ಆನ್‌ಲೈನ್ ವಂಚನೆಗಳು ಎಷ್ಟು ಹೆಚ್ಚಾಗುತ್ತಿದೆ ಎಂದರೆ ಪ್ರತಿ ದಿನ ಒಂದಲ್ಲ ಒಂದು ಪ್ರಕರಣಗಳು ವರದಿಯಾಗುತ್ತಲೇ ಇದೆ. ಈಗ 40 ವರ್ಷದ ಪುಣೆ ನಿವಾಸಿ ಅವಿನಾಶ್ ಕೃಷ್ಣನಕುಟ್ಟಿ ಕುನ್ನುಬರಮ್ ಎಂಬುವವರು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದಾರೆ. ಅದು ಕೂಡಾ ಸಾಮಾಜಿಕ ಮಾಧ್ಯಮದ ಒಂದು ಪೋಸ್ಟ್‌ಗೆ ಲೈಕ್ ಕೊಟ್ಟು!
ಹೌದು, ಅವಿನಾಶ್ ಕೃಷ್ಣನಕುಟ್ಟಿ ಕುನ್ನುಬರಮ್ 20.32 ಲಕ್ಷ ರೂಪಾಯಿಗಳ ನಷ್ಟವನ್ನು ಕಂಡಿದ್ದಾರೆ. ಉದ್ಯೋಗದ ಅಭದ್ರತೆ ಮತ್ತು ವಜಾಗೊಳಿಸುವ ಪ್ರಕ್ರಿಯೆಗಳ ನಡುವೆ ಮಾರ್ಚ್ 2023 ರಲ್ಲಿ ಈ ಘಟನೆಯು ನಡೆಸಿದೆ. ಸರಳವಾದ ಆನ್‌ಲೈನ್ ಕಾರ್ಯಗಳ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸುವ ಅವಕಾಶ ನೀಡುವುದಾಗಿ ಹೇಳಿ ವಂಚನೆ ಮಾಡಲಾಗಿದೆ.

ಸುಲಭವಾಗಿ ಹಣವನ್ನು ಪಡೆಯಲು ಸಾಧ್ಯವಿದೆ ಎಂದು ಆಕರ್ಷಣೆಗೆ ಒಳಗಾಗಿ, ಅವಿನಾಶ್ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರತಿ ಕ್ಲಿಕ್‌ಗೆ ಹಣ ನೀಡುವುದಾಗಿ ಹೇಳಲಾಗಿತ್ತು. ಇದರಿಂದಾಗಿ ಸುಲಭದಲ್ಲಿ ಹಣ ಗಳಿಸಬಹುದೆಂದು ಅವಿನಾಶ್ ವಂಚನೆಗೆ ಒಳಗಾಗಿದ್ದಾರೆ.
ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ, ಆರಂಭಿಕವಾಗಿ ಅವಿನಾಶ್ ಕೃಷ್ಣನಕುಟ್ಟಿಗೆ ಇದರಲ್ಲಿ ಆದಾಯ ಲಭ್ಯವಾಗಿದೆ. ಇದರಿಂದಾಗಿ ನಂಬಿಕೆಯೂ ಹೆಚ್ಚಾಗಿದೆ. ಇದು ಕಾನೂನುಬದ್ಧವಾದ ಕೆಲಸ ಎಂದು ಕೂಡಾ ಅವಿನಾಶ್ ಅಂದುಕೊಂಡಿದ್ದರು. ಆದರೆ ವಂಚಕರು ಶೀಘ್ರದಲ್ಲೇ ತಮ್ಮ ಯೋಜನೆಯ ಎರಡನೇ ಹಂತವನ್ನು ಆರಂಭಿಸಿ ವಂಚನೆ ಮಾಡಿದ್ದಾರೆ.
