ಭಾರತದ ದೇಶದ ಕೇಂದ್ರ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿತ್ತೀಯ ನೀತಿ ಬಗ್ಗೆ ಚರ್ಚೆ ನಡೆಸಿ, ನಿರ್ಧಾರಗಳನ್ನು ಕೈಗೊಳ್ಳಲಾಗುವ ಮಹತ್ವದ ಸಭೆಯು ಮಂಗಳವಾರ (ಜೂನ್ 6ರಂದು) ಆರಂಭವಾಗಿದೆ. ಮೂರು ದಿನಗಳ ಸಭೆ ಇದಾಗಿದ್ದು, ಜೂನ್ 8ರಂದು ಆರ್‌ಬಿಐನ ಗವರ್ನರ್ ಶಕ್ತಿಕಾಂತ್ ದಾಸ್ ವಿತ್ತೀಯ ನೀತಿಯನ್ನು ಘೋಷಣೆ ಮಾಡಲಿದ್ದಾರೆ.
ಸತತ ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದ್ದ ಆರ್‌ಬಿಐ ಕಳೆದ ಬಾರಿ ಏಪ್ರಿಲ್‌ನಲ್ಲಿ ದರವನ್ನು ಸ್ಥಿರವಾಗಿಸಿದೆ. ಈಗ ಜೂನ್‌ನಲ್ಲಿಯೂ ಕೂಡಾ ರೆಪೋ ದರವನ್ನು ಆರ್‌ಬಿಐ ಸ್ಥಿರವಾಗಿರಿಸುವ ನಿರೀಕ್ಷೆಯಿದೆ. ಪ್ರಸ್ತುತ ರೆಪೋ ದರವು ಶೇಕಡ 6.5 ಆಗಿದೆ. ರಿಟೇಲ್ ಹಣದುಬ್ಬರವು ನಿಯಂತ್ರಣಕ್ಕೆ ಬರುತ್ತಿರುವ ಕಾರಣದಿಂದಾಗಿ ಆರ್‌ಬಿಐ ದರವನ್ನು ಸ್ಥಿರವಾಗಿರಬಹುದು ಎಂಬ ನಿರೀಕ್ಷೆ ತಜ್ಞರಾದ್ದಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ನೇತೃತ್ವದಲ್ಲಿ ಆರು ಮಂದಿಯ ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆಯು ಜೂನ್ 6ರಿಂದ ಜೂನ್ 8ರವರೆಗೆ ನಡೆಯುತ್ತಿದೆ. ನಿರ್ಧಾರಗಳನ್ನು ಜೂನ್ 8ರಂದು ಘೋಷಣೆ ಮಾಡಲಾಗುತ್ತದೆ. 12 ಗಂಟೆಗೆ ಸರಿಯಾಗಿ ಆರ್‌ಬಿಐ ಗವರ್ನರ್ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.
ಆರ್‌ಬಿಐ ಹಣಕಾಸು ನೀತಿ ನಿರ್ಧಾರಗಳನ್ನು ಇಂದು ಲೈವ್ ಆಗಿ ವೀಕ್ಷಿಸುವುದು ಹೇಗೆ
ಯೂಟ್ಯೂಬ್: ಈ ಕೆಳಗಿನ ಲಿಂಕ್‌ನಲ್ಲಿ ನೀವು ಯೂಟ್ಯೂಬ್‌ನಲ್ಲಿ ಆರ್‌ಬಿಐ ಗವರ್ನರ್ ಅವರ ಲೈವ್ ವೀಕ್ಷಿಸಬಹುದು.
https://www.youtube.com/watch?v=E_mXqRBy4V4
ಫೇಸ್‌ಬುಕ್: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಫೇಸ್‌ಬುಕ್ ಪುಟದಲ್ಲಿ ಲೈವ್ ಅನ್ನು ಏಕಕಾಲದಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ.
ಟ್ವಿಟರ್: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ದೇಶಕ್ಕೆ ಮಾಡಿದ ಭಾಷಣವನ್ನು ಸೆಂಟ್ರಲ್ ಬ್ಯಾಂಕ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ @RBI ನಲ್ಲಿಯೂ ಸ್ಟ್ರೀಮ್ ಮಾಡಲಾಗುತ್ತದೆ.
ಇನ್ನು ಗುಡ್‌ರಿಟರ್ನ್ಸ್ ವೆಬ್‌ಸೈಟ್‌ನಲ್ಲಿಯೂ ನೀವು ಆರ್‌ಬಿಐನ ವಿತ್ತೀಯ ನೀತಿಯ ಬಗ್ಗೆ ಅಪ್‌ಡೇಟ್ ಪಡೆದುಕೊಳ್ಳಬಹುದಾಗಿದೆ.
ಮೇ ತಿಂಗಳಿನಿಂದ ಈವರೆಗೆ ರೆಪೋ ದರ ಏರಿಕೆ ಟೈಮ್‌ಲೈನ್
* 4, ಮೇ 2022: ಎಂಪಿಸಿಯ ಅನಿಗದಿತ ಸಭೆಯ ಬಳಿಕ ಆರ್‌ಬಿಐ 40 ಮೂಲಾಂಕ ದರ ಏರಿಕೆ ಮಾಡಿದೆ. ಏಪ್ರಿಲ್‌ವರೆಗೆ ಸತತ 10 ಬಾರಿ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿತ್ತು. ಈ ಪರಿಷ್ಕರಣೆಯ ಬಳಿಕ ಶೇಕಡ 3.35ರಷ್ಟಿದ್ದ ರೆಪೋ ದರ ಶೇಕಡ 4.40ಕ್ಕೆ ಏರಿಕೆಯಾಗಿದೆ.
* 8, ಜೂನ್ 2022: ಮೇ ತಿಂಗಳಲ್ಲಿ ಅನಿಗದಿತ ಸಭೆಯನ್ನು ನಡೆಸಿ ಆರ್‌ಬಿಐ 40 ಬಿಪಿಎಸ್ ರೆಪೋ ದರ ಏರಿಕೆ ಮಾಡಿದ ಬಳಿಕ ಜೂನ್‌ನಲ್ಲಿಯೂ ಮತ್ತೆ ದರ ಹೆಚ್ಚಿಸಿದೆ. ಜೂನ್ ತಿಂಗಳಿನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಿಸಲಾಗಿದ್ದು ದರ ಶೇಕಡ 4.9ಕ್ಕೆ ತಲುಪಿದೆ.
* 5, ಆಗಸ್ಟ್ 2022: ಇದಾದ ಬಳಿಕ ನಂತರ ಆಗಸ್ಟ್‌ನಲ್ಲಿ ಎಂಪಿಸಿ ಸಭೆಯು ನಡೆದಿದೆ. ಈ ಸಭೆಯ ಬಳಿಕ ಆರ್‌ಬಿಐ ರೆಪೋ ದರವನ್ನು 50 ಬಿಪಿಎಸ್ ಹೆಚ್ಚಿಸಿದ್ದು, ದರ ಶೇಕಡ 5.4ಕ್ಕೆ ಏರಿಕೆಯಾಗಿದೆ.
* 30, ಸೆಪ್ಟೆಂಬರ್ 2022: ಸೆಪ್ಟೆಂಬರ್‌ನಲ್ಲಿ ಮತ್ತೆ ರೆಪೋ ದರವನ್ನು ಆರ್‌ಬಿಐ 50 ಬಿಪಿಎಸ್ ಹೆಚ್ಚಿಸಿದ್ದು ದರವು ಶೇಕಡ 5.9ಕ್ಕೆ ತಲುಪಿದೆ.
* 7, ಡಿಸೆಂಬರ್ 2022: ಸತತವಾಗಿ 50 ಮೂಲಾಂಕ ರೆಪೋ ದರ ಏರಿಕೆ ಮಾಡಿದ ಬಳಿಕ ಆರ್‌ಬಿಐ ಡಿಸೆಂಬರ್‌ನಲ್ಲಿ ದರ ಏರಿಕೆ ಕೊಂಚ ಕಡಿಮೆ ಮಾಡಿದೆ. ಡಿಸೆಂಬರ್‌ನಲ್ಲಿ ನಡೆದ ಎಂಪಿಸಿ ಸಭೆಯ ಬಳಿಕ ಆರ್‌ಬಿಐ 35 ಬಿಪಿಎಸ್ ದರ ಹೆಚ್ಚಿಸಿದ್ದು ರೆಪೋ ದರ ಶೇಕಡ 6.25ಕ್ಕೆ ತಲುಪಿದೆ.
* 8, ಫೆಬ್ರವರಿ 2023: ಫೆಬ್ರವರಿಯಲ್ಲಿ ಮತ್ತಷ್ಟು ಕಡಿಮೆ ದರ ಏರಿಕೆಯನ್ನು ಆರ್‌ಬಿಐ ಮಾಡಿದೆ. ಕೇಂದ್ರ ಬ್ಯಾಂಕ್ 25 ಬಿಪಿಎಸ್ ದರ ಹೆಚ್ಚಿಸಿದ್ದು, ರೆಪೋ ದರ ಶೇಕಡ 6.50ಕ್ಕೆ ತಲುಪಿದೆ.
* 6, ಏಪ್ರಿಲ್ 2023: ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿಸಿದ್ದು, ರೆಪೋ ದರ ಶೇಕಡ 6.50ಕ್ಕೆ ಆಗಿದೆ.
* 8, ಜೂನ್ 2023: ಆರ್‌ಬಿಐ ರೆಪೋ ದರವನ್ನು ಮತ್ತೆ ಸ್ಥಿರವಾಗಿಸಿದ್ದು, ರೆಪೋ ದರ ಶೇಕಡ 6.50ಕ್ಕೆ ಆಗಿದೆ.


Click it and Unblock the Notifications