ಅಹ್ಮದಾಬಾದ್, ಅ. 27: ಚೀನಾ ಮಾದರಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಹಿಂದೆ ಬೀಳುವ ಬದಲು ಸರ್ವಿಸ್ ಸೆಕ್ಟರ್‌ಗೆ ಭಾರತ ಗಮನ ಹರಿಸಬೇಕು ಎಂದು ಮೊನ್ನೆಮೊನ್ನೆ ಹೇಳಿದ್ದ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ತಮ್ಮ ಆ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಅದೇ ವೇಳೆ ಭಾರತದಲ್ಲಿ ನಿರುದ್ಯೋಗ ಪರಿಸ್ಥಿತಿ ಆತಂಕಕಾರಿ ಎನಿಸಿದೆ ಎಂದು ಹೇಳಿರುವ ಅವರು, ಉದ್ಯೋಗ ಸೃಷ್ಟಿಸುವ ಸರ್ವಿಸ್ ಸೆಕ್ಟರ್ ಕಡೆ ಭಾರತದ ಗಮನ ಇರಬೇಕು ಎಂದು ಮತ್ತೊಮ್ಮೆ ತಿಳಿಹೇಳಿದ್ದಾರೆ.
ಇಲ್ಲಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಿನ್ನೆ ಬುಧವಾರ ಸಂವಾದ ನಡೆಸುತ್ತಿದ್ದ ಅವರು, ಭಾರತ ವಿಶ್ವದ ದೊಡ್ಡ ಆರ್ಥಿಕತೆಯ ದೇಶವಾಗಿ ಬೆಳೆದಿದೆ ಎಂದು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ತಿಳಿಸಿದ್ದಾರೆ.
"ನಾವು ಬಹಳಷ್ಟು ಕೆಲಸ ಮಾಡುವುದು ಬಾಕಿ ಇದೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿದ್ದೇವೆ, ನಮ್ಮಗಿನ್ನೇನು ಸಮಸ್ಯೆ ಇರಲ್ಲ ಎಂದು ಆರಾಮವಾಗಿ ಇರಲು ಆಗಲ್ಲ. ನಮ್ಮ ಬೆಳವಣಿಗೆಗೆ ಅಗತ್ಯ ಇರುವ ಉದ್ಯೋಗಗಳ ಸೃಷ್ಟಿಗೆ ಶ್ರಮಿಸಬೇಕಿದೆ. ಉದ್ಯೋಗದ ಪರಿಸ್ಥಿತಿ ಬಗ್ಗೆ ಹೇಳುವುದಾದರೆ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ" ಎಂದಿದ್ದಾರೆ.
ಕೃಷಿಯತ್ತ ಜನರ ಮುಖ
ಜನರು ಕೃಷಿ ಕ್ಷೇತ್ರಕ್ಕೆ ಮರಳುತ್ತಿರುವ ಟ್ರೆಂಡ್ ಬಗ್ಗೆ ಮಾತನಾಡಿದ ರಾಜನ್, ಕೃಷಿಗಾರಿಕೆಗೆ ಸಂಬಂಧಿಸಿದ ಉದ್ಯೋಗಗಳು ಹೆಚ್ಚುತ್ತಿರುವುದು ಅಭಿವೃದ್ಧಿಶೀಲ ಆರ್ಥಿಕತೆಗೆ ಅನಿರೀಕ್ಷಿತ ಎಂಬುದನ್ನು ಹೇಳಿದ್ದಾರೆ. ಹಾಗೆಯೇ, ಕೃಷಿಯತ್ತ ಜನರು ಮುಖ ಮಾಡಿರುವುದರಿಂದ ನಿರುದ್ಯೋಗ ಪ್ರಮಾಣ ಈಗಿರುವ ಅಂದಾಜಿಗಿಂತ ತುಸು ಹೆಚ್ಚೇ ಇರಬಹುದು ಎಂಬುದು ಅವರ ಭಾವನೆ.
"ಸಾಮಾನ್ಯವಾಗಿ ಜನರು ಕೃಷಿ ತೊರೆದು ಸರ್ವಿಸ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್‌ಗಳಿಗೆ ಬರುತ್ತಾರೆ. ಆದರೆ, ಕಳೆದೆರಡು ವರ್ಷದಲ್ಲಿ ಜನರು ಕೃಷಿಗಾರಿಕೆಗೆ ಮರಳುತ್ತಿರುವುದನ್ನು ನೋಡಿದ್ದೇವೆ. ಹೀಗಾಗಿ, ನಿರುದ್ಯೋಗ ಎಷ್ಟಿದೆ ಎಂಬ ಅಂಕಿ ಅಂಶ ಗೊಂದಲ ಹುಟ್ಟಿಸಬಹುದು. ಯಾಕೆಂದರೆ ಕೃಷಿಗೆ ಮರಳಿದ ಜನರಲ್ಲಿ ಎಷ್ಟು ಮಂದಿ ಕೆಲಸದಲ್ಲಿ ನಿರತರಾಗಿದ್ಧಾರೆ ಎಂಬುದು ಲೆಕ್ಕಕ್ಕೆ ಸಿಗುವುದಿಲ್ಲ" ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ತಪ್ಪು ನೀತಿ
ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ರೋಜಗಾರ್ ಮೇಳವನ್ನು ರಾಷ್ಟ್ರವ್ಯಾಪಿ ಆರಂಭಿಸಿದೆ. 10 ಲಕ್ಷ ಮಂದಿಗೆ ನೇಮಕಾತಿ ಮಾಡಿಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆ ಇದು. ಆದರೆ, ಈ ಉದ್ಯೋಗ ಯೋಜನೆ ಫಲಶ್ರುತಿ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಂದೇಹ ವ್ಯಕ್ತಪಡಿಸಿದ್ದಾರೆ.
"ಸರ್ಕಾರ ಉದ್ಯೋಗಸೃಷ್ಟಿಗಾಗಿ ಮತ್ತು ಆರ್ಥಿಕ ಪ್ರಗತಿಗಾಗಿ ಉತ್ಪಾದನಾ ವಲಯಕ್ಕೆ ಭಾರೀ ಗಮನ ಹರಿಸುತ್ತಿರುವುದು ಸರಿ ಎನಿಸುತ್ತಿಲ್ಲ. ಮ್ಯಾನುಫ್ಯಾಕ್ಚರಿಂಗ್ ವಲಯದ ಉದ್ಯೋಗಗಳ ಬಗ್ಗೆ ಗಮನವನ್ನೇ ನೀಡಬಾರದು ಎಂಬುದು ನನ್ನ ಮಾತಿನ ಅರ್ಥವಲ್ಲ. ಈ ವಲಯಕ್ಕೆ ಸರ್ಕಾರ ಎಷ್ಟೊಂದು ಸಬ್ಸಿಡಿಗಳನ್ನು ನೀಡುತ್ತಿದೆಯಲ್ಲ, ಅದನ್ನೇ ಸರ್ವಿಸ್ ಸೆಕ್ಟರ್‌ಗೆ ಹಾಕಿದರೆ ಸಾಕಷ್ಟು ಉದ್ಯೋಗ ಸೃಷ್ಟಿಸಬಹುದು ಮತ್ತು ರಫ್ತು ಕೂಡ ಹೆಚ್ಚಿಸಬಹುದು" ಎಂಬುದು ರಘುರಾಮ್ ರಾಜನ್ ಅನಿಸಿಕೆ.
ಸರ್ವಿಸ್ ಸೆಕ್ಟರ್ ಯಾಕೆ ಬೆಟರ್?
ತಯಾರಕಾ ಅಥವಾ ಉತ್ಪಾದನಾ ವಲಯಕ್ಕಿಂತ ಸೇವಾ ವಲಯ ಯಾಕೆ ಉತ್ತಮ ಎಂಬುದಕ್ಕೆ ರಾಜನ್ ಕೆಲ ನಿದರ್ಶನ ಮತ್ತು ಉದಾಹರಣೆಗಳನ್ನೂ ನೀಡಿದ್ದಾರೆ. ಸದ್ಯದ ಜಾಗತಿಕ ವಾತಾವರಣದಲ್ಲಿ ಮ್ಯಾನುಫ್ಯಾಕ್ಚರಿಂಗ್‌ಗಿಂತ ಸರ್ವಿಸ್ ಸೆಕ್ಟರ್‌ನಿಂದ ರಫ್ತು ಹೆಚ್ಚಿಸುವುದು ಸುಲಭ. ಮೇಲಾಗಿ ಸರ್ವಿಸ್ ಸೆಕ್ಟರ್‌ನಲ್ಲಿ ಉದ್ಯೋಗಕ್ಕೆ ದೈಹಿಕ ಶ್ರಮದ ಅಗತ್ಯತೆ ಹೆಚ್ಚು. ಇದರಿಂದ ಹೆಚ್ಚು ಜನರಿಗೆ ಉದ್ಯೋಗಾವಕಾಶ ಸಿಗುತ್ತದೆ ಎಂಬುದು ರಾಜನ್ ಅವರ ವಾದ.
"ಚಿಪ್‌ಗಳನ್ನು ತಯಾರಿಸುವುದಕ್ಕೆ ದೈಹಿಕ ಶ್ರಮ ಕಡಿಮೆ ಇರುತ್ತದೆ. ಬಂಡವಾಳ ಹೆಚ್ಚು ಬೇಕಾಗುತ್ತದೆ. ಆದರೆ, ಚಿಪ್‌ನ ವಿನ್ಯಾಸ ಮಾಡುವುದಕ್ಕೆ ಮಾನವ ಶ್ರಮ ಅಗತ್ಯ ಇರುತ್ತದೆ. ನಮ್ಮಲ್ಲಿ ಒಳ್ಳೆಯ ಎಂಜಿನಿಯರ್‌ಗಳು ಮತ್ತು ಮ್ಯಾನೇಜ್ಮೆಂಟ್ ಜನರು ಇರುವುದರಿಂದ ಈ ಕೆಲಸ ಸುಲಭವಾಗುತ್ತದೆ. ಚಿಪ್‌ಗಳನ್ನೇ ತಯಾರಿಸುವ ಬದಲು ಚಿಪ್ ಡಿಸೈನ್ ಇತ್ಯಾದಿ ಸರ್ವಿಸ್ ಕಡೆ ಗಮನ ಹರಿಸಿದರೆ ಹೆಚ್ಚು ಉದ್ಯೋಗ ಸೃಷ್ಟಿಸಬಹುದು" ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.
ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತದ ಸೇವಾ ವಲಯದ ರಫ್ತು 150 ಬಿಲಿಯನ್ ಡಾಲರ್ (ಸುಮಾರು 12.37 ಲಕ್ಷ ಕೋಟಿ ರೂಪಾಯಿ) ಇತ್ತು. ಆಮದಿಗಿಂತ ರಫ್ತು ಬಹಳ ಹೆಚ್ಚೇ ಇದೆ. ಇನ್ನು, ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಭಾರತದಿಂದ 232 ಬಿಲಿಯನ್ ಡಾಲರ್ (19 ಲಕ್ಷ ಕೋಟಿ ರೂ) ರಫ್ತು ಆಯಿತಾದರೂ ಆಮದು ಮತ್ತು ರಫ್ತಿನ ನಡುವಿನ ಅಂತರ ಬರೋಬ್ಬರಿ 148 ಬಿಲಿಯನ್ ಡಾಲರ್ (12 ಲಕ್ಷ ಕೋಟಿ ರೂಪಾಯಿ) ಇದೆ. ಈ ಹಿನ್ನೆಲೆಯಲ್ಲಿ ರಘುರಾಮ್ ರಾಜನ್ ಅವರ ಸಲಹೆ ಮಹತ್ವ ಎನಿಸಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications