ಅ. 23: 101.86 (37 ಪೈಸೆ ಏರಿಕೆ)
ಅ. 22: 101.49
ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಅ.26: 107.59 (ಬೆಲೆ ಏರಿಕೆ ಇಲ್ಲ)
ಅ.25: 107.59 (ಬೆಲೆ ಏರಿಕೆ ಇಲ್ಲ)
ಅ. 24: 107.59 (35 ಪೈಸೆ ಏರಿಕೆ)
ಅ. 23: 107.24 (35 ಪೈಸೆ ಏರಿಕೆ)
ಅ. 22: 106.89
ಡೀಸೆಲ್ (ಪ್ರತಿ ಲೀಟರ್)
ಅ.26: 96.32 (ಬೆಲೆ ಏರಿಕೆ ಇಲ್ಲ)
ಅ.25: 96.32 (ಬೆಲೆ ಏರಿಕೆ ಇಲ್ಲ)
ಅ. 24: 96.32 (35 ಪೈಸೆ ಏರಿಕೆ)
ಅ. 23: 95.97(35 ಪೈಸೆ ಏರಿಕೆ)
ಅ. 22: 95.62
ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಅ.26: 104.68 (ಬೆಲೆ ಏರಿಕೆ ಇಲ್ಲ)
ಅ.25: 104.68 (ಬೆಲೆ ಏರಿಕೆ ಇಲ್ಲ)
ಅ. 24: 104.68 (46 ಪೈಸೆ ಏರಿಕೆ)
ಅ. 23: 104.22 (21 ಪೈಸೆ ಏರಿಕೆ)
ಅ. 22: 104.01
ಡೀಸೆಲ್ (ಪ್ರತಿ ಲೀಟರ್)
ಅ.26: 100.74 (ಬೆಲೆ ಏರಿಕೆ ಇಲ್ಲ)
ಅ.25: 100.74 (ಬೆಲೆ ಏರಿಕೆ ಇಲ್ಲ)
ಅ. 24: 100.74 (49 ಪೈಸೆ ಏರಿಕೆ)
ಅ. 23: 100.25 (24 ಪೈಸೆ ಏರಿಕೆ)
ಅ. 22: 100.01
ಹೈದ್ರಾಬಾದ್‌ನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಅ.26: 111.91 (ಬೆಲೆ ಏರಿಕೆ ಇಲ್ಲ)
ಅ.25: 111.91 (ಬೆಲೆ ಏರಿಕೆ ಇಲ್ಲ)
ಅ. 24: 111.91 (36 ಪೈಸೆ ಏರಿಕೆ)
ಅ. 23: 111.55 (37 ಪೈಸೆ ಏರಿಕೆ)
ಅ. 22: 111.18
ಡೀಸೆಲ್ (ಪ್ರತಿ ಲೀಟರ್)
ಅ.26: 105.08 (ಬೆಲೆ ಏರಿಕೆ ಇಲ್ಲ)
ಅ.25: 105.08 (ಬೆಲೆ ಏರಿಕೆ ಇಲ್ಲ)
ಅ. 24: 105.08 (38 ಪೈಸೆ ಏರಿಕೆ)
ಅ. 23: 104.70 (38 ಪೈಸೆ ಏರಿಕೆ)
ಅ. 22: 104.32
ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
More From GoodReturns

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ



Click it and Unblock the Notifications