ಏಷ್ಯಾದಲ್ಲಿನ ಮುಂಚೂಣಿಯ ಮರ್ಚೆಂಟ್ ಕಾಮರ್ಸ್ ಪ್ಲಾಟ್‍ಫಾರಂ ಪೈನ್ ಲ್ಯಾಬ್ಸ್ ಭಾರತದಲ್ಲಿ ಡಿಜಿಟಲ್ ಪಾವತಿಗಳ ಅಳವಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಬಲ್ಲ ಫೀಚರ್ ಸನ್ನದ್ಧ ಆ್ಯಪ್ ಆಲ್‍ಟ್ಯಾಪ್ ಬಿಡುಗಡೆ ಮಾಡಿದೆ.
ಪೈನ್ ಲ್ಯಾಬ್ಸ್ ಆಲ್ ಟ್ಯಾಪ್ ಸಣ್ಣ ವ್ಯಾಪಾರಿಗಳಿಗೆ ಅವರ ಎನ್‍ಎಫ್‍ಸಿ-ಸನ್ನದ್ಧ ಸ್ಮಾರ್ಟ್‍ಫೋನ್‍ಗಳಲ್ಲಿ ಯಾವುದೇ ಹೆಚ್ಚುವರಿ ಹಾರ್ಡ್‍ವೇರ್ ಇಲ್ಲದೆ ತಕ್ಷಣವೇ ಡಿಜಿಟಲ್ ಪಾವತಿಗಳನ್ನು ಪಡೆಯಲು ಅವಕಾಶ ನೀಡುವ ಕ್ರಾಂತಿಕಾರಕ ಆ್ಯಪ್ ಆಗಿದೆ. ಆ್ಯಪ್ ಒಳಗಿನ ಟ್ಯಾಪ್ ಅಂಡ್ ಪೇ' ಫೀಚರ್ ಸುರಕ್ಷಿತ ಮತ್ತು ಪಿಸಿಐ ಸೆಕ್ಯುರಿಟಿ ಸ್ಟಾಂಡರ್ಡ್ಸ್ ಕೌನ್ಸಿಲ್ (ಪಿಸಿಐ ಎಸ್‍ಎಸ್‍ಸಿ), ರುಪೇ, ವಿಸಾ, ಮಾಸ್ಟರ್ ಕಾರ್ಡ್ ಮತ್ತು ಅಮೆಕ್ಸ್‍ಗಳಿಂದ ಮಾನ್ಯತೆ ಪಡೆದಿದೆ.
ಪ್ರಸ್ತುತ ಸಾಂಕ್ರಾಮಿಕವು ಭಾರತದಲ್ಲಿ ಡಿಜಿಟಲ್ ಪಾವತಿಗಳ ಅಳವಡಿಕೆಗೆ ವೇಗ ನೀಡಿದೆ, ಇದರಲ್ಲಿ ದೊಡ್ಡ ಹಾಗೂ ಅತ್ಯಂತ ಪ್ರಮುಖ ಉದ್ಯಮಿಗಳ ವರ್ಗವು ಇನ್ನೂ ಡಿಜಿಟೈಸೇಷನ್‍ಗೆ ಬಂದಿಲ್ಲ. ಪೈನ್ ಲ್ಯಾಬ್ಸ್ ಆಲ್‍ಟ್ಯಾಪ್ ಈ ಪ್ರಮುಖ ವರ್ಗವನ್ನು ಮುಖ್ಯವಾಗಿ ಡಿಜಿಟಲ್ ಪಾವತಿಗಳನ್ನು ಪಡೆಯಲು ಸಾಂಪ್ರದಾಯಿಕ ಪಾಯಿಂಟ್-ಆಫ್-ಸೇಲ್(ಪಿಒಎಸ್) ಟರ್ಮಿನಲ್ ಸಣ್ಣ ವ್ಯಾಪಾರಿಗಳು, ಗೃಹ ಉದ್ಯಮಿಗಳು, ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಕ್ಯಾಬ್ ಚಾಲಕರು ಮತ್ತಿತರರನ್ನು ತಲುಪಲಿದೆ.

ಈ ಬಿಡುಗಡೆ ಕುರಿತು ಪೈನ್ ಲ್ಯಾಬ್ಸ್‍ನ ಸಿಇಒ ಬಿ. ಅಮ್ರಿಶ್ ರಾವು, ''ನಾವು ಸಣ್ಣ ವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ಸ್ವಯಂ-ಉದ್ಯೋಗಿಗಳು, ಟ್ಯೂಷನ್ ಮಾಡುವವರು ಸರಳ ಡಿಜಿಟಲ್ ಪಾವತಿಗಳ ಅನುಮೋದನೆಯ ಪರಿಹಾರ ಬೇಕು ಎನ್ನುವುದನ್ನು ಕೇಳಿದೆವು. ಅವರ ಅಗತ್ಯಗಳಿಗೆ ಪ್ರತಿಕ್ರಿಯೆಯಾಗಿ ನಾವು ಆಲ್‍ಟ್ಯಾಪ್ ಅನಾವರಣಗೊಳಿಸಲು ಹೆಮ್ಮೆ ಪಡುತ್ತೇವೆ. ಆಲ್‍ಟ್ಯಾಪ್ ಅತ್ಯಾಧುನಿಕ ಸಂಪರ್ಕರಹಿತ ಪಾವತಿಗಳ ತಂತ್ರಜ್ಞಾನದೊಂದಿಗೆ ಬಂದಿದೆ ಮತ್ತು ಡಿಜಿಟಲ್ ಪಾವತಿಗಳನ್ನು ಒಪ್ಪಿಕೊಳ್ಳುವ ವ್ಯಾಪಾರಿಗಳಿಗೆ ಯಾವುದೇ ಹೆಚ್ಚುವರಿ ಹಾರ್ಡ್‍ವೇರ್ ಬೇಕಿಲ್ಲ. ಅವರ ಎನ್‍ಎಫ್‍ಸಿ-ಸನ್ನದ್ಧ ಸ್ಮಾರ್ಟ್‍ಫೋನ್ ಈಗ ಪಾವತಿಗಳನ್ನು ಪಡೆಯುವ ಡಿವೈಸ್ ಆಗುತ್ತದೆ. ಪೈನ್ ಲ್ಯಾಬ್ಸ್ ಆಲ್ ಟ್ಯಾಪ್‍ಗೆ ಭಾರತದಲ್ಲಿ ಮಾತ್ರವಲ್ಲದೆ ಇತರೆ ಮಾರುಕಟ್ಟೆಗಳಲ್ಲೂ ಡಿಜಿಟಲ್ ಡಿವೈಡ್ ನಡುವೆ ಅಂತರ ತುಂಬುವಲ್ಲಿ ಅಪಾರ ಸಾಮಥ್ರ್ಯವಿದೆ. ಮಾರುಕಟ್ಟೆಗೆ ಇಂದು ಈ ಮುಂಚೂಣಿಯ ಆ್ಯಪ್ ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ'' ಎಂದರು.
ಲ್ಯಾಬ್ಸ್ ಆಲ್‍ಟ್ಯಾಪ್ ಬಳಸಿ ವ್ಯಾಪಾರಿಗಳು ಅವರ ಎನ್‍ಎಫ್‍ಸಿ-ಸನ್ನದ್ಧ ಸ್ಮಾರ್ಟ್‍ಫೋನ್ ಅನ್ನು ನಿಮಿಷಗಳಲ್ಲಿ ಪಾವತಿ ಒಪ್ಪಿಕೊಳ್ಳುವ ಡಿವೈಸ್ ಆಗಿ ಪರಿವರ್ತಿಸಬಹುದು ಮತ್ತು ವಹಿವಾಟನ್ನು ನಂತರ ಮಾರಾಟ ಹೆಚ್ಚಿಸಲು ಇಎಂಐಗಳಾಗಿ ಪರಿವರ್ತಿಸಬಹುದು. ಆಲ್‍ಟ್ಯಾಪ್ ಪೈನ್ ಲ್ಯಾಬ್ಸ್‍ನ ಸದೃಢ ಪಾವತಿಯ ಮೂಲಸೌಕರ್ಯವು ಈಗಗಲೇ 150,000 ವ್ಯಾಪಾರಿಗಳಿಂದ ವಿಶ್ವಾಸ ಪಡೆದಿದೆ.
ಪೈನ್ ಲ್ಯಾಬ್ಸ್ ಆಲ್‍ಟ್ಯಾಪ್ ಸಣ್ಣ ವ್ಯಾಪಾರಿಗಳ ಹಲವಾರು ಸಂಕಷ್ಟದ ಅಂಶಗಳನ್ನು ಪರಿಹರಿಸುತ್ತದೆ. ವ್ಯಾಪಾರಿಯು ಈಗ ಸಂಪರ್ಕರಹಿತ ಡಿಜಿಟಲ್ ಪಾವತಿಗಳಿಗೆ ಬದಲಾಗಬಹುದು, ಮನೆಬಾಗಿಲಿನ ಡೆಲಿವರಿಗೆ ಡಿಜಿಟಲ್ ಪಾವತಿಗಳನ್ನು ಪಡೆಯಬಹುದು, ತ್ವರಿತ ಟ್ಯಾಪ್ ಅಂಡ್ ಗೋ ಪಾವತಿಗಳ ಮೂಲಕ ತಡವಾಗುವುದನ್ನು ತಡೆಯಬಹುದು.
ಈ ಆ್ಯಪ್‍ಗೆ ವ್ಯಾಪಾರಿಗಳನ್ನು ಡಿಜಿಟಲ್ ಆನ್‍ಬೋರ್ಡಿಂಗ್‍ಗೆ ಕಡಿಮೆ ದಾಖಲೀಕರಣ ಅಗತ್ಯವಾಗಿದ್ದು ಇದನ್ನು ಡೌನ್‍ಲೋಡ್ ಮಾಡಲು ಮತ್ತು ಈ ಪರಿಹಾರ ಬಳಸುವುದು ತಕ್ಷಣ ಸಾಧ್ಯವಾಗುತ್ತದೆ. ಪೈನ್ ಲ್ಯಾಬ್ಸ್ ಆಲ್‍ಟ್ಯಾಪ್ ಈಗ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ.


Click it and Unblock the Notifications