ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಾಣುತ್ತಿದೆ. ಈ ಹಣದುಬ್ಬರದ ನಡುವೆ ರೂಪಾಯಿ ಮೌಲ್ಯವು ದಿನ ಕಳೆದಂತೆ ಸಾರ್ವಕಾಲಿಕವಾಗಿ ಇಳಿಯುತ್ತಿದೆ. ಶುಕ್ರವಾರ ಹೊಸ ದಾಖಲೆ ಮಟ್ಟಕ್ಕೆ ಭಾರತೀಯ ಕರೆನ್ಸಿ ಮೌಲ್ಯ ಕುಸಿದಿದೆ. ಈ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಡಾಲರ್‌ಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ರೂಪಾಯಿ ಮೌಲ್ಯವು ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಸರ್ಕಾರಿ ಬ್ಯಾಂಕ್‌ಗಳ ಮೂಲಕ ಡಾಲರ್‌ಗಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ ಎಂದು ಮೂರು ವ್ಯಾಪಾರಿಗಳು ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ರೂಪಾಯಿ ಮೌಲ್ಯವು ನಿರಂತರವಾಗಿ ದಾಖಲೆ ಮಟ್ಟಕ್ಕೆ ಕುಸಿಯುತ್ತಿದೆ. ಗುರುವಾರ ಸಾರ್ವಕಾಲಿಕ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಶುಕ್ರವಾರ ಮತ್ತೆ ಹೊಸ ದಾಖಲೆ ಸೃಷ್ಟಿಸಿದೆ. ಈ ನಡುವೆ ಆರ್‌ಬಿಐ ಡಾಲರ್‌ಗಳನ್ನು ಮಾರಾಟ ಮಾಡಿದೆ ಎಂದು ಇಬ್ಬರು ಸರ್ಕಾರಿ ಬ್ಯಾಂಕ್ ವ್ಯಾಪಾರಿಗಳು ಹೇಳಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಸರ್ಕಾರಿ ಬ್ಯಾಂಕ್‌ಗಳ ಮೂಲಕ ಡಾಲರ್‌ಗಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ ಎಂದು ಮೂವರು ವ್ಯಾಪಾರಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯುವುದನ್ನು ತಡೆಯುವ ನಿಟ್ಟಿನಲ್ಲಿ ಆರ್‌ಬಿಐ ಡಾಲರ್ ಅನ್ನು ಮಾರಾಟ ಮಾಡುವ ಕ್ರಮಕ್ಕೆ ಮುಂದಾಗುತ್ತದೆ.
ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ
ರೂಪಾಯಿ ಶುಕ್ರವಾರ (ಸೆಪ್ಟೆಂಬರ್ 23) ಡಾಲರ್ ಎದುರು 81.0575ಕ್ಕೆ ಕುಸಿದಿದೆ. ಈ ಹಿಂದಿನ ಸೆಷನ್‌ನಲ್ಲಿ ರೂಪಾಯಿ 80.86ಕ್ಕೆ ಸ್ಥಿರವಾಗಿತ್ತು. ಪ್ರಸ್ತುತ ರೂಪಾಯಿ ಪ್ರತಿ ಯುಎಸ್ ಡಾಲರ್‌ಗೆ 81.0575ರಂತೆ ವಹಿವಾಟು ನಡೆಸುತ್ತಿದೆ.
ಇನ್ನು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ಷೇರು ಮಾರುಕಟ್ಟೆಯು ಕೂಡಾ ತಲ್ಲಣಿಸುತ್ತಿದೆ. ಸ್ಟಾಕ್ಸ್‌ಗಳು ಪಾತಾಳಕ್ಕೆ ಇಳಿಯುತ್ತಿದೆ. ಶುಕ್ರವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 149.96 ಅಂಕ ಅಥವಾ ಶೇಕಡ 0.25ರಷ್ಟು ಕುಸಿದು 58969.76 ವಹಿವಾಟು ಆರಂಭಿಸಿದೆ. ಇನ್ನು ನಿಫ್ಟಿ 40.60 ಅಂಕ ಅಥವಾ ಶೇಕಡ 0.23ರಷ್ಟು ಕುಸಿದು 17589.20ಕ್ಕೆ ವಹಿವಾಟಿಗೆ ಇಳಿದಿದೆ. ವಹಿವಾಟಿನ ಆರಂಭದಲ್ಲಿ 1274 ಷೇರುಗಳು ಏರಿಕೆಯಾಗಿದ್ದರೆ, 711 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 121 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.
ಹಣದುಬ್ಬರ ನಡುವೆ ಭಾರತೀಯ ಕರೆನ್ಸಿ ಮೌಲ್ಯ ಕುಗ್ಗುತ್ತಿದೆ. ಈ ಬೆಳವಣಿಗೆ ಕಂಡು ಬರುತ್ತಿದ್ದಂತೆ ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಏರಿಕೆ ಮಾಡಿತ್ತು. ಸಾಮಾನ್ಯವಾಗಿ ಆರ್‌ಬಿಐ ವಿತ್ತೀಯ ನೀತಿಯಲ್ಲಿ ಬದಲಾವಣೆ ಮಾಡಿದರೆ ಅದರ ಪರಿಣಾಮ ಜನರ ಮೇಲ ಬೀಳುತ್ತದೆ. ರೆಪೋ ಹೆಚ್ಚಳವಾದ ಬಳಿಕ ಬ್ಯಾಂಕ್‌ಗಳು ರೆಪೋ ಆಧಾರಿತ ಸಾಲದ ಬಡ್ಡಿದರ ಏರಿಕೆ ಜನರಿಗೆ ಇಎಂಐ ಹೊರೆ ಹೆಚ್ಚಾಗಿದೆ. ಆದರೆ ಫಿಕ್ಸಿಡ್ ಡೆಪಾಸಿಟ್ ಮಾಡಿಕೊಂಡಿರುವವರಿಗೆ ಲಾಭವಾಗಿದೆ.


Click it and Unblock the Notifications