ರಾಜ್ಯ ಸರ್ಕಾರಗಳ ಆಪತ್ತಿಗೆ 'ನೆಂಟ'ನಾದ ಆರ್ ಬಿಐ

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸುವ ಓವರ್ ಡ್ರಾಫ್ಟ್ ವಿಚಾರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ನಿಯಮಗಳನ್ನು ಸಡಿಲಿಸಿದೆ. ತಕ್ಷಣದಿಂದಲೇ ಈ ಕ್ರಮ ಜಾರಿಗೆ ಬರಲಿದ್ದು, ಸೆಪ್ಟೆಂಬರ್ 30, 2020ರ ತನಕ ಇದು ಅನ್ವಯ ಆಗಲಿದೆ. ಅಂದ ಹಾಗೆ ಮೂರು ವಾರಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ರಾಜ್ಯಗಳ ತೆರಿಗೆ ಆದಾಯಕ್ಕೆ ಪೆಟ್ಟು ಬಿದ್ದಿದೆ. ಹಲವು ರಾಜ್ಯಗಳಿಗೆ ವೇತನ ಪಾವತಿಯೂ ಕಷ್ಟವಾಗಿದೆ.

ಆರ್ ಬಿಐನಿಂದ ಈ ಹಿಂದೆ ಓವರ್ ಡ್ರಾಫ್ಟ್ ಪಡೆದರೆ ಅದಕ್ಕೆ 14 ದಿನಗಳ ವರ್ಕಿಂಗ್ ಡೇಸ್ ಸಮಯ ಇತ್ತು. ಅದನ್ನು ಈಗ 21 ದಿನಕ್ಕೆ ಏರಿಸಲಾಗಿದೆ. ಇನ್ನು ಒಂದು ತ್ರೈಮಾಸಿಕದಲ್ಲಿ 36 ವರ್ಕಿಂಗ್ ಡೇಸ್ ಓವರ್ ಡ್ರಾಫ್ಟ್ ಇರಬಹುದಿತ್ತು. ಅದನ್ನು ಈಗ 50 ದಿನಕ್ಕೆ ಏರಿಕೆ ಮಾಡಲಾಗಿದೆ.

ರಾಜ್ಯ ಸರ್ಕಾರಗಳ ಆಪತ್ತಿಗೆ 'ನೆಂಟ'ನಾದ ಆರ್ ಬಿಐ

ಇನ್ನುಳಿದಂತೆ ಇರುವ ಯಾವುದೇ ನಿಯಮಾವಳಿಯಲ್ಲಿ ಬದಲಾವಣೆ ಮಾಡಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಓವರ್ ಡ್ರಾಫ್ಟ್ ಅಂದರೆ ಅಲ್ಪಾವಧಿಗೆ ಪಡೆಯುವ ಸಾಲದ ವ್ಯವಸ್ಥೆ. ಅದನ್ನು ಬ್ಯಾಂಕ್ ಗಳು ವರ್ತಕರು, ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಕೂಡ ಒದಗಿಸುತ್ತದೆ. ಕೊರೊನಾ ವ್ಯಾಪಿಸದಿರಲಿ ಎಂಬ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಆರ್ಥಿಕ ಉತ್ತೇಜನ ಕ್ರಮಗಳನ್ನು ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+