ಕರ್ನಾಟಕ ಮೂಲದ ಈ ಬ್ಯಾಂಕ್‌ ಮೇಲೆ ಆರ್‌ಬಿಐ ನಿಷೇಧ: 1,000 ರೂ. ವಿತ್‌ಡ್ರಾ ಮಿತಿ

ಕರ್ನಾಟಕ ಮೂಲದ ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ ಹೊಸ ಸಾಲ ನೀಡುವುದನ್ನು ಅಥವಾ ಠೇವಣಿಗಳನ್ನು ಸ್ವೀಕರಿಸುವುದನ್ನು ಆರ್‌ಬಿಐ ನಿರ್ಬಂಧಿಸಿದೆ. ಆರು ತಿಂಗಳ ಅವಧಿಗೆ ಗ್ರಾಹಕರು ತಮ್ಮ ಉಳಿತಾಯ ಖಾತೆಯಿಂದ 1,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಶುಕ್ರವಾರ ತಿಳಿಸಿದೆ.

ಜೊತೆಗೆ ಬ್ಯಾಂಕ್ ಆರ್‌ಬಿಐ ಪೂರ್ವ ಅನುಮತಿಯಿಲ್ಲದೆ ಹೊಸ ಹೂಡಿಕೆ ಮಾಡಬಾರದು ಅಥವಾ ಯಾವುದೇ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬಾರದು ಎಂದು ನಿಷೇಧ ಹೇರಿದೆ. ತನಿಖೆಯ ಉದ್ದೇಶಕ್ಕಾಗಿ ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅನ್ನು ನಿಷೇಧಿಸಲಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಆದರೆ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಲಾಗಿಲ್ಲ.

RBI ಈ ಬ್ಯಾಂಕ್‌ ಮೇಲೆ ನಿಷೇಧ ಹೇರಿದೆ: 1,000 ರೂ. ವಿತ್‌ಡ್ರಾ ಮಿತಿ

ಇನ್ನು ಬ್ಯಾಂಕ್‌ನ ಗ್ರಾಹಕರ ಹಣವು ಈಗ ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಆದರೆ ಅವರು ಸ್ವಂತವಾಗಿ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಯಾವುದೇ ವದಂತಿಗಳನ್ನು ನಿರ್ಲಕ್ಷಿಸುವಂತೆ ಆರ್‌ಬಿಐ ಬ್ಯಾಂಕಿನ ಗ್ರಾಹಕರಿಗೆ ಮನವಿ ಮಾಡಿದೆ.

ಗ್ರಾಹಕರು ತಮ್ಮ ಉಳಿತಾಯ ಖಾತೆಯಿಂದ 1,000 ರೂಪಾಯಿಗಿಂತ ಹೆಚ್ಚು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಬ್ಯಾಂಕಿನ ಪ್ರಸ್ತುತ ದ್ರವ್ಯತೆ ಸ್ಥಾನವನ್ನು ಗಮನಿಸಿದರೆ, ಎಲ್ಲಾ ಉಳಿತಾಯ ಖಾತೆಗಳು ಅಥವಾ ಚಾಲ್ತಿ ಖಾತೆಗಳಿಂದ 1,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಠೇವಣಿದಾರರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+