ಅದಾದ ಬಳಿಕ ಅವಿನಾಶ್ ಅವರು 'ಪೇಯ್ಡ್ ಟಾಸ್ಕ್ ಗ್ರೂಪ್'ಗೆ ಸೇರಿದ್ದಾರೆ. ಇದು ಇನ್ನೂ ಹೆಚ್ಚಿನ ಆದಾಯವನ್ನು ನೀಡುವ ಭರವಸೆಯನ್ನು ನೀಡಿದೆ. ಲಾಭ ಲಭ್ಯವಾಗುತ್ತಿದ್ದಂತೆ ತನ್ನ ಅವಿನಾಶ್ ಆಸೆಯೂ ಹೆಚ್ಚಾಗಿ ಈ ಗುಂಪನ್ನು ತಾನಾಗಿಯೇ ಸೇರಿದ್ದಾರೆ. ವರ್ಷವಿಡೀ ಕ್ರಮೇಣ ಹಣವನ್ನು ವರ್ಗಾಯಿಸಿದರು.
ಡಿಸೆಂಬರ್ 2023 ರ ಹೊತ್ತಿಗೆ, ಮೊತ್ತವು 20.32 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಈ ಹಂತದಲ್ಲಿ ಅವಿನಾಶ್‌ಗೆ ತಾನು ವಂಚನೆಗೆ ಬಲಿಯಾಗಿರುವುದು ಅರಿವಾಗಿದೆ. ಜನವರಿ 3, 2024 ರಂದು, ಅವಿನಾಶ್ ವಕಾಡ್ ಪೊಲೀಸ್ ಠಾಣೆಗೆ ಅಪರಾಧದ ಬಗ್ಗೆ ರಿಪೋರ್ಟ್ ಮಾಡಿದ್ದಾರೆ. ಅಪರಿಚಿತ ವಂಚಕನ ವಿರುದ್ಧ ದೂರು ದಾಖಲಿಸಿದರು.
ಅವಿನಾಶ್ ಕಥೆ ಬೇರೆಯೇ ಆಗಿದೆ. ಏಕೆಂದರೆ ಇತ್ತೀಚಿನ ತಿಂಗಳುಗಳಲ್ಲಿ ವ್ಯಕ್ತಿಗಳು ಆನ್‌ಲೈನ್ ವಂಚನೆಗೆ ಗಣನೀಯ ಪ್ರಮಾಣದ ಹಣವನ್ನು ಕಳೆದುಕೊಂಡಿರುವ ಇದೇ ರೀತಿಯ ಪ್ರಕರಣಗಳು ಹೊರಹೊಮ್ಮಿವೆ. ಲಾಭದ ಭರವಸೆಯಿಂದ ಆಮಿಷಕ್ಕೆ ಒಳಗಾಗಿ ಅದೆಚ್ಟೋ ಮಂದಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಟಾಸ್ಕ್-ಆಧಾರಿತ ಸ್ಕ್ಯಾಮ್‌ಗಳು ಎಂದು ಕರೆಯಲ್ಪಡುವ ಈ ವಂಚನೆಗಳು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ಯೂಟ್ಯೂಬ್ ವೀಡಿಯೋಗಳನ್ನು ಇಷ್ಟಪಡುವುದು ಅಥವಾ ನಿರ್ದಿಷ್ಟ ಆನ್‌ಲೈನ್ ವಿಮರ್ಶೆಗಳನ್ನು ಮಾಡುವ ಕಾರ್ಯ ಇದಾಗಿದೆ.
ಈ ಅಪರಾಧಗಳಲ್ಲಿ ಹೆಚ್ಚಿನವು ವಾಟ್ಸಾಪ್ ಅಥವಾ ಟೆಲಿಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಾರಂಭವಾಗುತ್ತವೆ. ಸಾಮಾನ್ಯವಾಗಿ ಸರಳ ಶುಭಾಶಯ ಸಂದೇಶದೊಂದಿಗೆ ಪ್ರಾರಂಭವಾಗುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ, ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿದೆ.


Click it and Unblock the Notifications