SGBs: ಸವರನ್ ಗೋಲ್ಡ್ ಬಾಂಡ್ ಅಕಾಲಿಕ ವಿತ್‌ಡ್ರಾ ದಿನಾಂಕ ಘೋಷಣೆ, ಇಲ್ಲಿದೆ ವಿವರ

ಸವರನ್ ಗೋಲ್ಡ್ ಬಾಂಡ್‌ಗಳನ್ನು (ಎಸ್‌ಜಿಬಿ) ಎಂಟು ವರ್ಷಗಳ ಅವಧಿಗೆ ನೀಡಲಾಗುವ ಬಾಂಡ್ ಆಗಿದೆ. ಐದು ವರ್ಷಗಳ ನಂತರ ಈ ಗೋಲ್ಡ್ ಬಾಂಡ್‌ಗಳನ್ನುಅಕಾಲಿಕವಾಗಿ ವಿತ್‌ಡ್ರಾ ಮಾಡಿಕೊಳ್ಳಬಹುದಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಅಕಾಲಿಕ ವಿತ್‌ಡ್ರಾಗೆ ಅವಕಾಶವನ್ನು ನೀಡಲಾಗುತ್ತದೆ. ಈ ದಿನಾಂಕವನ್ನು ಆರ್‌ಬಿಐ ಘೋಷಣೆ ಮಾಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಕ್ಟೋಬರ್ 01, 2023 ರಿಂದ ಮಾರ್ಚ್ 31, 2024 ರ ಅವಧಿಯಲ್ಲಿ ಎಸ್‌ಜಿಬಿ ಅಕಾಲಿಕ ವಿತ್‌ಡ್ರಾ ಮಾಡುವ ಅವಕಾಶವಿರುವ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ನಿಗದಿತ ರಜೆ ಸಂದರ್ಭದಲ್ಲಿ ದಿನಾಂಕಗಳು ಬದಲಾವಣೆ ಆಗಬಹುದು ಎಂಬುವುದು ನಾವು ತಿಳಿದಿರಬೇಕಾಗುತ್ತದೆ. ಹೂಡಿಕೆದಾರರು ಎಸ್‌ಬಿಐಯ ವಿತ್‌ಡ್ರಾಗಾಗಿ ವಿನಂತಿಗಳನ್ನು ಸಲ್ಲಿಸುವ ಅವಧಿಯನ್ನು ಗಮನಿಸಲು ಆರ್‌ಬಿಐ ಹೇಳಿದೆ.

 ಗೋಲ್ಡ್ ಬಾಂಡ್ ಅಕಾಲಿಕ ವಿತ್‌ಡ್ರಾ ದಿನಾಂಕ ಘೋಷಣೆ, ಇಲ್ಲಿದೆ ವಿವರ

ಅಕ್ಟೋಬರ್ 2023 - ಮಾರ್ಚ್ 2024 ಅವಧಿಗೆ ಎಸ್‌ಜಿಬಿ ಅಕಾಲಿಕ ವಿತ್‌ಡ್ರಾ ದಿನಾಂಕಗಳು

1. 2016-17 ಮೊದಲ ಸಿರೀಸ್: ಜನವರಿ, 5- ಜನವರಿ 25, 2024
2. 2016-17 ಎರಡನೇ ಸಿರೀಸ್: ಫೆಬ್ರವರಿ 29-ಮಾರ್ಚ್ 20, 2024
3. 2016-17 ಮೂರನೇ ಸಿರೀಸ್: ಅಕ್ಟೋಬರ್ 17- ಮಾರ್ಚ್ 6, 2024
4. 2016-17 ನಾಲ್ಕನೇ ಸಿರೀಸ್: ಫೆಬ್ರವರಿ 17- ಮಾರ್ಚ್ 6, 2024
5. 2017-18 ಮೊದಲನೇ ಸಿರೀಸ್: ಅಕ್ಟೋಬರ್ 12- ಅಕ್ಟೋಬರ್ 31, 2023
6. 2017-18 ಎರಡನೇ ಸಿರೀಸ್: ಡಿಸೆಂಬರ್ 28- ಜನವರಿ 15, 2024
7. 2017-18 ಮೂರನೇ ಸಿರೀಸ್: ಸೆಪ್ಟೆಂಬರ್ 16- ಅಕ್ಟೋಬರ್ 6, 2023
8. 2017-18 ನಾಲ್ಕನೇ ಸಿರೀಸ್: ಸೆಪ್ಟೆಂಬರ್ 23- ಅಕ್ಟೋಬರ್ 13, 2023
9. 2017-18 ಐದನೇ ಸಿರೀಸ್: ಸೆಪ್ಟೆಂಬರ್ 30- ಅಕ್ಟೋಬರ್ 20, 2023
10. 2017-18 ಆರನೇ ಸಿರೀಸ್: ಅಕ್ಟೋಬರ್ 6- ಅಕ್ಟೋಬರ್ 27, 2023
11. 2017-18 ಏಳನೇ ಸಿರೀಸ್: ಅಕ್ಟೋಬರ್ 13- ನವೆಂಬರ್ 3, 2023
12. 2017-18 ಎಂಟನೇ ಸಿರೀಸ್: ಅಕ್ಟೋಬರ್ 20- ನವೆಂಬರ್ 10, 2023
13. 2017-18 ಒಂಬತ್ತನೇ ಸಿರೀಸ್: ಅಕ್ಟೋಬರ್ 27- ನವೆಂಬರ್ 15, 2023
14. 2017-18 ಹತ್ತನೇ ಸಿರೀಸ್: ನವೆಂಬರ್ 4- ನವೆಂಬರ್ 24, 2023
15. 2017-18 ಹನ್ನೊಂದನೇ ಸಿರೀಸ್: ನವೆಂಬರ್ 10- ಡಿಸೆಂಬರ್ 1, 2023
16. 2017-18 ಹನ್ನೆರಡನೇ ಸಿರೀಸ್: ನವೆಂಬರ್ 18- ಡಿಸೆಂಬರ್ 8, 2023
17. 2017-18 ಹದಿಮೂರನೇ ಸಿರೀಸ್: ನವೆಂಬರ್ 24- ಡಿಸೆಂಬರ್ 16, 2023
18. 2017-18 ಹದಿನಾಲ್ಕನೇ ಸಿರೀಸ್: ಡಿಸೆಂಬರ್ 1- ಡಿಸೆಂಬರ್ 22, 2023
19. 2018-19 ಮೊದಲ ಸಿರೀಸ್: ಅಕ್ಟೋಬರ್ 4- ಅಕ್ಟೋಬರ್ 25, 2023
20. 2018-19 ಎರಡನೇ ಸಿರೀಸ್: ಸೆಪ್ಟೆಂಬರ್ 23- ಅಕ್ಟೋಬರ್ 13, 2023
21. 2018-19 ಮೂರನೇ ಸಿರೀಸ್: ಅಕ್ಟೋಬರ್ 12- ಅಕ್ಟೋಬರ್ 31, 2023
22. 2018-19 ನಾಲ್ಕನೇ ಸಿರೀಸ್: ಡಿಸೆಂಬರ್ 1- ಡಿಸೆಂಬರ್ 22, 2023
23. 2018-19 ಐದನೇ ಸಿರೀಸ್: ಡಿಸೆಂಬರ್ 22- ಜನವರಿ 12, 2024
24. 2018-19 ಆರನೇ ಸಿರೀಸ್: ಜನವರಿ 12- ಫೆಬ್ರವರಿ 2, 2024

ಸವರನ್ ಗೋಲ್ಡ್ ಬಾಂಡ್ ಎಂದರೇನು?

ಭೌತಿಕ ಚಿನ್ನದ ಹೂಡಿಕೆಗೆ ಎಸ್‌ಜಿಬಿಗಳು ಪರಿಪೂರ್ಣ ಪರ್ಯಾಯವಾಗಿದೆ. ಈ ಬಾಂಡ್‌ಗಳೊಂದಿಗೆ ನೀವು ಪ್ರತಿ ವರ್ಷವೂ ಬಡ್ಡಿಯನ್ನು ಗಳಿಸಬಹುದು. ಬಾಂಡ್‌ನಲ್ಲಿ ಕನಿಷ್ಠ ಹೂಡಿಕೆಯು ಒಂದು ಗ್ರಾಂ ಆಗಿದ್ದು, ಪ್ರತಿ ಹಣಕಾಸು ವರ್ಷದಲ್ಲಿ ಒಬ್ಬರು ಗರಿಷ್ಠ ಮಿತಿ 4 ಕೆಜಿ ಪಡೆಯಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+