For Quick Alerts
ALLOW NOTIFICATIONS  
For Daily Alerts

ರೆಪೋ ದರದಲ್ಲಿ ಯಥಾಸ್ಥಿತಿ ಉಳಿಸಿಕೊಂಡ RBI :5.15% ಮುಂದುವರಿಕೆ

|

ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆರ್ಥಿಕತೆ ಮಂದಗತಿಯ ನಡುವೆ ರೆಪೋ (ಅಲ್ಪವಾದಿ ಬಡ್ಡಿ) ದರ 5.15 ಪರ್ಸೆಂಟ್‌ಗೆ ಯಥಾಸ್ಥಿತಿ ಉಳಿಸಿಕೊಂಡಿದೆ.

ಆರ್ ಬಿಐ ರೆಪೋ ದರ ಬದಲಾವಣೆ ಇಲ್ಲ; 5.15% ಮುಂದುವರಿಕೆಆರ್ ಬಿಐ ರೆಪೋ ದರ ಬದಲಾವಣೆ ಇಲ್ಲ; 5.15% ಮುಂದುವರಿಕೆ

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಬ್ಯಾಂಕ್ 2019-20ನೇ ಸಾಲಿನ ಜಿಡಿಪಿ ಬೆಳವಣಿಗೆಯನ್ನು 5 ಪರ್ಸೆಂಟ್‌ ಉಳಿಸಿಕೊಂಡಿದೆ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಅದನ್ನು 6 ಪರ್ಸೆಂಟ್‌ಗೆ ಏರಿಕೆ ಸಾಧ್ಯತೆ ಎಂದು ಅಂದಾಜಿಸಿದೆ.

ರೆಪೋ ದರದಲ್ಲಿ ಯಥಾಸ್ಥಿತಿ ಉಳಿಸಿಕೊಂಡ RBI :5.15% ಮುಂದುವರಿಕೆ

ಆರು ಸದಸ್ಯರ ಸಮಿತಿಯು ದರಗಳನ್ನು ಯಥಾಸ್ಥಿತಿ ಮುಂದುವರಿಸಲು ಸರ್ವಾನುಮತದಿಂದ ಮತ ಚಲಾಯಿಸಿತು. ಆದರೆ "ಮುಂದಿನ ನೀತಿ ಕ್ರಮಕ್ಕೆ ಸ್ಥಳಾವಕಾಶವಿದೆ" ಎಂದು ಹೇಳಿದರು. ಇದಕ್ಕೂ ಮುನ್ನ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರ್‌ಬಿಐ ಸತತ ಐದು ಕಡಿತದ ನಂತರ ಬಡ್ಡಿದರಗಳನ್ನು ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇದೀಗ ಮತ್ತೊಮ್ಮೆ ರೆಪೋ ದರಗಳನ್ನು ಹಾಗೆಯೇ ಉಳಿಸಿಕೊಂಡಿದೆ.

English summary

RBI Keeps Repo Rate Unchanged

The Reserve Bank of India (RBI) kept the repo rate unchanged at 5.15 per cent amid economic slowdown.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X