ಬೆಂಗಳೂರು, ಏಪ್ರಿಲ್ 14: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಸತತ 15 ದಿನಗಳಿಂದ ಇಂಧನ ದರ ಪರಿಷ್ಕರಿಸಿಲ್ಲ. ದೆಹಲಿಯಲ್ಲಿ ಪ್ರತಿ ಲೀಟರ್ ಬೆಲೆ 90. 56 ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 80.87 ಪ್ರತಿ ಲೀಟರ್ ನಂತಿದೆ.
ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 93.59ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 85.75ರೂಪಾಯಿನಂತೆ ಮಾರಾಟವಾಗುತ್ತಿದೆ, ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಇಂಧನ ದರ ಅತ್ಯಧಿಕವಾಗಿದ್ದು, ಪೆಟ್ರೋಲ್ 96.98 ರು ಹಾಗೂ ಡೀಸೆಲ್ 87.96ರು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ. ಮಿಕ್ಕಂತೆ ದೇಶದಲ್ಲಿ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಅತಿಹೆಚು 101.06 ರು ಹಾಗೂ ಡೀಸೆಲ್ 93.14 ರು ಇದೆ.
ಮಾರ್ಚ್ 2021ರಲ್ಲಿ ಇಂಧನ ಬಳಕೆ ಅತ್ಯಧಿಕ
ಈ ನಡುವೆ ಮಾರ್ಚ್ 2021ರಲ್ಲಿ ಇಂಧನ ಬಳಕೆ ಅತ್ಯಧಿಕ ಎಂದು ಅಂಕಿ ಅಂಶ ತಿಳಿಸಿದೆ. ಡಿಸೆಂಬರ್ 2019ರ ನಂತರ ಭಾರಿ ಬೇಡಿಕೆ ಇದೀಗ ಕಂಡು ಬಂದಿದೆ. ಕಳೆದ ತಿಂಗಳು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಪೆಟ್ರೋಲ್ ಶೇ 27.4 ರಷ್ಟು ಅಧಿಕ ಮಾರಾಟ ಕಂಡು ಬಂದಿದೆ. ಇದೇ ವೇಳೆ ಡಿಸೇಲ್ ಬಳಕೆ ಶೇ 27.6ರಷ್ಟು ಏರಿಕೆಯಾಗಿದೆ.
ಇಂಧನ ದರ ವ್ಯತ್ಯಾಸ ಏಕಿಲ್ಲ
ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಸುಮಾರು 24 ದಿನಗಳ ಕಾಲ ತೈಲ ಬೆಲೆ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಕಚ್ಚಾತೈಲ ಬೆಲೆ ಏರುಪೇರಾದರೂ ತೈಲ ಕಂಪನಿಗಳು ಇಂಧನ ಬೆಲೆ ಪರಿಷ್ಕರಿಸಿರಲಿಲ್ಲ. ಈಗ ಮಾರ್ಚ್ 27ರಿಂದ ಕೆಲ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮೇ 2ರಂದು ಫಲಿತಾಂಶ ಹೊರಬರಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 64.09 ಯುಎಸ್ ಡಾಲರ್( 1 USD=75.24ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.
ಪ್ರಮುಖ ನಗರಗಳಲ್ಲಿ ಏಪ್ರಿಲ್ 2ರಂದು ಇಂಧನ ದರ
ನಗರ - ಪೆಟ್ರೋಲ್- ಡೀಸೆಲ್
ಶ್ರೀಗಂಗಾನಗರ್: 101.0 ರು- 93.14 ರು
ಅನ್ನುಪ್ಪುರ್: 100.96 ರು-91.33 ರು
ದೆಹಲಿ: 90.56ರು- 80.87ರು
ಮುಂಬೈ: 96.98 ರು - 87.96 ರು
ಚೆನ್ನೈ: 92.58 ರು- 85.88 ರು
ಬೆಂಗಳೂರು: 93.65ರು - 85.81 ರು
ಕೋಲ್ಕತ್ತಾ: 90.77 ರು-83.75 ರು
ಹೈದರಾಬಾದ್: 94.16 ರು -88.20 ರು
ನೋಯ್ಡಾ: 88.91 ರು-81.33 ರು
ಪಾಟ್ನ: 92.89 ರು -86.12 ರು
ಲಕ್ನೋ: 88.85 ರು -81.27 ರು
ತಿರುವನಂತಪುರಂ-92.44 ರು-86.90 ರು
ನಿಮ್ಮ ನಗರ, ಪಟ್ಟಣಗಳಲ್ಲಿನ ಇಂಧನ ದರವನ್ನು ತಿಳಿಯಲು ಕ್ಲಿಕ್ ಮಾಡಿ


Click it and Unblock the Notifications