ಮುಂಬೈ, ಅ. 18: ಈಗ ವಕ್ಕರಿಸಿರುವ ಹಣದುಬ್ಬರ ಅಷ್ಟು ಸುಲಭಕ್ಕೆ ಕೆಳಗಿಳಿಯುವುದು ಅನುಮಾನ. ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ ಸೋಮವಾರ ಬಿಡುಗಡೆ ಮಾಡಿದ ಆರ್ಥಿಕ ಪರಿಸ್ಥಿತಿಯ ವರದಿಯಲ್ಲಿ ಹಣದುಬ್ಬರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಣದುಬ್ಬರ ವಿರುದ್ಧದ ಹೋರಾಟ ಬಹಳ ಕ್ಲಿಷ್ಟಕರ ಮತ್ತು ಸುದೀರ್ಘದ್ದಾಗಿರುತ್ತದೆ ಎಂದು ಈ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
'ಆರ್ಥಿಕತೆಯ ಪರಿಸ್ಥಿತಿ' ಹೆಸರಿನ ವರದಿಯನ್ನು ಆರ್‌ಬಿಐನ ಡೆಪ್ಯುಟಿ ಗವರ್ನರ್ ಮೈಕೇಲ್ ಪಾತ್ರ ಸೇರಿದಂತೆ ರಿಸರ್ವ್ ಬ್ಯಾಂಕ್ ಸಿಬ್ಬಂದಿ ಲೇಖನ ರೂಪದಲ್ಲಿ ಮಂಡಿಸಿದ್ದಾರೆ. ಈ ವರದಿಯಲ್ಲಿರುವುದು ಆರ್‌ಬಿಐನ ಅಧಿಕೃತ ಅಭಿಪ್ರಾಯವಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ಹಣದುಬ್ಬರ ಶೇ. 6ಕ್ಕಿಂತ ಹೆಚ್ಚಿರಬಾರದೆಂದು ಆರ್‌ಬಿಐ ಗುರಿ ನಿಶ್ಚಯಿಸಿತ್ತು. ಅದರೆ, ಸತತ ಹಲವು ತಿಂಗಳು ಹಣದುಬ್ಬರ ಈ ಮಿತಿ ಮೀರಿ ಹೋಗಿದೆ. ಹಣದುಬ್ಬರ ಗುರಿಯನ್ನು ಮುಟ್ಟಲು ವಿಫಲವಾಗಿರುವುದರ ಬಗ್ಗೆ ಸರಕಾರಕ್ಕೆ ಬರೆಯುವುದಾಗಿ ಆರ್‌ಬಿಐನ ಈ ರಿಪೋರ್ಟ್‌ನಲ್ಲಿ ಹೇಳಲಾಗಿದೆ. ಮಾನಿಟರಿ ಪಾಲಿಸಿ ಕಮಿಟಿಯ ಮುಂದಿನ ಸಭೆಯಲ್ಲಿ ಈ ನಿರ್ಧಾರ ಆಗಲಿದೆ.

ಹಣದುಬ್ಬರ ಕಡಿಮೆ ಆಗುತ್ತಿಲ್ಲದೇ ಇರುವುದು ಆರ್‌ಬಿಐನ ಚಿಂತೆಯಾಗಿದೆ. ಒಂದು ವೇಳೆ ಹಣದುಬ್ಬರವನ್ನು ಕಡಿಮೆ ಮಾಡಲು ಸಾಧ್ಯವಾದರೆ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಲ್ಲಿ ಭಾರತವೂ ನಿಶ್ಚಿತವಾಗಿ ಇರಲಿದೆ ಎಂದು ಅದು ವಿಶ್ವಾಸದಲ್ಲಿದೆ. ಎಂಪಿಸಿಯ ಮುಂದಿನ ಸಭೆ ಬಳಿಕ ಆರ್‌ಬಿಐ ಹಣದುಬ್ಬರದ ಗುರಿಯನ್ನು ಶೇ. 2-4ಕ್ಕೆ ನಿಗದಿಪಡಿಸುವ ನಿರ್ಧಾರ ಮಾಡುವ ಸಾಧ್ಯತೆ ಇದೆ.
ಸೆಪ್ಟೆಂಬರ್ 28-30ರಂದು ಆರ್‌ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆ ನಡೆದಿತ್ತು. ಈ ಸಭೆಯ ವಿವರವನ್ನು (ಮಿನುಟ್ಸ್ ಆಫ್ ಮೀಟಿಂಗ್) ಆರ್‌ಬಿಐ ಕಳೆದ ಶುಕ್ರವಾರ ಬಿಡುಗಡೆ ಮಾಡಿತ್ತು. ಆರ್‌ಬಿಐನ ಮುಂದಿನ ಹೆಜ್ಜೆ ಬಗ್ಗೆ ಸಮಿತಿಯ ಸದಸ್ಯರೊಳಗೆ ಅಭಿಪ್ರಾಯಭೇದ ಏರ್ಪಟ್ಟಿರುವುದು ತಿಳಿದುಬಂದಿದೆ. ಇದರ ಬೆನ್ನಲ್ಲೇ ನಿನ್ನೆ ಸೋಮವಾರ ಆರ್‌ಬಿಐನ ಸಿಬ್ಬಂದಿಯಿಂದ ಆರ್ಥಿಕತೆಯ ಪರಿಸ್ಥಿತಿ ಬಗ್ಗೆ ಲೇಖನ ಪ್ರಕಟವಾಗಿದೆ.

ಇದರ ಪ್ರಕಾರ ಹಣದುಬ್ಬರ ಮುಂದಿನ ದಿನಗಳಲ್ಲಿ ತುಸು ಇಳಿಯುವ ನಿರೀಕ್ಷೆ ಇದೆ. ಸೆಪ್ಟೆಂಬರ್ ತಿಂಗಳಲ್ಲಿ ರೀಟೇಲ್ ಇನ್‌ಫ್ಲೇಶನ್ ಶೇ. 7.41ಕ್ಕೆ ಏರಿತ್ತು. ಆದರೆ, ಆಹಾರ, ಪಾನೀಯ ಕ್ಷೇತ್ರ ಉತ್ತಮವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಹಣದುಬ್ಬರ ಕಡಿಮೆಗೊಳ್ಳುವ ನಿರೀಕ್ಷೆ ಇದೆ ಎಂಬುದು ಆರ್‌ಬಿಐನ ಅಂದಾಜು.
ವಿಶ್ವದೆಲ್ಲೆಡೆ ಬಡ್ಡಿದರ ಏರಿಕೆ ಇತ್ಯಾದಿ ಕಟ್ಟುನಿಟ್ಟಿನ ಹಣಕಾಸು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಜಾಗತಿಕವಾಗಿ ಆರ್ಥಿಕತೆಯ ವೇಗ ಮಂದಗತಿಯಲ್ಲಿದೆ. ಹಣಕಾಸು ಮಾರುಕಟ್ಟೆಗಳು ದುರ್ಬಲಗೊಂಡಿವೆ. ಬಹಳ ಅಪಾಯ ಎನಿಸುವ ಹೂಡಿಕೆಗಳಿಂದ ಬಂಡವಾಳ ಹಿಂಪಡೆಯಲಾಗುತ್ತಿದೆ. ಇದರಿಂದ ಜಾಗತಿಕವಾಗಿ ಆರ್ಥಿಕ ಸ್ಥಿತಿ ಅನಿಶ್ಚಿತವಾಗಿದೆ ಎಂಬುದು ಆರ್‌ಬಿಐನ 'ಸ್ಟೇಟ್ ಆಫ್ ದಿ ಎಕನಾಮಿ' ರಿಪೋರ್ಟ್‌ನಲ್ಲಿರುವ ಅನಿಸಿಕೆ. ಆದರೆ, ಭಾರತದಲ್ಲಿ ಆರ್ಥಿಕ ಚಟುವಟಿಕೆ ಸಕಾರಾತ್ಮಕವಾಗಿದೆ ಎಂಬುದೂ ಆರ್‌ಬಿಐ ಅಧಿಕಾರಿಗಳ ಅಭಿಪ್ರಾಯ.
2023ರ ಹಣಕಾಸು ವರ್ಷದಲ್ಲಿ ಹಣದುಬ್ಬರ ದರವು ಸರಾಸರಿ ಶೇ. 6.7ರಷ್ಟು ಇರಬಹುದು ಎಂಬುದು ಆರ್‌ಬಿಐನ ನಿರೀಕ್ಷೆ. 2024 ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಹಣದುಬ್ಬರ ಶೇ. 5ಕ್ಕೆ ಇಳಿಯಬಹುದು ಎಂದೂ ಅದು ನಿರೀಕ್ಷಿಸಿದೆ. ಈ ಹಿನ್ನೆಲೆಯಲ್ಲಿ ಹಣದುಬ್ಬರವನ್ನು ಎರಡು ವರ್ಷದೊಳಗೆ ಶೇ. 4ಕ್ಕೆ ತರುವ ಅಸಾಧ್ಯವಲ್ಲದ ಗುರಿಯನ್ನು ಆರ್‌ಬಿಐ ಇಟ್ಟುಕೊಳ್ಳುವ ಸಾಧ್ಯತೆ ಇದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ



Click it and Unblock the Notifications