ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಕಳೆದ ವಾರ ಸತತ ಏಳು ದಿನಗಳ ಕಾಲ ಇಂಧನ ದರವನ್ನು ಏರಿಕೆ ಮಾಡಿದ ಬಳಿಕ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು.
ಆದರೆ, ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಇಂಧನ ಮೇಲಿನ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ್ದು, ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿದೆ. ದೆಹಲಿಯಲ್ಲಿ ಗುರುವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 6.07 ರೂ. ಹಾಗೂ ಡೀಸೆಲ್ ಬೆಲೆ 11. 75 ರೂ. ಪ್ರತಿ ಲೀಟರ್‌ನಂತೆ ಇಳಿಕೆಯಾಗಿತ್ತು. ಕರ್ನಾಟಕದಲ್ಲಿ ಸರಾಸರಿ 7 ರೂ.ನಂತೆ ಇಳಿಕೆಯಾಗಿದೆ.
ನವದೆಹಲಿಯಲ್ಲಿ ಶನಿವಾರ (ನವೆಂಬರ್ 06)ದಂದು ಪೆಟ್ರೋಲ್ -ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದಕ್ಕೂ ಮುನ್ನ ಏಳು ದಿನಗಳಿಂದ ಪೆಟ್ರೋಲ್, ಡೀಸೆಲ್ ದರವು ಪ್ರತಿ ಲೀಟರ್‌ಗೆ ಸರಾಸರಿ 35 ಪೈಸೆ ಏರಿಕೆಗೊಂಡಿತ್ತು.
ನವದೆಹಲಿಯಲ್ಲಿ ಶನಿವಾರದಂದು ಪೆಟ್ರೋಲ್ ದರ 103.97 ರೂ/ಲೀಟರ್ ಡೀಸೆಲ್ ದರವು 86.67 ರೂ./ಲೀಟರ್ ಮುಟ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ಐದು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ನ.6: 100.58 ರೂ.
ನ.5: 100.58 ರೂ.
ನ.4: 107.64 ರೂ.
ನ.3: 113.93 (---)
ನ.2: 113.93 (37 ಪೈಸೆ ಏರಿಕೆ)
ಡೀಸೆಲ್ (ಪ್ರತಿ ಲೀಟರ್)
ನ.6: 85.01
ನ. 5: 85.01
ನ. 4: 92.03 ರು
ನ. 3: 104.50 (---)
ನ. 2: 104.50 (35 ಪೈಸೆ ಏರಿಕೆ)
ನವದೆಹಲಿಯಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ನ.6: 103.97 ರು
ನ.5: 103.97 ರು
ನ.4: 103.97 ರು
ನ.3: 110.04 ರೂ (---)
ನ.2: 110.04 (35 ಪೈಸೆ ಏರಿಕೆ)
ಡೀಸೆಲ್ (ಪ್ರತಿ ಲೀಟರ್)
ನ.6: 86.67 ರು
ನ.5: 86.67 ರು
ನ.4: 86.67 ರು
ನ.3: 98.42 (---)
ನ.2: 98.42 (35 ಪೈಸೆ ಏರಿಕೆ)
ಮುಂಬೈನಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ನ.6: 109.98 ರು
ನ.5: 109.98 ರು
ನ.4: 109.98 ರು
ನ.3: 115.85 (---)
ನ.2: 115.85 (35 ಪೈಸೆ ಏರಿಕೆ)
ಡೀಸೆಲ್ (ಪ್ರತಿ ಲೀಟರ್)
ನ.6: 94.14 ರು
ನ.5: 94.14 ರು
ನ.4: 94.14 ರು
ನ.3: 106.62 (---)
ನ.2: 106.62 (35 ಪೈಸೆ ಏರಿಕೆ)
ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ.6: 101.51 ರು
ನ.5: 101.51 ರು
ನ.4: 101.56 ರು
ನ.3: 106.76 (---)
ನ.2: 106.66 (31 ಪೈಸೆ ಏರಿಕೆ)
ಡೀಸೆಲ್ (ಪ್ರತಿ ಲೀಟರ್)
ನ.6: 91.53
ನ.5: 91.53
ನ.4: 91. 58 ರು
ನ.3: 102.69 (---)
ನ.2: 102.59 (35 ಪೈಸೆ ಏರಿಕೆ)
ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ.6: 108.20 ರು
ನ.5: 108.20 ರು
ನ.4: 108.20 ರು
ನ.3: 114.49 (---)
ನ.2: 114.49 (37 ಪೈಸೆ ಏರಿಕೆ)
ಡೀಸೆಲ್ (ಪ್ರತಿ ಲೀಟರ್)
ನ.6: 94.62 ರು
ನ.5: 94.62 ರು
ನ.4: 94.62 ರು
ನ.3: 107.40 (---)
ನ.2: 107.40 (35 ಪೈಸೆ ಏರಿಕೆ)
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ (ಸದ್ಯ 81.34 ಡಾಲರ್ ಪ್ರತಿ ಬ್ಯಾರೆಲ್) ಮತ್ತು ಡಾಲರ್-ರುಪಾಯಿ ವಿನಿಮಯ ದರ(1 USD=74.49ರೂ)ದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications