ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಲು ನಿರ್ಧಾರ ಮಾಡಿದೆ. ಹಾಗೆಯೇ 2000 ರೂಪಾಯಿ ನೋಟನ್ನು ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆದೇಶಿಸಿದೆ. ಆದರೆ ಈ ಬ್ಯಾಂಕ್ ನೋಟುಗಳ ಕಾನೂನುಬದ್ಧ ಟೆಂಡರ್ ಮುಂದುವರಿಯಲಿದೆ ಎಂದು ಸ್ಪಷ್ಟಣೆಯನ್ನು ಕೂಡಾ ನೀಡಿದೆ.
ಈ ನಡುವೆ ಹಲವಾರು ಊಹಾಪೋಹಗಳು ದೇಶದಲ್ಲಿ ಹರಡುತ್ತಿದೆ. 2000 ರೂಪಾಯಿ ನೋಟು ಸಂಪೂರ್ಣವಾಗಿ ಮೌಲ್ಯವನ್ನೇ ಕಳೆದುಕೊಂಡಿದೆ ಎಂದು ಕೆಲವು ನೆಟ್ಟಿಗರು ಹೇಳಿದರೆ, ಇನ್ನು ಕೆಲವರು 2000 ರೂಪಾಯಿಯ ನೋಟು ಹೋದ ಬಳಿಕ ಆರ್‌ಬಿಐ ಮತ್ತೆ 1000 ರೂಪಾಯಿಯ ನೋಟನ್ನು ಜಾರಿ ಮಾಡುತ್ತದೆ ಎಂದು ಹೇಳುತ್ತಿದ್ದಾರೆ.

ಈ ಎಲ್ಲ ಊಹಾಪೋಹಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ತೆರೆ ಎಳೆದಿದ್ದಾರೆ. 2000 ರೂಪಾಯಿ ನೋಟುಗಳನ್ನು ಹಿಂಪಡೆದ ಬಳಿಕ ಮತ್ತೆ 1000 ರೂಪಾಯಿಯ ನೋಟುಗಳನ್ನು ಜಾರಿ ಮಾಡಲಾಗುತ್ತದೆ ಎಂಬ ವರದಿಯನ್ನು ತಳ್ಳಿ ಹಾಕಿರುವ ಆರ್‌ಬಿಐ ಗವರ್ನರ್ ಈ ವರದಿಯು ವದಂತಿಯಾಗಿದೆ ಎಂದು ತಿಳಿಸಿದ್ದಾರೆ.
ಮತ್ತೆ 1000 ರೂಪಾಯಿಯ ನೋಟುಗಳನ್ನು ಜಾರಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಆರ್‌ಬಿಐ ಗವರ್ನರ್, "ಇದು ವದಂತಿಯಾಗಿದೆ. ಈವರೆಗೆ ಅಂತಹ ವಿಚಾರವನ್ನು ನಾವು ಹೊಂದಿಲ್ಲ," ಎಂದು ತಿಳಿಸಿದ್ದಾರೆ. ನವೆಂಬರ್ 2016 ರಲ್ಲಿ 2,000 ರೂಪಾಯಿಯ ಬ್ಯಾಂಕ್ ನೋಟನ್ನು ಪರಿಚಯಿಸಲಾಗಿದೆ.
ಆರ್‌ಬಿಐ ಗವರ್ನರ್ ನೀಡಿದ ಪ್ರಮುಖ ಸ್ಪಷ್ಟಣೆಗಳು
"ಇದು ರಿಸರ್ವ್ ಬ್ಯಾಂಕಿನ ಕರೆನ್ಸಿ ನಿರ್ವಹಣಾ ಕಾರ್ಯಾಚರಣೆಗಳ ಒಂದು ಭಾಗವಾಗಿದೆ ಎಂದು ನಾನು ಸ್ಪಷ್ಟಪಡಿಸುತ್ತೇನೆ ಮತ್ತು ಮತ್ತೊಮ್ಮೆ ಒತ್ತಿ ಹೇಳುತ್ತೇನೆ. ದೀರ್ಘಕಾಲದವರೆಗೆ ರಿಸರ್ವ್ ಬ್ಯಾಂಕ್ ಕ್ಲೀನ್ ನೋಟ್ ನೀತಿಯನ್ನು ಅನುಸರಿಸುತ್ತಿದೆ. ಕಾಲಕಾಲಕ್ಕೆ ಆರ್‌ಬಿಐ ನಿರ್ದಿಷ್ಟ ನೋಟುಗಳನ್ನು ವಾಪಾಸ್ ಪಡೆಯುತ್ತಿದೆ. ಅದರ ಬದಲಾಗಿ ಹೊಸ ನೋಟುಗಳನ್ನು ನೀಡುತ್ತದೆ," ಎಂದು ಹೇಳಿದ ಗವರ್ನರ್, "ನಾವು 2000 ರೂಪಾಯಿಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುತ್ತಿದ್ದೇವೆ. ಆದರೆ ಅವುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ," ಎಂದು ತಿಳಿಸಿದ್ದಾರೆ.
