ದೇಶದಲ್ಲಿ ಪ್ರಮುಖವಾಗಿ ನಾಲ್ಕು ಖಾಸಗಿ ವಲಯದ ವಿಮಾ ಸಂಸ್ಥೆಗಳು ಇದೆ. ಈ ನಾಲ್ಕು ವಿಮಾ ಸಂಸ್ಥೆಗಳು ಕಳೆದ ಐದು ವರ್ಷದಲ್ಲಿ ಆರೋಗ್ಯ ವಿಮೆಯಲ್ಲಿ ಸುಮಾರು 26,364 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ. ಹೆಚ್ಚಾಗಿ ಗ್ರೂಪ್ ಪಾಲಿಸಿಯನ್ನು ಕ್ಲೈಮ್ ಮಾಡಲಾಗಿರುವ ಕಾರಣದಿಂದಾಗಿ ಈ ನಷ್ಟ ಸಂಭವಿಸಿದೆ ಎಂದು ಕಾಂಪ್ರೋಲರ್ ಆಂಡ್ ಆಡಿಟರ್ ಜನರಲೆ ಆಫ್ ಇಂಡಿಯಾ (ಸಿಎಜಿ) ಮಾಹಿತಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಜಿ, "ಆರೋಗ್ಯ ವಿಮಾ ಕ್ಷೇತ್ರದಲ್ಲಿ ಈ ನಷ್ಟವು ಸಂಭವಿಸಿದೆ. ಕ್ಲೈಮ್ ಅಧಿಕವಾಗಿದೆ. ನಷ್ಟ ಅಧಿಕವಾಗಿದೆ. ಎಲ್ಲಾ ವಲಯದ ನಷ್ಟವು ಹೆಚ್ಚಾಗಿದೆ," ಎಂದು ಸಿಎಜಿ ವರದಿಯು ಉಲ್ಲೇಖ ಮಾಡಿದೆ.
ನಾಲ್ಕು ವಿಮಾ ಸಂಸ್ಥೆಗಳಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (ಎನ್‌ಐಎಸಿಎಲ್), ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (ಯುಐಐಸಿಎಲ್), ಒರಿಯಂಟೆಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಒಐಸಿಎಲ್), ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಎನ್ಐಸಿಎಲ್) ಹಣಕಾಸು ವರ್ಷ 2016-17ರಿಂದ 2016-17ರವರೆಗೆ ಒಟ್ಟು ಸುಮಾರು 26,364 ಕೋಟಿ ರೂಪಾಯಿ ನಷ್ಟವನ್ನು ಕಂಡಿದೆ.

ಎರಡನೇ ಅತೀ ದೊಡ್ಡ ವಿಮೆ ಆರೋಗ್ಯ ವಿಮೆ
ದೇಶದಲ್ಲಿ ಎರಡನೇ ಅತೀ ದೊಡ್ಡ ವಿಮೆಯು ಆರೋಗ್ಯ ವಿಮೆಯಾಗಿದೆ. ಮೊದಲ ಸ್ಥಾನದಲ್ಲಿ ಮೋಟಾರು ವಿಮೆ ಇದೆ. 2016-17ರಿಂದ 2020-21ರವರೆಗೆ ಆರೋಗ್ಯ ವಿಮೆಗೆ ಒಟ್ಟು 1,16,551 ಕೋಟಿ ಒಟ್ಟು ಡೈರೆಕ್ಟ್ ಪ್ರೀಮಿಯಂ ಪಾವತಿಯಾಗಿದೆ. ಇನ್ನು ಖಾಸಗಿ ವಲಯದ ವಿಮಾ ಸಂಸ್ಥೆಗಳ ಮಾರುಕಟ್ಟೆ ಮೌಲ್ಯವು ಕೂಡಾ ಇಳಿಕೆಯಾಗುತ್ತಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗ್ರೂಪ್ ಪಾಲಿಸಿಗೆ ಸಂಬಂಧಿಸಿದ ಬಗ್ಗೆ ಮಾರ್ಗಸೂಚಿಯ್ನನು ಜಾರಿಗೆ ತಂದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ. ಈ ಮಾರ್ಗಸೂಚಿ ಪ್ರಕಾರ ಗ್ರೂಪ್ ಪಾಲಿಸಿಯ ಅನುಪಾತ ಶೇಕಡ 95ಕ್ಕಿಂತ ಅಧಿಕವಾಗಿರಬಾರದು.


Click it and Unblock the Notifications