ಷೇರುಪೇಟೆ ಬಿಗ್ ಬುಲ್ ರಾಕೇಶ್ ಜುಂಜುನ್ ವಾಲ ನಿಧನರಾದ ಬಳಿಕ ಅವರ ಷೇರುಗಳು ಹಾಗೂ ಕುಟುಂಬಸ್ಥರ ಆಸ್ತಿ ಮೌಲ್ಯದ ಲೆಕ್ಕಾಚಾರ ಶುರುವಾಗಿದೆ. ಸದ್ಯಕ್ಕೆ ಸಿಕ್ಕಿರುವ ಲೆಕ್ಕಾಚಾರದಂತೆ ರೇಖಾ ಬಳಿ ಸುಮಾರು 19 ಷೇರುಗಳಿದ್ದು ಇವುಗಳ ಮೌಲ್ಯ ಸುಮಾರು 9,8000 ಕೋಟಿ ರು ಗೂ ಅಧಿಕ ಎಂಬ ಮಾಹಿತಿ ಬಂದಿದೆ.
ಅತಿ ಹೆಚ್ಚು ಸ್ಟಾರ್ ಹೆಲ್ತ್ ಹಾಗೂ ಅಲೈಡ್ ಇನ್ಶುರೆನ್ಸ್ ಕಂಪನಿ (1,264 ಕೋಟಿ ರು), ಮೆಟ್ರೋ ಬ್ರ್ಯಾಂಡ್ಸ್ (3,310 ಕೋಟಿ ರು), ಟೈಟನ್ ಕಂಪನಿ (2,379 ಕೋಟಿ ರು) ಕಂಪನಿಗಳ ಮೌಲ್ಯದ ಷೇರು ಹೊಂದಿದ್ದಾರೆ.
ಶೇಕಡಾವಾರು ಲೆಕ್ಕಾಚಾರದಂತೆ ಮೆಟ್ರೋ ಬ್ರ್ಯಾಂಡ್ಸ್ ನಲ್ಲಿ ಶೇ 14.43ರಷ್ಟು, ಟೈಟನ್ ಕಂಪನಿಯಲ್ಲಿ ಶೇ 1.07ರಷ್ಟು ಹೋಲ್ಡಿಂಗ್ ಹೊಂದಿದ್ದಾರೆ. ಇದಲ್ಲದೆ ಸ್ಟಾರ್ ಹೆಲ್ತ್ ಹಾಗೂ ಅಲೈಡ್ ಇನ್ಸುರೆನ್ಸ್ ಕಂಪನಿಯಲ್ಲಿ ಶೇ 3.10ರಷ್ಟು ಪಾಲು ಹೊಂದಿದ್ದಾರೆ.

12 ಸ್ಟಾಕ್ ಗಳಿಂದಲೇ 10,000 ಕೋಟಿ ರು ಗೂ ಅಧಿಕ ಮೌಲ್ಯ ಹೊಂದಿದ್ದಾರೆ.
* ಮೆಟ್ರೋ ಬ್ರ್ಯಾಂಡ್ಸ್: 3,310 ಕೋಟಿ ರು
* ಟೈಟನ್ ಕಂಪನಿ: 2,379 ಕೋಟಿ ರು
* ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಸುರೆನ್ಸ್ ಕಂಪನಿ: 1,264 ಕೋಟಿ ರು
* ಕ್ರಿಸಿಲ್: 613 ಖೊಟಿ ರು
* ಎನ್ ಸಿಸಿ: 515 ಕೋಟಿ ರು
* ದಿ ಇಂಡಿಯನ್ ಹೋಟೆಲ್ಸ್: 393 ಕೋಟಿ ರು
* ಟಾಟಾ ಕಮ್ಯೂನಿಕೇಷನ್ಸ್: 333 ಕೋಟಿ ರು
* ದಿ ಫೆಡರಲ್ ಬ್ಯಾಂಕ್: 231 ಕೋಟಿ ರು
* ಜುಬಿಲೆಂಟ್ ಫಾರ್ಮೊವಾ: 173 ಕೋಟಿ ರು
* ವಿಎ ಟೆಕ್ ವಾಬಾಗ್: 125 ಕೋಟಿ ರು
* Rallis ಇಂಡಿಯಾ: 117 ಕೋಟಿ ರು
* ಅಪ್ಟೆಕ್: 106 ಕೋಟಿ ರು
ರಾಕೇಶ್ -ರೇಖಾ ಜೋಡಿ
1987ರಲ್ಲಿ ರೇಖಾರನ್ನು ರಾಕೇಶ್ ವರಿಸಿದರು. 2004ರಲ್ಲಿ ಮಕ್ಕಳು ಪಡೆದುಕೊಂಡರು. ತಮ್ಮ 50ನೇ ವರ್ಷದ ಹುಟ್ಟುಹಬ್ಬದಂದು ಮಾತನಾಡಿದ್ದ ರಾಕೇಶ್, ತಮ್ಮ ವೃತ್ತಿ ಬದುಕಿನ ಏಳಿಗೆಗೆ ಕುಟುಂಬದ ಸಹಕಾರವೇ ಕಾರಣ ಎಂದಿದ್ದರು. ''ನನ್ನ ಬದುಕಿನಲ್ಲಿ ನನ್ನ ಪತ್ನಿ ರೇಖಾರಷ್ಟು ಯಾರನ್ನು ಪ್ರೀತಿಸಿಲ್ಲ, ನನ್ನ ಮಕ್ಕಳೇ ನನ್ನ ಬದುಕಿಗೆ ಆಧಾರ'' ಎಂದಿದ್ದರು.
ಷೇರುಪೇಟೆ ದಿಗ್ಗಜ ರಾಕೇಶ್ ತಮ್ಮ 62ನೇ ವಯಸ್ಸಿನಲ್ಲಿ ಭಾನುವಾರದಂದು ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಮೃತಪಟ್ಟರು. 1985ರಲ್ಲಿ 5000 ರು ನೊಂದಿಗೆ ಷೇರುಪೇಟೆಯಲ್ಲಿ ವ್ಯವಹಾರ ಆರಂಭಿಸಿದ ರಾಕೇಶ್ ಟಾಟಾ ಟೀ 11,000 ಕೋಟಿ ಹಾಗೂ ಟೈಟನ್ 7,000 ಕೋಟಿ ರು ಮೌಲ್ಯ ಶೇರುಗಳನ್ನು ಹೊಂದಿದ್ದಲ್ಲದೆ 5.5 ಬಿಲಿಯನ್ ಮೌಲ್ಯದ ಆಸ್ತಿ ಗಳಿಸಿದರು.


Click it and Unblock the Notifications