ಚಲಾವಣೆಯಿಂದ ಹಿಂಪಡೆದಿರುವ 2,000 ರೂಪಾಯಿ ನೋಟುಗಳ ವಿನಿಮಯಕ್ಕೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆ ಮಾಡುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಹಾಗೆಯೇ ಪ್ರಕ್ರಿಯೆ ಸುಗಮವಾಗಿ ನಡೆಯಲು ಕ್ರಮಕೈಗೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.
ಈ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಿರುವುದರಿಂದ ಗ್ರಾಹಕರು ಭಯಪಡುವ ಅಗತ್ಯವಿಲ್ಲ ಎಂದು ಆರ್‌ಬಿಐ ಗವರ್ನರ್ ಪುನರುಚ್ಚರಿಸಿದ್ದಾರೆ. ಸೆಪ್ಟೆಂಬರ್ 30, 2023 ರೊಳಗೆ 2,000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಲು ಅಥವಾ ಡೆಪಾಸಿಟ್ ಮಾಡಲು ಕೇಂದ್ರೀಯ ಬ್ಯಾಂಕ್ ಜನರಿಗೆ ಸಮಯವಕಾಶ ನೀಡಿದೆ.
ಶುಕ್ರವಾರ, ಆರ್‌ಬಿಐ 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ. ಆದರೆ ಅವುಗಳು ಕಾನೂನುಬದ್ಧವಾಗಿ ಮುಂದುವರಿಯಲಿವೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 30, 2023 ರವರೆಗೆ ಬ್ಯಾಂಕ್‌ಗಳಲ್ಲಿ 2,000 ರೂಪಾಯಿ ನೋಟುಗಳನ್ನು ಬದಲಾಯಿಸಲು ಅಥವಾ ಡೆಪಾಸಿಟ್ ಮಾಡಲು ಆರ್‌ಬಿಐ ಸಾರ್ವಜನಿಕರಿಗೆ ಒತ್ತಾಯಿಸಿದೆ.
"ನಾವು ಸೆಪ್ಟೆಂಬರ್‌ನಲ್ಲಿ ಗಡುವು ನೀಡಿದ್ದೇವೆ ಆದ್ದರಿಂದ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ನಾವು ಈ ಪ್ರಕ್ರಿಯೆಗೆ ಯಾವುದೇ ಗಡುವು ನೀಡದೆ ಮುಕ್ತವಾಗಿ ಬಿಡಲು ಸಾಧ್ಯವಿಲ್ಲ," ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಇನ್ನು 1,000 ಮತ್ತು 500 ರೂಪಾಯಿಯ ನೋಟುಗಳನ್ನು ಬ್ಯಾನ್ ಮಾಡಿದ ಸಂದರ್ಭದಲ್ಲಿ ಶೀಘ್ರವಾಗಿ ಬದಲಾವಣೆ ಮಾಡುವ ನಿಟ್ಟಿನಲ್ಲಿ 2000 ರೂಪಾಯಿಯ ನೋಟನ್ನು ಪರಿಚಯಿಸಲಾಗಿದೆ ಎಂದು ಕೂಡಾ ಈ ಸಂದರ್ಭದಲ್ಲೇ ಆರ್‌ಬಿಐ ಗವರ್ನರ್ ಪುನರುಚ್ಚರಿಸಿದ್ದಾರೆ.
More From GoodReturns

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್‌ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications