ಉತ್ತರ ಭಾರತದಲ್ಲಿ ಶೀತ ಗಾಳಿಯಿಂದಾಗಿ ಹಲವಾರು ರಾಜ್ಯಗಳನ್ನು ದಟ್ಟವಾದ ಮಂಜು ಆವರಿಸಿದೆ. ಈ ಕಾರಣದಿಂದಾಗಿ ರೈಲುಗಳು ಕೂಡಾ ವಿಳಂಬವಾಗುತ್ತಿದೆ. ಈ ನಡುವೆ ರೈಲು ವಿಳಂಬವಾದ ಕಾರಣಕ್ಕಾಗಿ ಮೊರಾದಾಬಾದ್ ವಿಭಾಗದಲ್ಲಿ ಡಿಸೆಂಬರ್ 2023 ರಲ್ಲಿ 20,000 ಕಾಯ್ದಿರಿಸಿದ ಟಿಕೆಟ್‌ಗಳನ್ನು ರದ್ದು ಮಾಡಲಾಗಿದೆ.
ಮೊರಾದಾಬಾದ್ ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ (ಡಿಆರ್‌ಎಂ) ರಾಜ್ ಕುಮಾರ್ ಸಿಂಗ್ ಪ್ರಕಾರ, ರೈಲು ವಿಳಂಬವಾಗಿರುವುದು ಭಾರೀ ನಷ್ಟಕ್ಕೆ ಕಾರಣವಾಗಿದೆ. ರೈಲು ವಿಳಂಬವಾದ ಕಾರಣ ಪ್ರಯಾಣಿಕರು ಟಿಕೆಟ್ ರದ್ದು ಮಾಡಿದ್ದು, ಇದರಿಂದಾಗಿ 1.22 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.

ಎಲ್ಲಿ ಎಷ್ಟು ರೈಲು ಟಿಕೆಟ್ ರದ್ದು?
ಈ ಬಗ್ಗೆ ಇಂಡಿಯಾ ಟುಡೇಗೆ ಪ್ರತಿಕ್ರಿಯೆ ನೀಡಿದ ರಾಜ್ ಕುಮಾರ್ ಸಿಂಗ್, ಒಟ್ಟು ರದ್ದಾದ ಕಾಯ್ದಿರಿಸಲಾದ ಟಿಕೆಟ್‌ಗಳಲ್ಲಿ 4,230 ಬರೇಲಿಯಲ್ಲಿ ರದ್ದುಗೊಳಿಸಲಾಗಿದೆ. 3,239 ಟಿಕೆಟ್‌ಗಳನ್ನು ಮೊರಾದಾಬಾದ್‌ನಲ್ಲಿ ರದ್ದುಗೊಳಿಸಲಾಗಿದೆ. 3917 ಟಿಕೆಟ್‌ಗಳನ್ನು ಹರಿದ್ವಾರದಲ್ಲಿ ರದ್ದುಗೊಳಿಸಲಾಗಿದೆ. ಡೆಹ್ರಾಡೂನ್‌ನಲ್ಲಿ 2,448 ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ.
"ಮಂಜು ಆವರಿಸಿದ ಕಾರಣ ಕಡಿಮೆ ಪ್ರಯಾಣಿಕರನ್ನು ಹೊಂದಿರುವ ರೈಲುಗಳನ್ನು ನಾವು ರದ್ದುಗೊಳಿಸಿದ್ದೇವೆ. ಆಗಲೂ, ಡಿಸೆಂಬರ್ 2023 ರಲ್ಲಿ ಮೊರಾದಾಬಾದ್ ವಿಭಾಗದಲ್ಲಿ 20,000 ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ," ಎಂದು ಸಿಂಗ್ ಮಾಹಿತಿ ನೀಡಿದರು.
"ಮಾರ್ಚ್‌ವರೆಗೆ 42 ರೈಲುಗಳನ್ನು ರದ್ದುಗೊಳಿಸಲಾಗಿದೆ. ನಾವು ಜನರಿಗೆ 1.22 ಕೋಟಿ ರೂಪಾಯಿಗಳನ್ನು ಮರುಪಾವತಿಸಿದ್ದೇವೆ," ಎಂದು ಹೇಳಿದರು. ಗಮನಾರ್ಹವಾಗಿ, ಉತ್ತರ ಭಾರತದಲ್ಲಿ ದಟ್ಟವಾದ ಮಂಜು ಮತ್ತು ಶೀತ ಅಲೆ ಕಾಣಿಸಿಕೊಂಡಿದೆ.
ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ, ಜನವರಿ 6 ರವರೆಗೆ ರಾತ್ರಿ ಮತ್ತು ಬೆಳಿಗ್ಗೆ ಹಲವಾರು ಗಂಟೆಗಳ ಕಾಲ ದಟ್ಟವಾದ ಮಂಜು ಕಾಣಿಸಿಕೊಂಡಿದೆ.
ಯಾವಾಗ ರಿಫಂಡ್ ಪಡೆಯಲು ಸಾಧ್ಯ?
