For Quick Alerts
ALLOW NOTIFICATIONS  
For Daily Alerts

RBIನಿಂದ ಬಡ್ಡಿ ದರ ಮತ್ತಷ್ಟು ಇಳಿಕೆ ನಿರೀಕ್ಷೆ; ಡಿಸೆಂಬರ್ 5ರ ಸಭೆಯಲ್ಲಿ ನಿರ್ಧಾರ

|

ಸೆಪ್ಟೆಂಬರ್ ತಿಂಗಳಿಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು 26 ತ್ರೈಮಾಸಿಕದ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬೆಳವಣಿಗೆ ದರದಲ್ಲಿ ಭಾರೀ ಕುಸಿತ ಕಂಡು, 4.5%ಗೆ ಬಂದು ನಿಂತಿದೆ.

ಹೀಗಾಗಿ, ಡಿಸೆಂಬರ್ 5ರಂದು ನಡೆಯಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಭೆಯ ಬಗ್ಗೆ ಕುತೂಹಲ ಹೆಚ್ಚಿದೆ. ಪ್ರಮುಖವಾಗಿ ಬಡ್ಡಿ ದರವನ್ನು ಕಡಿತ ಮಾಡಬಹುದು ಎನ್ನುವ ವ್ಯಾಪಕ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಅಲ್ಲದೇ, ರೀಟೇಲ್ (ಚಿಲ್ಲರೆ) ಸಾಲಗಳ ಬಡ್ಡಿ ದರ ನಿರ್ಧಾರ ಆಗುವ ರೆಪೋ ದರವನ್ನು ಇಳಿಸಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಈಗಿನ ಬಡ್ಡಿ ದರಕ್ಕಿಂತ ಮತ್ತೂ ಕಡಿಮೆಯಾದಲ್ಲಿ ಗೃಹ ಸಾಲ ಪಡೆದುಕೊಂಡಿರುವ ಗ್ರಾಹಕರಿಗೆ ಶೇ. 8ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಅನುಕೂಲ ಆಗಬಹುದು. ಟೈಮ್ಸ್ ಆಫ್ ಇಂಡಿಯಾದ ಸಮೀಕ್ಷೆ ಪ್ರಕಾರ, ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಬಹುದು.

RBIನಿಂದ ಬಡ್ಡಿ ದರ ಮತ್ತಷ್ಟು ಇಳಿಕೆ ನಿರೀಕ್ಷೆ; ಡಿಸೆಂಬರ್ 5 ನಿರ್ಧಾರ

ಇದರೊಂದಿಗೆ ನಿಯಂತ್ರಿತ ಹಣದುಬ್ಬರ (inflation) ಮಟ್ಟ ಮತ್ತು ಸಲ್ಕಿಂಗ್ ಬೆಳವಣಿಗೆಯ ಮಟ್ಟಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ರಿಸರ್ವ್ ಬ್ಯಾಂಕ್, ತನ್ನ ಐದು ಪರಿಷ್ಕರಣೆಗಳಲ್ಲಿ ರೆಪೋ ದರವನ್ನು 1.35% ರಷ್ಟು ಈಗಾಗಲೇ ಕಡಿತಗೊಳಿಸಿದೆ.

ಸದ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಾಹ್ಯ ಮಾನದಂಡ ದರವನ್ನು (ಇಬಿಆರ್) 8.05%ಗೆ ನಿಗದಿಪಡಿಸಿದೆ. ರಿಸರ್ವ್ ಬ್ಯಾಂಕ್ ಮತ್ತೊಮ್ಮೆ 25 ಬಿಪಿಎಸ್ ಇಳಿಸಿದರೆ ನಂತರ ಇಬಿಆರ್ 7.8%ಗೆ ಇಳಿಯುತ್ತದೆ. ಆಗ ಗೃಹ ಸಾಲದ ಮೇಲಿನ ಬಡ್ಡಿ ದರವು 7.95%ರಿಂದ ಪ್ರಾರಂಭವಾಗುತ್ತದೆ.

English summary

RBI May Cut Interest Rate On December 5th

RBI will announce monetary policy on December 5th. There may be cut in interest rate expecting by experts.
Story first published: Wednesday, December 4, 2019, 19:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X