ನೀವು ಪ್ರಯಾಣ ಮಾಡುವ ರೈಲು 3 ಗಂಟೆ ಅಥವಾ ಅದಕ್ಕಿಂತ ಅಧಿಕ ತಡವಾಗಿ ಬರುವುದಾದರೆ ನೀವು ಆ ಟಿಕೆಟ್ ಅನ್ನು ರದ್ದು ಮಾಡಿ ರಿಫಂಡ್ ಪಡೆಯಲು ಸಾಧ್ಯವಾಗಲಿದೆ. ರೈಲ್ವೆ ರೆಗ್ಯೂಲೇಷನ್ ಪ್ರಕಾರ 3 ಗಂಟೆ ಅಥವಾ ಅದಕ್ಕಿಂತ ಅಧಿಕ ವಿಳಂಬವಾದ ಕಾರಣದಿಂದಾಗಿ ರೈಲ್ವೆ ಟಿಕೆಟ್ ಅನ್ನು ಪ್ರಯಾಣಿಕರು ರದ್ದು ಮಾಡಿದರೆ, ಸಂಪೂರ್ಣ ಮೊತ್ತದ ರಿಫಂಡ್ ಅನ್ನು ಪಡೆಯಲು ಸಾಧ್ಯವಾಗಲಿದೆ.
ಹಾಗೆಯೇ ಯಾವುದೇ ಶುಲ್ಕವನ್ನು ಕೂಡಾ ವಿಧಿಸಲಾಗುವುದಿಲ್ಲ. ನೀವು ರಿಸರ್ವೇಷನ್ ಕೌಂಟರ್‌ಗೆ ಹೋಗಿ ಟಿಕೆಟ್ ಮಾಡಿದ್ದರೆ ಅಲ್ಲಿಯೇ ಹೋಗಿ ರದ್ದು ಮಾಡಿಸಿ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್ ಮಾಡಿದ್ದರೆ ಅಲ್ಲಿಯೇ ಟಿಕೆಟ್ ರದ್ದು ಮಾಡಬಹುದು. ಇನ್ನು ರೈಲು ರದ್ದಾದರೂ ಕೂಡಾ ನೀವು ರಿಫಂಡ್ ಪಡೆಯಲು ಅರ್ಹರಾಗಿರುತ್ತೀರಿ.
ಟಿಡಿಆರ್ ಫೈಲ್ ಮಾಡಿ ರಿಫಂಡ್ ಪಡೆಯುದು ಹೇಗೆ?
ಹಂತ 1: ಐಆರ್‌ಸಿಟಿಸಿ ಖಾತೆಗೆ ಸೈನ್ ಇನ್ ಆಗಬೇಕು
ಹಂತ 2: ಲಾಗಿನ್ ಆದ ಬಳಿಕ MY ACCOUNT ಆಯ್ಕೆ ಮಾಡಿ
ಹಂತ 3: My Transactionಗೆ ಹೋಗಿ, ಟಿಡಿಆರ್ ಫೈಲಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ನಿಮ್ಮ ಟಿಕೆಟ್ ಅನ್ನು ಲೀಸ್ಟ್‌ನಲ್ಲಿ ಆಯ್ಕೆ ಮಾಡಿ ಟಿಡಿಆರ್ ಸಲ್ಲಿಸಿ
ಹಂತ 5: ಟಿಡಿಆರ್ ಸಲ್ಲಿಸಿದ 5ರಿಂದ 7 ದಿನದಲ್ಲಿ ರೈಲ್ವೆ ನಿಮ್ಮ ಕ್ಲೈಮ್ ಅನ್ನು ಪರಿಷ್ಕರಿಸಿ ರಿಫಂಡ್ ಮೊತ್ತವನ್ನು ನಿಮ್ಮ ಖಾತೆಗೆ ಜಮೆ ಮಾಡಲಿದೆ.
ಆನ್‌ಲೈನ್‌ನಲ್ಲಿ ಟಿಡಿಆರ್ ಸಬ್‌ಮಿಟ್ ಮಾಡಿ
ನೀವು ರೈಲು 3 ಗಂಟೆ ಅಥವಾ ಅದಕ್ಕಿಂತ ಅಧಿಕ ತಡವಾಗಿ ಬರುವ ಕಾರಣದಿಂದಾಗಿ ಟಿಕೆಟ್ ಅನ್ನು ರದ್ದು ಮಾಡಿದರೆ ಅಥವಾ ಭಾರತೀಯ ರೈಲ್ವೆಯೇ ಬೇರೆ ಬೇರೆ ಕಾರಣದಿಂದಾಗಿ ರೈಲು ರದ್ದು ಮಾಡಿದರೆ ನೀವು ರಿಫಂಡ್ ಅನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತೀರಿ. ಆದರೆ ಅದಕ್ಕಾಗಿ ಟಿಡಿಆರ್ ಫೈಲ್ ಮಾಡಬೇಕಾಗುತ್ತದೆ. ನೀವು ಟಿಡಿಆರ್ ಅನ್ನು ಸಲ್ಲಿಸಿದ ಬಳಿಕ ಅದನ್ನು ಪರಿಷ್ಕರಿಸಿ ಐಆರ್‌ಸಿಟಿಸಿ ರಿಫಂಡ್ ಮಾಡಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications